ಉಡುಪಿ ಪೂರ್ಣ ಪ್ರಜ್ಞಾ ಕಾಲೇಜಿನಲ್ಲಿ ಎನ್ಎಸ್ಎಸ್ ಫೆಸ್ಟ್

KannadaprabhaNewsNetwork |  
Published : Oct 24, 2026, 02:45 AM IST
23ಎನ್‌ಎಸ್‌ಎಸ್‌ | Kannada Prabha

ಸಾರಾಂಶ

ಸಮರ್ಥ ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಲು ರಾಷ್ಟ್ರೀಯ ಸೇವಾ ಯೋಜನೆ ಒಂದು ವೇದಿಕೆ ಎಂದು ತೆಂಕನಿಡಿಯೂರು ಸರ್ಕಾರಿ ಕಾಲೇಜಿನ ಎನ್. ಎಸ್. ಎಸ್ ಅಧಿಕಾರಿ ಬಾಲರಾಜ ಹೇಳಿದರು.

ಉಡುಪಿ: ಸಮರ್ಥ ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಲು ರಾಷ್ಟ್ರೀಯ ಸೇವಾ ಯೋಜನೆ ಒಂದು ವೇದಿಕೆ ಎಂದು ತೆಂಕನಿಡಿಯೂರು ಸರ್ಕಾರಿ ಕಾಲೇಜಿನ ಎನ್. ಎಸ್. ಎಸ್ ಅಧಿಕಾರಿ ಬಾಲರಾಜ ಹೇಳಿದರು.

ಪೂರ್ಣಪ್ರಜ್ಞ ಕಾಲೇಜಿನಲ್ಲಿ ಮಂಗಳೂರು ಮತ್ತು ಉಡುಪಿ ವಲಯದ ರಾಷ್ಟ್ರೀಯ ಸೇವಾ ಯೋಜನೆಯ ವಿದ್ಯಾರ್ಥಿಗಳ ಪ್ರತಿಭಾ ಉತ್ಸವದಲ್ಲಿ ಮಾತನಾಡಿದರು.

ಕಾಲೇಜಿನ ಪ್ರಾಂಶುಪಾಲರಾದ ಡಾ. ರಾಮು ಎಲ್. ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕವು ಮಕ್ಕಳ ಪ್ರತಿಭೆಯನ್ನು ಹೊರಹಾಕಲು ವೇದಿಕೆಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು. ಸಭೆಯ ಅಧ್ಯಕ್ಷತೆಯನ್ನು ಪೂರ್ಣಪ್ರಜ್ಞ ಕಾಲೇಜು ಆಡಳಿತ ಮಂಡಳಿಯ ಕೋಶಾಧಿಕಾರಿ ಸಿಎ ಪ್ರಶಾಂತ್ ಹೊಳ್ಳ ವಹಿಸಿದ್ದು, ರಾಷ್ಟ್ರೀಯ ಸೇವಾ ಯೋಜನೆಯ ಸೇವೆ ಸಮಾಜಕ್ಕೆ ನಿಜಕ್ಕೂ ಆದರ್ಶ ಪ್ರಾಯವಾಗಿದೆ ಎಂದು ಹೇಳಿದರು.

ಸಮಾರಂಭದಲ್ಲಿ ಎನ್.ಎಸ್. ಎಸ್ ಅಧಿಕಾರಿಗಳಾದ ಡಾ. ನಾಗರಾಜ ಜಿ.ಪಿ, ಸುಪರ್ಣ, ಸಹಾಯಕ ಎನ್. ಎಸ್. ಎಸ್ ಅಧಿಕಾರಿಗಳಾದ ಡಾ. ವಿನೋದ್ ಕುಮಾರ್, ಸ್ವಾತಿ, ವಿದ್ಯಾರ್ಥಿ ನಾಯಕರಾದ ದೀಪ್ತಿ, ಶ್ರೀತೇಶ್ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಾಡಿ ಇಗ್ಗುತ್ತಪ್ಪ ಸನ್ನಿಧಿ: 27ರಂದು ‘ಪತ್ತಾಲೋಧಿ’ ಆರಾಧನೆ
ಡಾ.ಹೆಗ್ಗಡೆ ಪಟ್ಟಾಭಿಷೇಕ 59ನೇ ವರ್ಧಂತಿ ಇಂದು