ಎಸ್‌ಐಆರ್ ಅಕ್ರಮ ವಿರೋಧಿಸಿ ಉಡುಪಿಯಲ್ಲಿ ತಿರಂಗ ನಡಿಗೆ, ಪ್ರತಿಭಟನೆ

KannadaprabhaNewsNetwork |  
Published : Oct 24, 2026, 02:45 AM IST
ಎಸ್‌ಐಆರ್ ಅಕ್ರಮಗಳ ವಿರುದ್ಧ ಪ್ರತಿಭಟನೆಯಲ್ಲಿ ಭವ್ಯ ನರಸಿಂಹಮೂರ್ತಿ ಮಾತನಾಡಿದರು | Kannada Prabha

ಸಾರಾಂಶ

ನಮ್ಮ ದೇಶವನ್ನು ಬ್ರಿಟಿಷರು ಆಳುವಾಗ ಕೇವಲ ಶ್ರೀಮಂತರಿಗೆ, ಪುರುಷರಿಗೆ ಹಾಗೂ ಬಲಾಢ್ಯರಿಗೆ ಮಾತ್ರ ಮತ ಹಾಕುವ ಹಕ್ಕಿತ್ತು, ಬಡವರಿಗೆ, ಮಹಿಳೆಯರಿಗೆ, ದುರ್ಬಲರಿಗೆ ಮತ ಹಾಕುವ ಹಕ್ಕಿರಲಿಲ್ಲ, ಪ್ರಧಾನಿ ನರೇಂದ್ರ ಮೋದಿ ಮತ್ತವರ ಸರ್ಕಾರ ಇಂದು ಬ್ರಿಟೀಷರ ಮಾರ್ಗವನ್ನೇ ಅನುಸರಿಸುತಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತೆ ಭವ್ಯ ನರಸಿಂಹಮೂರ್ತಿ ಹೇಳಿದರು.

ಉಡುಪಿ : ನಮ್ಮ ದೇಶವನ್ನು ಬ್ರಿಟಿಷರು ಆಳುವಾಗ ಕೇವಲ ಶ್ರೀಮಂತರಿಗೆ, ಪುರುಷರಿಗೆ ಹಾಗೂ ಬಲಾಢ್ಯರಿಗೆ ಮಾತ್ರ ಮತ ಹಾಕುವ ಹಕ್ಕಿತ್ತು, ಬಡವರಿಗೆ, ಮಹಿಳೆಯರಿಗೆ, ದುರ್ಬಲರಿಗೆ ಮತ ಹಾಕುವ ಹಕ್ಕಿರಲಿಲ್ಲ, ಪ್ರಧಾನಿ ನರೇಂದ್ರ ಮೋದಿ ಮತ್ತವರ ಸರ್ಕಾರ ಇಂದು ಬ್ರಿಟೀಷರ ಮಾರ್ಗವನ್ನೇ ಅನುಸರಿಸುತಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತೆ ಭವ್ಯ ನರಸಿಂಹಮೂರ್ತಿ ಹೇಳಿದರು.ಶುಕ್ರವಾರ ಇಲ್ಲಿನ ಸಹಬಾಳ್ವೆ ಮತ್ತು ಸಹಭಾಗಿ ಸಂಘಟನೆಗಳ ವತಿಯಿಂದ, ಎಸ್‌ಐಆರ್ ನಲ್ಲಾಗುತ್ತಿರುವ ಅಕ್ರಮಗಳ ವಿರೋಧಿಸಿ ಉಡುಪಿಯಲ್ಲಿ ನಡೆದ ತಿರಂಗ ನಡಿಗೆ, ಪ್ರತಿಭಟನೆ - ''''''''ಉಡುಪಿಯೂ ಜಂತರ್‌ಮಂತರ್‌ ನ್ನು ಉದ್ದೇಶಿಸಿ ಮಾತನಾಡಿದರು.

ಇಂದು ಆಡಳಿತ ಪಕ್ಷ ಬಿಜೆಪಿ ವಿರೋಧಪಕ್ಷಗಳನ್ನು ಕಡೆಗಣಿಸಿ, ತನ್ನ ಬಹುಮತದಿಂದ ಚುನಾವಣಾ ಆಯುಕ್ತರನ್ನು ನೇಮಕ ಮಾಡುತ್ತಿದೆ. ಇಂತಹ ಚುನಾವಣಾ ಆಯೋಗದಿಂದ ಪಾರದರ್ಶಕತೆ ಹೇಗೆ ಸಾಧ್ಯ ಎಂದ ಅವರು ಬಿಜೆಪಿ ಇಡಿ, ಐಟಿ ಬಳಸಿ, ಕುದುರೆ ವ್ಯಾಪಾರ ನಡೆಸಿ ಮೂಲಕ ಅಧಿಕಾರಕ್ಕೆ ಬರುತಿದ್ದಾರೆ ಎಂದು ಆರೋಪಿಸಿದರು.

ಮಾಜಿ ಸಚಿವರು ವಿನಯ ಕುಮಾರ್ ಸೊರಕೆ, ಸುಂದರ್ ಮಾಸ್ತರ್, ಯಾಸೀನ್ ಮಲ್ಪೆ ಸಭೆಯನ್ನುದ್ದೇಶಿಸಿ ಮಾತನಾಡಿದರು. ಪ್ರೊ.ಫಣಿರಾಜ್ ಪ್ರಸ್ತಾವಿಕ ಭಾಷಣ ಮಾಡಿದರು. ಅಮೃತ್ ಶೆಣೈ ಸ್ವಾಗತಿಸಿದರು. ಮೇಲ್ವಿನ್ ಧನ್ಯವಾದ ಸಲ್ಲಿಸಿದರು.

ಇತಹ ಸಹಭಾಗಿ ಸಂಘಟನೆಗಳ ಇದ್ರಿಸ್ ಹೂಡೆ, ಮುಹಮ್ಮದ್ ಅಶ್ರಫ್, ಮುಹಮ್ಮದ್ ಮೌಲ, ಶ್ಯಾಮ್‌ರಾಜ್ ಬಿರ್ತಿ, ಗಣೇಶ್ ನೇರ್ಗಿ, ರಮೇಶ್ ಕಾಂಚನ್, ಜಯಪ್ರಕಾಶ್ ಹೆಗಡೆ, ಫಾ.ವಿಲಿಯಂ ಮಾರ್ಟಿಸ್, ಪ್ರಶಾಂತ್ ಜತ್ತನ್ನ, ಸುರೇಶ್ ಕಲ್ಲಾಗರ್, ಅಬ್ದುಲ್ ಅಝೀಜ್ ಉದ್ಯಾವರ, ಅಫ್ವಾನ್ ಬಿ ಹೂಡೆ, ನಿಸಾರ್ ಉಡುಪಿ ಮತ್ತಿತರರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಾಡಿ ಇಗ್ಗುತ್ತಪ್ಪ ಸನ್ನಿಧಿ: 27ರಂದು ‘ಪತ್ತಾಲೋಧಿ’ ಆರಾಧನೆ
ಡಾ.ಹೆಗ್ಗಡೆ ಪಟ್ಟಾಭಿಷೇಕ 59ನೇ ವರ್ಧಂತಿ ಇಂದು