ತರೀಕೆರೆ: ಡಿಜಿಟಲ್ ಬದುಕು ಅವಶ್ಯಕವೇ ಹೊರತು ಅನಿವಾರ್ಯವಲ್ಲ ಎಂದು ಪಟ್ಟಣದ ಗ್ಲೋಸಿ ಕಿಡ್ಸ್ ಸದ್ವಿದ್ಯಾ ಪಬ್ಲಿಕ್ ಶಾಲೆ ಪ್ರಾಂಶುಪಾಲರಾದ ಹರ್ಷಿಣಿ ಹೇಳಿದ್ದಾರೆ.
ನಂದಿ ಗ್ರಾಮದಲ್ಲಿ ಯೋಗ ಜಾಗೃತ ನಡಿಗೆ ಕಾರ್ಯಕ್ರಮ
ತರೀಕೆರೆ: ಡಿಜಿಟಲ್ ಬದುಕು ಅವಶ್ಯಕವೇ ಹೊರತು ಅನಿವಾರ್ಯವಲ್ಲ ಎಂದು ಪಟ್ಟಣದ ಗ್ಲೋಸಿ ಕಿಡ್ಸ್ ಸದ್ವಿದ್ಯಾ ಪಬ್ಲಿಕ್ ಶಾಲೆ ಪ್ರಾಂಶುಪಾಲರಾದ ಹರ್ಷಿಣಿ ಹೇಳಿದ್ದಾರೆ.
ಗ್ಲೋಸಿ ಕಿಡ್ಸ್ ಸದ್ವಿದ್ಯಾ ಪಬ್ಲಿಕ್ ಶಾಲೆಯಿಂದ ಸಮೀಪದ ನಂದಿ ಗ್ರಾಮದಲ್ಲಿ ಆಯೋಜಿಸಿದ್ದ ಯೋಗ ಜಾಗೃತ ನಡಿಗೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಹಳೆಯ ದಿನಗಳಿಗೆ ಹಿಂದಿರುಗಿ ಎಂಬ ಸಂದೇಶ ದೊಂದಿಗೆ ನಾವು ಪ್ರಕೃತಿಯೊಂದಿಗೆ ಬೆರೆಯಬೇಕು. ನಂದಿ ಗ್ರಾಮ ವಿಶೇಷ ವಾಗಿದ್ದು ಧರ್ಮ ಸರಳತೆ ಸಜ್ಜನಿಕೆ ಸಂಗಮ ಎಂದು ಹೇಳಿದರು.
ಖ್ಯಾತ ಬರಹಗಾರರಾದ ಮನಸುಳಿ ಮೋಹನ್ ಮಾತನಾಡಿ ಸಮಾಜದಿಂದ ಪಡೆದುದನ್ನು ಸಮಾಜಕ್ಕೆ ಹಿಂದಿರುಗಿ ಸಬೇಕು ಎಂಬುದು ನಮ್ಮ ಧ್ಯೇಯ ವಾಗಬೇಕು. ಶಿಸ್ತು ಬದುಕಿನ ಭಾಗವಾಗಬೇಕು ಎಂದರು.
ಶಾಲೆ ವಿದ್ಯಾರ್ಥಿಗಳು ಯೋಗಾಸನದ ವಿವಿಧ ಪ್ರಕಾರಗಳನ್ನು ರೂಪಕದ ಮೂಲಕ ಅಭಿನಯಿಸಿದರು. ಶಿಕ್ಷಕರಾದ ರಾಕೀಬ್, ಸಿದ್ದೇಶ್, ಅಕ್ಷಯ ನಂದಿ ಗ್ರಾಮಸ್ಥರು ಭಾಗವಹಿಸಿ ಮೆಚ್ಚುಗೆ ತಿಳಿಸಿದರು.
ಯೋಗ ಆರೋಗ್ಯದ ಮೂಲ ಮಂತ್ರ, ಧ್ಯಾನ ಆಧುನಿಕ ಸಮಸ್ಯೆಗಳಿಗೆ ಸುಲಭ ಪರಿಹಾರ ಮುಂತಾದ ಘೋಷಣೆ ಗಳೊಂದಿಗೆ ಮಕ್ಕಳು ನಂದಿ ಗ್ರಾಮದ ಬೀದಿಗಳಲ್ಲಿ ನಡಿಗೆಯೊಂದಿಗೆ ಉತ್ತಮ ಆರಂಭ ಮಾಡಿದರು. ಶಿಕ್ಷಕರಾದ ರಾಕಿಬ್, ಸಿದ್ದೇಶ್, ಅಕ್ಷಯ ನಂದಿ ಗ್ರಾಮಸ್ಥರು ಭಾಗವಹಿಸಿ ಮೆಚ್ಚುಗೆ ತಿಳಿಸಿದರು
ಗ್ಲೋಸಿ ಕಿಡ್ಸ್ ಸದ್ವಿದ್ಯಾ ಪಬ್ಲಿಕ್ ಶಾಲೆ ಅಧ್ಯಕ್ಷ ಟಿ.ಸಿ.ಕುಮಾರಸ್ವಾಮಿ ಉಪಸ್ಥಿತರಿದ್ದರು.
-
20ಕೆಟಿಆರ್.ಕ.4ಃ
ತರೀಕೆರೆ ಗ್ಲೋಸಿ ಕಿಡ್ಸ್ ಸದ್ವಿದ್ಯಾ ಪಬ್ಲಿಕ್ ಶಾಲೆಯಿಂದ ಸಮೀಪದ ನಂದಿ ಗ್ರಾಮದಲ್ಲಿ ಯೋಗ ಜಾಗೃತ ನಡಿಗೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.