ಅತಿಯಾದ ರಾಸಾಯನಿಕ ಬಳಕೆಯಿಂದ ಭೂಮಿಗೆ ಹಾನಿ: ಚೈತ್ರಶ್ರೀ ಸಲಹೆ

KannadaprabhaNewsNetwork |  
Published : Jun 23, 2026, 02:00 AM IST
 ನರಸಿಂಹರಾಜಪುರ ತಾಲೂಕಿನ ಸೀತೂರಿನಲ್ಲಿ ತಾಲೂಕು ಬಿಜೆಪಿ ಪಕ್ಷದಿಂದ ಹಮ್ಮಿಕೊಂಡಿದ್ದ ಕೃಷಿಯಲ್ಲಿ ಸಾವಯವ ಪದ್ದತಿ ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ಸೀತೂರು ಸಾವಯವ ಕೃಷಿಕ ಮದ್ವರಾಜ್  ರೈತರಿಗೆ ಜೀವಾಮೃತ ಪದ್ದತಿ ಬಗ್ಗೆ ವಿವರಿಸಿದರು. | Kannada Prabha

ಸಾರಾಂಶ

ನರಸಿಂಹರಾಜಪುರಅತಿಯಾದ ರಾಸಾಯನಿಕ ಬಳಕೆಯಿಂದ ಭೂಮಿ ಹಾಳಾಗುತ್ತಿದೆ ರೈತರು ಸಾವಯವ ಕೃಷಿ ಬಗ್ಗೆ ಹೆಚ್ಚು ಗಮನ ನೀಡಬೇಕು ಎಂದು ಜಿಲ್ಲಾ ಬಿಜೆಪಿ ಉಪಾಧ್ಯಕ್ಷೆ ಚೈತ್ರಶ್ರೀ ಸಲಹೆ ನೀಡಿದರು.

- ಬಿಜೆಪಿ ಪಕ್ಷದಿಂದ ಸೀತೂರಿನ ಸಾವಯವ ರೈತರ ಜಮೀನಿನಲ್ಲಿ ಸಾವಯವ ಕೃಷಿ ಪ್ರಾತ್ಯಕ್ಷಿಕೆ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಅತಿಯಾದ ರಾಸಾಯನಿಕ ಬಳಕೆಯಿಂದ ಭೂಮಿ ಹಾಳಾಗುತ್ತಿದೆ ರೈತರು ಸಾವಯವ ಕೃಷಿ ಬಗ್ಗೆ ಹೆಚ್ಚು ಗಮನ ನೀಡಬೇಕು ಎಂದು ಜಿಲ್ಲಾ ಬಿಜೆಪಿ ಉಪಾಧ್ಯಕ್ಷೆ ಚೈತ್ರಶ್ರೀ ಸಲಹೆ ನೀಡಿದರು.

ಗುರುವಾರ ತಾಲೂಕು ಬಿಜೆಪಿ ಮಂಡಲದಿಂದ ಸೀತೂರು ಸಾವಯವ ಕೃಷಿಕ ಮದ್ವರಾಜ್ ಅವರ ಕೃಷಿ ಭೂಮಿಯಲ್ಲಿ ಸಾವಯವ ಕೃಷಿ ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ರೈತರು ಸಾಂಪ್ರಾದಾಯಿಕ ಬೆಳೆಗಳಾದ ಅಡಕೆ, ಭತ್ತದ ಜೊತೆಗೆ ಮಿಶ್ರ ಬೆಳೆಯಬೇಕು. ಮೊದಲು ರೈತರು ಮಣ್ಣು ಪರೀಕ್ಷೆ ಮಾಡಿಸಿ ಅದರ ಆಧಾರದ ಮೇಲೆ ಗೊಬ್ಬರ ನೀಡಬೇಕು. ಕೃಷಿ ಜೊತೆಗೆ ಹಸು ಸಾಕಾಣಿಕೆ, ಅಣಬೆ ಕೃಷಿ, ತರಕಾರಿ ಬೆಳೆಗಳನ್ನು ಬೆಳೆಯಿರಿ. ಜಿಲ್ಲಾ ಪಂಚಾಯಿತಿಯಲ್ಲಿ ರೈತರಿಗೆ ತರಬೇತಿ ಕಾರ್ಯಕ್ರಮವಿದ್ದು ಇದನ್ನು ಉಪಯೋಗಿಸಿಕೊಳ್ಳಿ. ಸೋಲಾರ್ ಅಳವಡಿಸಿದರೆ ಕೇಂದ್ರ ಸರ್ಕಾರದಿಂದ ಶೇ.90 ರಷ್ಟು ರಿಯಾಯಾತಿ ಸಿಗಲಿದೆ.ನಾವು ರೈತರು ಎಂಬ ಕೀಳರಿಮೆ ಬಿಡಬೇಕು ಎಂದು ಸಲಹೆ ನೀಡಿದರು.

ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಅರುಣಕುಮಾರ್ ಮಾತನಾಡಿ, ದೇಶದಲ್ಲಿ ಅತಿ ಹೆಚ್ಚು ದಿನ ಪ್ರಧಾನಿಯಾದ ನರೇಂದ್ರ ಮೋದಿ ಯವರ ಆಶಯದಂತೆ ಪ್ರತಿ ತಾಲೂಕಿನಲ್ಲಿ ಬಿಜೆಪಿ ಪಕ್ಷದಿಂದ ಸಾವಯವ ಕೃಷಿ ಪದ್ಧತಿ ಮಾಡುತ್ತಿರುವ ಕೃಷಿಕರ ಜಮೀನಿನಲ್ಲಿ ಪ್ರಾತ್ಯಕ್ಷಿಕೆ ಹಮ್ಮಿಕೊಳ್ಳುತ್ತಿದ್ದೇವೆ.ಚಿಕ್ಕಮಗಳೂರು ಜಿಲ್ಲೆಯಲ್ಲಿ ಇದು ಪ್ರಥಮ ಕಾರ್ಯಕ್ರಮವಾಗಿದೆ ಎಂದರು.

ಸೀತೂರು ವಿ.ಎಸ್.ಎಸ್.ಎನ್. ಆಡಳಿತ ಮಂಡಳಿ ನಿರ್ದೇಶಕ ಯಡಗೆರೆ ಸುಬ್ರಮಣ್ಯ ಉದ್ಘಾಟಿಸಿ ಮಾತನಾಡಿ, ಕೇಂದ್ರ ಸರ್ಕಾರವು ರೈತರ ಜೀವನ ಉತ್ತಮವಾಗಿರಬೇಕು ಹಾಗೂ ದೇಶದ ಜನರು ಆರೋಗ್ಯವಾಗಿರಬೇಕು ಎಂಬ ಸದುದ್ದೇಶದಿಂದ ಮೇಕ್ ಇನ್ ಇಂಡಿಯಾ ಸೇರಿದಂತೆ ಹಲವಾರು ಯೋಜನೆಗಳು ಜಾರಿಗೆ ತಂದಿದೆ.ರೈತರು ಹಂತ,ಹಂತವಾಗಿ ರಾಸಾಯನಿಕ ಗೊಬ್ಬರ ಕಡಿಮೆ ಮಾಡಿ ಸಾವಯವ ಕೃಷಿ ಮಾಡಬೇಕಾಗಿದೆ ಎಂದರು.

ಸಭೆಯಲ್ಲಿ ಸೀತೂರಿನ ಸಾವಯವ ಕೃಷಿಕ ಮದ್ವರಾಜ್, ತಾಲೂಕು ಬಿಜೆಪಿ ಉಪಾಧ್ಯಕ್ಷರಾದ ಎಚ್.ಇ.ದಿವಾಕರ, ಜಗದೀಶ್, ತಾಲೂಕು ಪ್ರಧಾನ ಕಾರ್ಯದರ್ಶಿ ಕೆಸವಿ ಮಂಜುನಾಥ್, ಹೋಬಳಿ ಅಧ್ಯಕ್ಷ ಎಚ್.ಡಿ.ಲೋಕೇಶ್, ತಾಲೂಕು ರೈತ ಮೋರ್ಚದ ಪ್ರಧಾನ ಕಾರ್ಯದರ್ಶಿ ಕಣಬೈಲು ರಾಮಣ್ಣ ಮತ್ತಿತರರು ಇದ್ದರು.

ನಂತರ ಸಾವಯವ ಕೃಷಿಕ ಮದ್ವರಾಜ್ ತಮ್ಮ ಜಮೀನಿನಲ್ಲಿ ಅಳವಡಿಸಿರುವ ಜೀವಾಮೃತ ಪದ್ಧತಿ ಬಗ್ಗೆ ಪ್ರಾತ್ಯಕ್ಷಿಕೆಯೊಂದಿಗೆ ರೈತರಿಗೆ ವಿವರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹುಲಿಗಿ ಕ್ರಾಸ್ ಮೇಲ್ಸೇತುವೆ ಲೋಕಾರ್ಪಣೆ
ಅಡವಿಟ್ಟ ಚಿನ್ನ ಕೇಳಿದ್ದಕ್ಕೆ ಗುಂಡಿನ ದಾಳಿ