ಕನ್ನಡಪ್ರಭ ವಾರ್ತೆ ಮಂಡ್ಯ
ಡಾ.ಜಿ.ಮಾದೇಗೌಡ ಪ್ರತಿಷ್ಠಾನದಿಂದ ನೀಡಲಾಗುವ 2026ನೇ ಸಾಲಿನ ಡಾ.ಜಿ.ಮಾದೇಗೌಡ ರಾಜ್ಯ ಮಟ್ಟದ ಸಮಾಜ ಸೇವಾ ಪ್ರಶಸ್ತಿಗೆ ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷ ಶರಣಪ್ಪ ಸಲಾದಪುರ ಹಾಗೂ ಸಾವಯವ ಕೃಷಿಕ ಪ್ರಶಸ್ತಿಗೆ ಪುಣ್ಯಭೂಮಿ ಸಂಸ್ಥೆ ಮುಖ್ಯಸ್ಥ ಡಾ.ವಿಜಯ್ ಅಂಗಡಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ನಂಜೇಗೌಡ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಗಾಂಧಿ ಭವನದಲ್ಲಿ ಜುಲೈ 10ರಂದು ಮಧ್ಯಾಹ್ನ ನಡೆಯುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಶಾಸಕ ಪಿ.ರವಿಕುಮಾರ್ ಪುರಸ್ಕೃತರಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಬೆಂಗಳೂರಿನ ಎಸ್‌ಜೆಆರ್ ಮಹಿಳಾ ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ಪ್ರೇಮ ಸಿದ್ದರಾಜು, ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ ಘನ ಉಪಸ್ಥಿತಿ ವಹಿಸುವರು ಎಂದರು.
ರೈತರ ಅಭಿವೃದ್ಧಿ, ಸಮಾಜಮುಖಿ ಕಾರ್ಯ, ನೈತಿಕ ರಾಜಕಾರಣ ಮತ್ತು ಜನಪರ ಸೇವೆಯ ಮೂಲಕ ಸಲ್ಲಿಸಿರುವ ಅಮೋಘ ಕೊಡುಗೆಯನ್ನು ಗೌರವಿಸಿ ಡಾ.ಜಿ.ಮಾದೇಗೌಡ ಪ್ರತಿಷ್ಠಾನದಿಂದ ರಾಜ್ಯ ಮಟ್ಟದ ಸಮಾಜ ಸೇವಾ ಪ್ರಶಸ್ತಿ ಮೊತ್ತ 25 ಸಾವಿರ ರು. ನಗದು ಬಹುಮಾನ ಹಾಗೂ ಪ್ರಶಸ್ತಿ ಫಲಕವನ್ನು ನೀಡಿ ಶರಣಪ್ಪ ಸಲಾದಪುರ ಆವರನ್ನು ಗೌರವಿಸಲಾಗುತ್ತಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಭಾರತೀ ಕಾಲೇಜಿನ ಪ್ರಾಂಶುಪಾಲ ಮಹದೇವಸ್ವಾಮಿ, ಪ್ರೊ.ಕೃಷ್ಣ, ಪ್ರೊ.ನಾಗರಾಜು ಇದ್ದರು. ಇಂದು ಎಸ್‌ಡಿಪಿಐ ಮೈಸೂರು ವಿಭಾಗೀಯ ನಾಯಕರ ಸಭೆಕನ್ನಡಪ್ರಭ ವಾರ್ತೆ ಮಂಡ್ಯಸೋಷಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಪಕ್ಷದ ಮೈಸೂರು ವಿಭಾಗೀಯ ನಾಯಕರ ಸಭೆಯನ್ನು ಜು.9ರಂದು ಮಂಡ್ಯ ನಗರದ ಹೊರವಲಯದಲ್ಲಿನ ಎ ಅಂಡ್ ಎ ಕನ್ವೆಂಷನ್ ಹಾಲ್‌ನಲ್ಲಿ ಆಯೋಜಿಸಲಾಗಿದೆ ಎಂದು ಪಕ್ಷದ ರಾಜ್ಯ ಖಜಾಂಚಿ ಅಹ್ಮದ್ ಖಾನ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷದ ಆಂತರಿಕ ಸಭೆ ಇದಾಗಿದೆ. ಮೈಸೂರು, ಮಂಡ್ಯ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಹಾಸನ, ಮಡಿಕೇರಿ, ಚಾಮರಾಜನಗರ ಹಾಗೂ ತುಮಕೂರು ಜಿಲ್ಲೆಗಳ ಒಟ್ಟು 1200 ಮಂದಿ ಪಕ್ಷದ ಪದಾಧಿಕಾರಿ ಮಟ್ಟದ ನಾಯಕರು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ ಎಂದರು.ಸಭೆಯಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಂ.ಕೆ.ಫೈಜಿ ಈ ವಿಭಾಗದ ಎಲ್ಲ ನಾಯಕರಿಗೆ ಮುಂಬರುವ ಚುನಾವಣೆಗೆ ಪೂರ್ವ ಸಿದ್ದತೆ, ಸಮಕಾಲಿನ ಬೆಳವಣಿಗೆ, ಶೋಷಿತ, ಅಲ್ಪಸಂಖ್ಯಾತ, ಹಿಂದುಳಿದ ವರ್ಗಗಳ ಸಮಸ್ಯೆಗಳನ್ನು ಅರ್ಥೈಸಿಕೊಂಡು ಅವುಗಳಿಗೆ ಸ್ಪಂಧನೆ ಕುರಿತಂತೆ ಚರ್ಚೆ ಮಾಡಿ ಹಲವು ನಿರ್ಧಾರಗಳನ್ನು ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.
ಸಭೆಯಲ್ಲಿ ರಾಜ್ಯಾಧ್ಯಕ್ಷ ಅಕ್ಬರ್ ಮುಜೀಬ್, ಉಪಾಧ್ಯಕ್ಷರಾದ ಸೀತಾರಾಂ ಕೊಹ್ಲಿವಾಲ, ಮಹಮದ್ ಶಫಿ, ರಾಜ್ಯ ಉಸ್ತುವಾರಿ ಮುಜಾಹಿರ್ ಪಾಷಾ, ನಾಯಕರಾದ ಅಂಗಡಿ ಚಂದ್ರು, ಅಕ್ರಮ್, ಅಸ್ಗರ್ ಅಹ್ಮದ್ ಸೇರಿದಂತೆ ಹಲವರು ಭಾಗವಹಿಸಿ ಪಕ್ಷದ ಬೆಳವಣಿಗೆಗೆ ಪೂರಕವಾದ ಶಾಂತಿ ಸಂದೇಶ ನೀಡುವರು ಎಂದು ಮಾಹಿತಿ ನೀಡಿದರು.ಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಮಹಮ್ಮದ್ ತಾಹೆರ್, ಮುಹ್ತಾಕ್ ಅಹಮದ್, ಅತೀಕ್ ಅಹಮದ್, ಮುಬಾರಕ್ ಹುಸೇನ್, ಅಸ್ಕರ್ ಅಹ್ಮದ್ ಇದ್ದರು.