ರಾಜ್ಯದ ಮೊದಲ ಡಿಜಿ ನೋಂದಣಿ ವ್ಯವಸ್ಥೆ ಸರ್ವರ್‌ ಸಮಸ್ಯೆಯಿಂದ ಭಾರೀ ಪ್ರಾಬ್ಲಮ್‌

KannadaprabhaNewsNetwork |  
Published : Jul 09, 2026, 12:30 AM IST
ಚಾಮರಾಜನಗರದಲ್ಲಿ ಕಾಗದರಹಿತ ಡಿಜಿಟಲ್ ನೋಂದಣಿಗೆ ಸರ್ವರ್ ಸಮಸ್ಯೆ | Kannada Prabha

ಸಾರಾಂಶ

ರಾಜ್ಯ ಸರ್ಕಾರದ ಕಾವೇರಿ ತಂತ್ರಾಂಶದ ಮೂಲಕ ಜಾರಿಗೆ ತಂದಿರುವ ಕಾಗದರಹಿತ ಡಿಜಿಟಲ್ ನೋಂದಣಿ ವ್ಯವಸ್ಥೆಯಲ್ಲಿ ಲೋಪವಿದ್ದು, ಆಗಾಗ ಸರ್ವರ್‌ ಸಮಸ್ಯೆಯಾಗುತ್ತಿದ್ದು, ಬುಧವಾರ ಕೂಡ ಸರ್ವರ್‌ ಇಲ್ಲದ ರೈತರು, ಪತ್ರಬರಹಗಾರರು ದಿನಗಟ್ಟಲೆ ಕಾದು ಹೈರಾಗಿದ್ದು, ಸರ್ಕಾರ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದರು.

ಸರ್ವರ್‌ ಸಮಸ್ಯೆ ಮರುಕಳಿಸುತ್ತಿರುವುದಕ್ಕೆ ಬಿಜೆಪಿ ಕೆಂಡಾಮಂಡಲ, ತರಾಟೆ

ಬ್ಯಾಂಕ್‌ಗೆ ದುಡ್ಡು ಕಟ್ಟಿ 15 ದಿನವಾದರೂ ಸಮಸ್ಯೆಯಿಂದ ನೋಂದಣಿಯಾಗ್ತಿಲ್ಲ

ಕನ್ನಡಪ್ರಭ ವಾರ್ತೆ ಚಾಮರಾಜನಗರ

ರಾಜ್ಯ ಸರ್ಕಾರದ ಕಾವೇರಿ ತಂತ್ರಾಂಶದ ಮೂಲಕ ಜಾರಿಗೆ ತಂದಿರುವ ಕಾಗದರಹಿತ ಡಿಜಿಟಲ್ ನೋಂದಣಿ ವ್ಯವಸ್ಥೆಯಲ್ಲಿ ಲೋಪವಿದ್ದು, ಆಗಾಗ ಸರ್ವರ್‌ ಸಮಸ್ಯೆಯಾಗುತ್ತಿದ್ದು, ಬುಧವಾರ ಕೂಡ ಸರ್ವರ್‌ ಇಲ್ಲದ ರೈತರು, ಪತ್ರಬರಹಗಾರರು ದಿನಗಟ್ಟಲೆ ಕಾದು ಹೈರಾಗಿದ್ದು, ಸರ್ಕಾರ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದರು.

ನಗರದ ಉಪನೋಂದಣಿ ಮತ್ತು ವಿವಾಹ ನೋಂದಣಾಧಿಕಾರಿ ಕಚೇರಿಯಲ್ಲಿ ಸರ್ವರ್‌ ಇಲ್ಲದೆ ಕ್ರಯ ಆಗುತ್ತಿಲ್ಲ. ಕ್ರಯ, ಮಾಡಿಸಲು, ಜಮೀನು ಬರೆಯಿಸಿಕೊಳ್ಳಲು ಬಂದ ರೈತರು ಬೆಳಗ್ಗೆಯಿಂದ ಮಧ್ಯಾಹ್ನದವರೆಗೂ ಕಾದು ಕುಣಿತು ಹೈರಾಗಿದ್ದು, ಸರ್ಕಾರ ವಿರುದ್ಧ ಹರಿಹಾಯ್ದರು.

ರೈತ ಮೇಗಲಹುಂಡಿ ಶಾಂತರಾಜು ಮಾತನಾಡಿ, ಬ್ಯಾಂಕ್‌ಗೆ 1.5 ಲಕ್ಷ ಹಣ ಕಟ್ಟಿ 15 ದಿನಗಳಾಗಿದ್ದು, ಬ್ಯಾಂಕ್‌ನವರು ತೀರುವಳಿ ಮಾಡಿಸಿಕೊಂಡು ಬನ್ನಿ ಎಂದು ಹೇಳಿದ್ದಾರೆ. ಇಲ್ಲಿ ನೋಡಿದರೆ ಒಂದು ವಾರದಿಂದಲ್ಲೂ ನೋಂದಣಿ ಆಗುತ್ತಿಲ್ಲ. ಇಲ್ಲಿ ಯಾವ ಕೆಲಸ ಆಗುತ್ತಿಲ್ಲ. ನನ್ನ ಆರೋಗ್ಯದಲ್ಲಿ ಹೆಚ್ಚು ಕಡಿಮೆ ಆದರೆ ಏನು ಮಾಡುವುದೆಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

ಬಿಜೆಪಿ ಯುವ ಮೋರ್ಚಾದ ಜಿಲ್ಲಾಧ್ಯಕ್ಷ ಸೂರ್ಯ ಬಾಲರಾಜು ಮಾತನಾಡಿ, ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ ನೋಂದಣಿಯಾಗುವ ಪತ್ರಗಳನ್ನು ಸರ್ಕಾರ ಕಾವೇರಿ- 2, ತಂತ್ರಾಂಶ ಜಾರಿಗೊಳಿಸಿದ್ದು, ರಾಜ್ಯದಲ್ಲೇ ಪ್ರಥಮವಾಗಿ ಚಾಮರಾಜನಗರದಲ್ಲಿ ಕಾಗದರಹಿತ ನೋಂದಣಿಗೆ ಚಾಲನೆ ನೀಡಿದರು. ಇದನ್ನು ಜಿಲ್ಲೆಯ ಪತ್ರ ಬರಹಗಾರರು, ಸಾರ್ವಜನಿಕರು, ರೈತರು ಸ್ವಾಗತಿಸಿದರು. ಕೆಲವು ದಿನಗಳವರೆಗೆ ನೋಂದಣಿ ನಡೆಯಿತು. ನಂತರ ದಿನಗಳಲ್ಲಿ ನೋಂದಣಿಗಳು ಆಗುತ್ತಿಲ್ಲ. ಇದರಿಂದ ಸಂಪೂರ್ಣವಾಗಿ ಜನತೆಗೆ ತೊಂದರೆ ಆಗಿದೆ ಎಂದು ಆರೋಪಿಸಿದರು.

ಸೋಮವಾರ ಬೆಳಿಗ್ಗೆಯಿಂದಲ್ಲೂ ಇಲ್ಲಿಯವರೆಗೂ ಒಂದು ಪತ್ರನೂ ನೋಂದಣಿ ಆಗಿಲ್ಲ. ನೋಂದಣಿಗಾಗಿ ರೈತರು ಕಚೇರಿಯಲ್ಲಿ ಬೆಳಿಗ್ಗೆಯಿಂದ ಕಾದುಕುಳಿತಿದ್ದಾರೆ. ಈ ರೀತಿ ಆದರೆ ಸರ್ಕಾರ ಜನತೆ ಯಾವ ಸೇವೆ ಕೊಡುತ್ತಿದ್ದೀರಿ ಎಂದು ಖಾರವಾಗಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ಚಾಮರಾಜನಗರದಲ್ಲಿ. ಏಕೆ ಪ್ರಥಮವಾಗಿ ಪ್ರಾರಂಭಿಸಿದ್ದೀರಿ? ಏನಾದರೂ ಸಮಸ್ಯೆಯಾದರೆ ಯಾರು ಏನು ಕೇಳುವುದಿಲ್ಲ ಎಂದು ಇಲ್ಲಿ ಆರಂಭಿಸಿದ್ದೀರಾ? ಮಂಡ್ಯ, ಹಾಸನ, ಮೈಸೂರು, ಬೆಂಗಳೂರಿನಲ್ಲೂ ಮಾಡಿದರೆ ಸರ್ಕಾರ ವಿರುದ್ಧ ಪ್ರತಿಭಟನೆ ಮಾಡುತ್ತಾರೋ ಎಂದು ಆ ಜಿಲ್ಲೆಗಳಲ್ಲಿ ಮಾಡಲಿಲ್ಲವೇ ಎಂದು ಸರ್ಕಾರ ವಿರುದ್ಧ ಕಿಡಿಕಾರಿದರು.

15 ದಿನಗಳಿಂದ ನೋಂದಣಿ ಮತ್ತು ಮುದ್ರಾಂಕ ಇಲಾಖೆ ರಾಜ್ಯಾಯುಕ್ತರಿಗೆ ಫೋನ್ ಮಾಡಿದರೆ ಪೋನ್ ತೆಗೆಯುತ್ತಿಲ್ಲ. ಅವರಿಗೆ ಸರ್ಕಾರ ಪೋನ್ ನಂಬರ್‌ ಕೊಟ್ಟಿರುವುದು ಏತಕ್ಕೆ? ಕಾಗದ ರಹಿತ ನೋಂದಣಿಗೆ ಚಾಲನೆ ಕೊಟ್ಟ ಮೇಲೆ ಎಷ್ಟು ದಿನ ಚಾಮರಾಜನಗರಕ್ಕೆ ಬಂದಿದ್ದೀರಾ? ಈ ಕಾರ್ಯಕ್ಕೆ 3-4 ತಂಡ ರಚನೆ ಮಾಡಿದ್ದೀರಿ. ಮೇಲಧಿಕಾರಿ ನೇಮಕ ಮಾಡಿದ್ದೀರಿ. ಯಾವ ಅಧಿಕಾರಿ ಎಷ್ಟು ದಿನ ಬಂದು ಸಮಸ್ಯೆ ಆಲಿಸಿದ್ದಾರೆ ಎಂದು ಪ್ರಶ್ನಿಸಿದರು. ಈ ಸಮಸ್ಯೆ ಇನ್ನೂ ಎಷ್ಟು ದಿನ. ನೀವು ಜಾರಿ ಮಾಡಿರುವ ಕಾವೇರಿ-2 ತಂತ್ರಾಂಶ ಲೋಪ ಸರಿಯಾಗುವ ತನಕ ಹಳೆ ಕಾವೇರಿ ತಂತ್ರಾಂಶದಲ್ಲಿ ನೋಂದಣಿ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.

--

8ಸಿಎಚ್ಎನ್‌11

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಹದೇಶ್ವರರು, ಮಂಟೇಸ್ವಾಮಿ, ನೀಲಗಾರರ ಪರಂಪರೆ ಉಳಿಸಿ-ಬೆಳೆಸಿ
ನಾಳೆ ಡಾ.ಜಿ.ಮಾದೇಗೌಡ ರಾಜ್ಯ ಮಟ್ಟದ ಸಮಾಜ ಸೇವಾ ಪ್ರಶಸ್ತಿ ಪ್ರದಾನ