ಮಕ್ಕಳ ಕೌಶಲ್ಯ ವೃದ್ಧಿಗೆ ಡಿಜಿಟಲ್ ಶಿಕ್ಷಣ ಅವಶ್ಯ

KannadaprabhaNewsNetwork |  
Published : Jan 28, 2026, 03:45 AM IST
ಸಿಂದಗಿ | Kannada Prabha

ಸಾರಾಂಶ

ಡಿಜಿಟಲ್‌ ಸ್ಮಾರ್ಟ್‌ ತರಗತಿಗಳು ಮಕ್ಕಳ ಭವಿಷ್ಯ ವೃದ್ಧಿಗೆ ತುಂಬಾ ಸಹಕಾರಿಯಾಗಿವೆ. ವಿದ್ಯಾರ್ಥಿಗಳು ಇದನ್ನು ಸದುಪಯೋಗ ಮಾಡಿಕೊಳ್ಳುವ ಮೂಲಕ ಇಂದಿನ ತಾಂತ್ರಿಕ ಯುಗಕ್ಕೆ ಹೊಂದಿಕೊಂಡು ಗುಣಮಟ್ಟದ ಶಿಕ್ಷಣ ಪಡೆದುಕೊಳ್ಳಬೇಕು ಎಂದು ಅಂಜುಮನ್ ಸಂಸ್ಥೆ ಪ್ರಧಾನ ಕಾರ್ಯದರ್ಶಿ ಎಸ್.ಎಂ.ಪಾಟೀಲ (ಗಣಿಹಾರ) ಹೇಳಿದರು.

ಕನ್ನಡಪ್ರಭ ವಾರ್ತೆ ಸಿಂದಗಿ

ಡಿಜಿಟಲ್‌ ಸ್ಮಾರ್ಟ್‌ ತರಗತಿಗಳು ಮಕ್ಕಳ ಭವಿಷ್ಯ ವೃದ್ಧಿಗೆ ತುಂಬಾ ಸಹಕಾರಿಯಾಗಿವೆ. ವಿದ್ಯಾರ್ಥಿಗಳು ಇದನ್ನು ಸದುಪಯೋಗ ಮಾಡಿಕೊಳ್ಳುವ ಮೂಲಕ ಇಂದಿನ ತಾಂತ್ರಿಕ ಯುಗಕ್ಕೆ ಹೊಂದಿಕೊಂಡು ಗುಣಮಟ್ಟದ ಶಿಕ್ಷಣ ಪಡೆದುಕೊಳ್ಳಬೇಕು ಎಂದು ಅಂಜುಮನ್ ಸಂಸ್ಥೆ ಪ್ರಧಾನ ಕಾರ್ಯದರ್ಶಿ ಎಸ್.ಎಂ.ಪಾಟೀಲ (ಗಣಿಹಾರ) ಹೇಳಿದರು.

ಪಟ್ಟಣದ ಅಂಜುಮನ್ ಐಟಿಐ ಕಾಲೇಜಿನಲ್ಲಿ ನಡೆದ ಡಿಜಿಟಲ್‌ ಸ್ಮಾರ್ಟ್ ಕ್ಲಾಸ್ ಹಾಗೂ ಸೇವಿಂಗ್ ಟೆಕ್ನಾಲಜಿ ಕೊಠಡಿಗಳ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಅಂಜುಮನ್ ಸಂಸ್ಥೆಯ ಅಂಗ ಸಂಸ್ಥೆಗಳಲ್ಲಿ ಒಂದಾದ ಐಟಿಐ ಕಾಲೇಜಿನಲ್ಲಿ ಗುಣಮಟ್ಟದ ಶಿಕ್ಷಣ ಸಿಗುವಂತಹ ವಾತಾವರಣ ನಿರ್ಮಾಣಮಾಡವ ನಿಟ್ಟಿನಲ್ಲಿ ಸಂಸ್ಥೆ ಶ್ರಮವಹಿಸಿದೆ. ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನ, ತಾಂತ್ರಿಕ ಕೌಶಲ್ಯಕ್ಕೆ ಪ್ರಸ್ತುತ ಡಿಜಿಟಲ್ ಶಿಕ್ಷಣ ತುಂಬಾ ಅವಶ್ಯವಾಗಿದೆ. ಈ ನಿಟ್ಟಿನಲ್ಲಿ ಕಂಪ್ಯೂಟರ್ ಲ್ಯಾಬ್, ಸ್ಮಾರ್ಟ್ ಕ್ಲಾಸ್ ಹಾಗೂ ಸೇವಿಂಗ್ ಟೆಕ್ನಾಲಜಿ ಸೇರಿದಂತೆ ಎಲ್ಲಾ ವೃತ್ತಿಗಳಿಗೆ ನೂತನ ಯಂತ್ರೋಪಕರಣಗಳ ಸೌಲಭ್ಯ ಒದಗಿಸಲಾಗಿದೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಂಡು ಒಳ್ಳೆಯ ಉದ್ಯೋಗ ಪಡೆದು ಪಾಲಕರ ಹಾಗೂ ಶಾಲೆಯ ಕೀರ್ತಿ ಹೆಚ್ಚಿಸಬೇಕು ಎಂದು ಹೇಳಿದರು.

ಪ್ರಾಚಾರ್ಯ ಝಡ್.ಐ.ಅಂಗಡಿ ಮಾತನಾಡಿ, ಇಂದಿನ ಆಧುನಿಕ ಯುಗದಲ್ಲಿ ಡಿಜಿಟಲ್‌ ಸ್ಮಾರ್ಟ್‌ ಕ್ಲಾಸ್‌ಗಳು ಮಕ್ಕಳ ಭವಿಷ್ಯಕ್ಕೆ ತುಂಬಾ ಸಹಕಾರಿಯಾಗಿವೆ. ಇದನ್ನು ಸಂಸ್ಥೆ ಆಡಳಿತ ಮಂಡಳಿಯವರು ವಿದ್ಯಾರ್ಥಿಗಳಿಗೆ ಡಿಜಿಟಲ್‌ ಸ್ಮಾರ್ಟ್‌ ಕ್ಲಾಸ್‌, ಕಂಪ್ಯೂಟರ್ ಲ್ಯಾಬ್ ಹಾಗೂ ಸೇವಿಂಗ್ ಟೆಕ್ನಾಲಜಿಗಳಿಗೆ ಸ್ಮಾರ್ಟ್ ಸ್ಪರ್ಶ ಒದಗಿಸಿರುವುದು ನಿಜಕ್ಕೂ ಶ್ಲಾಘನೀಯ ಎಂದರು.

ಐಟಿಐ ಕಾಲೇಜಿನ ಪ್ರಾಂಶುಪಾಲ ಝಡ.ಐ.ಅಂಗಡಿ ಹಾಗೂ ಆಡಳಿತ ಮಂಡಳಿ ನಿರ್ದೇಶಕರಾದ ಎ.ಐ.ಮುಲ್ಲಾ, ಮಹಿಬೂಬ್ ಹಸರಗುಂಡಗಿ, ನಗರಸಭೆ ನಾಮನಿರ್ದೇಶಿತ ಸದಸ್ಯರಾದ ರಹೀಂ ದುದನಿ, ತರಬೇತಿ ಅಧಿಕಾರಿ ಎಚ್.ಎ.ಪಠಾಣ, ಕಿರಿಯ ತರಬೇತಿ ಅಧಿಕಾರಿಗಳಾದ ಎಸ್.ಆರ್.ಕುಲಕರ್ಣಿ, ಎಸ್.ಜಿ. ಕುಂಬಾರ, ಐ.ಎಚ್.ಬಂಥನಾಳ, ವೈ.ಆರ್.ಪಂಚಾಳ, ಎಸ್.ಎಸ್.ಜನಾದ್ರಿ, ಆರ್.ಬಿ.ಶೆಟ್ಟಿ, ಮಧುಮತಿ ಕೋಮಾರ, ಎಸ್.ಎನ್.ಅವಟಿ, ಸಂತೋಷಕುಮಾರ, ಎಂ.ವ್ಹಿ.ಪಟ್ಟಣಶೆಟ್ಟಿ, ಕಚೇರಿ ಅಧೀಕ್ಷಕ ಅಲ್ತಾಫ್ ಅಂಗಡಿ, ಧರ್ಮೇಂದ್ರ ನಾರಾಯಣಕರ, ಎಸ್.ಆರ್.ರಾಠೋಡ ಸೇರಿ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಿ ರಾಮ್‌ ಜಿ ವಿರುದ್ಧ ಸಿಡಿದೆದ್ದ ಕಾಂಗ್ರೆಸ್‌ ಪಡೆ - ದುಡಿವ ಕೈಗಳ ಅನ್ನ ಕಸಿವ ಕಾಯ್ದೆ
ಕೇಂದ್ರ ಸರ್ಕಾರದ ಸಾಧನೆ ತಿಳಿ ಹೇಳಿ