ಡಿಜಿಟಲ್ ಸಾಕ್ಷರತೆಯಿಂದ ದೇಶ ಭ್ರಷ್ಟಾಚಾರ ಮುಕ್ತ: ಡಾ.ಶರತ್ ಅನಂತಮೂರ್ತಿ

KannadaprabhaNewsNetwork | Published : Apr 18, 2025 12:35 AM

ಸಾರಾಂಶ

ಕಡೂರು, ಪೇಪರ್ ಲೆಸ್ ವ್ಯವಹಾರದ ಡಿಜಿಟಲ್ ಸಾಕ್ಷರತೆಯಿಂದ ದೇಶದಲ್ಲಿರುವ ಭ್ರಷ್ಟಾಚಾರವನ್ನು ಮುಕ್ತಗೊಳಿಸುವ ಉದ್ದೇಶ ಸರ್ಕಾರದ್ದಾಗಿದೆ ಎಂದು ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಡಾ.ಶರತ್ ಅನಂತಮೂರ್ತಿ ಹೇಳಿದರು.

ಕಡೂರು ಸರ್ಕಾರಿ ಪದವಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಉದ್ಘಾಟನೆ

ಕನ್ನಡ ಪ್ರಭ ವಾರ್ತೆ, ಕಡೂರು

ಪೇಪರ್ ಲೆಸ್ ವ್ಯವಹಾರದ ಡಿಜಿಟಲ್ ಸಾಕ್ಷರತೆಯಿಂದ ದೇಶದಲ್ಲಿರುವ ಭ್ರಷ್ಟಾಚಾರವನ್ನು ಮುಕ್ತಗೊಳಿಸುವ ಉದ್ದೇಶ ಸರ್ಕಾರದ್ದಾಗಿದೆ ಎಂದು ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಡಾ.ಶರತ್ ಅನಂತಮೂರ್ತಿ ಹೇಳಿದರು.ಕಡೂರು ಸಮೀಪದ ಗೆದ್ಲೆಹಳ್ಳಿಯ ಕುವೆಂಪು ಸ್ನಾತಕೋತ್ತರ ಕೇಂದ್ರದಲ್ಲಿ ಕಡೂರು ಸರ್ಕಾರಿ ಪದವಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಉದ್ಘಾಟಿಸಿ ಮಾತನಾಡಿದರು. ದಿನನಿತ್ಯದ ಓದಿನ ಜೊತೆಯಲ್ಲಿ ಇಂತಹ ಶಿಬಿರಗಳಲ್ಲಿ ಭಾಗವಹಿಸು ವುದರಿಂದ ನಿಮ್ಮ ಜೀವನದಲ್ಲಿ ಪದೇ ಪದೇ ನೆನಪಾಗುವಂತಹ ದಿನಗಳಾಗುತ್ತವೆ. ಮುಖ್ಯವಾಗಿ ಪರಿಸರ ರಕ್ಷಣೆ ನಮ್ಮ ದಾಗಬೇಕು. ಆದರೆ ಪರೋಕ್ಷವಾಗಿ ನಾವುಗಳು ಪರಿಸರ ನಾಶಕ್ಕೆ ಕಾರಣವಾಗಿದ್ದೇವೆ. ನಮ್ಮ ಪರಿಸರವನ್ನು ನಾವು ಕಾಪಾಡಿಕೊಳ್ಳಲು ಕ್ರಮ ವಹಿಸಬೇಕು. ಇಂತಹ ಶಿಬಿರಗಳಿಂದ ನಿಮ್ಮಲ್ಲಿ ಪರಿಸರ ಪ್ರಜ್ಞೆ ಬೆಳೆದು ಸಾರ್ವಜನಿಕರಲ್ಲೂ ಸ್ವಚ್ಛತೆ ಬಗ್ಗೆ ಅರಿವು ಮೂಡಿಸುವ ಕಾರ್ಯವನ್ನು ಮಾಡಬೇಕಿದೆ ಎಂದರು . ಡಿಜಿಟಲ್ ಲಿಟ್ರಸಿ ವಿಚಾರದ ಬಗ್ಗೆ ಹೇಳುವುದಾದರೆ ಪೇಪರ್ ಲೆಸ್ ಬಿಸಿನೆಸ್. ಪ್ರಧಾನಿಯವರು ಈ ವರ್ಷದ ಒಳಗೆ ಭಾರತ ಡಿಜಿಟಲ್ ದೇಶ ಎಂಬ ಘೋಷಣೆಗೆ ಕಾಯುತ್ತಿದೆ ಎಂದು ಹೇಳಿದ್ದಾರೆ. ಕೇರಳದಲ್ಲಿ ಮಾತ್ರ ನೂರಕ್ಕೆ ನೂರು ಸಾಕ್ಷರತೆಯಿದ್ದು ಕರ್ನಾಟಕದಲ್ಲಿ ಇನ್ನೂ ಆಗಬೇಕಿದೆ. ಇಂದು ಅಕ್ಷರ ಕಲಿಯುವುದಕ್ಕಿಂತ ಡಿಜಿಟಲ್ ಎಂದರೆ ಮೊಬೈಲ್, ಕಂಪ್ಯೂಟರ್, ಎಟಿಎಂ ಮೂಲಕ ಜನರು ವ್ಯವಹಾರ ಕಲಿಸಲು ಆಗಬೇಕಿದೆ. ಹಾಗಾಗಿ ನಮ್ಮ ಮನೆಗಳಲ್ಲಿ ಹಿರಿಯರಿಗೆ ಡಿಜಿಟಲ್ ಲಿಟ್ರಸಿ ಕಲಿಸಿದಲ್ಲಿ ಪೇಪರ್ ಲೆಸ್ ವ್ಯವಹಾರದ ಮೂಲಕ ದೇಶದಲ್ಲಿರುವ ಭ್ರಷ್ಟಾಚಾರವನ್ನು ಮುಕ್ತಗೊಳಿಸುವ ಕ್ರಮ ಸರ್ಕಾರದ್ದಾಗಿದೆ. ಮಧ್ಯವರ್ತಿಗಳ ಹಾವಳಿ ನಿಯಂತ್ರಿಸಿ ಭ್ರಷ್ಟಾಚಾರ ಮುಕ್ತ ವ್ಯವಸ್ಥೆ ತರುವುದು ಇದರ ಪ್ರಮುಖ ಉದ್ದೇಶವಾಗಿದೆ. ಭ್ರಷ್ಟಾಚಾರ ಕಡಿಮೆಯಾಗದೆ ದೇಶ ಬೆಳೆಯುವುದು ಸಾಧ್ಯವಿಲ್ಲ ಕೇಂದ್ರ ಸರ್ಕಾರದ ಈ ಕಲ್ಪನೆ ನೀವು ಕೈಜೋಡಿಸಬೇಕು. ವಿದ್ಯಾರ್ಥಿಗಳಾದ ನೀವು ಶ್ರಮದಾನದ ಮೂಲಕ ಒಳ್ಳೆ ದಾರಿಯಲ್ಲಿ ಸಾಗಬೇಕು. ಇದು ಬಹಳ ಮುಖ್ಯ ದೇಶ ಕಟ್ಟುವ ಕೆಲಸದಲ್ಲಿ ನೀವು ಕೈಜೋಡಿಸಿ ಎಂದು ಕರೆ ನೀಡಿದರು.

ಕಡೂರು ಪದವಿ ಕಾಲೇಜಿನ ಪ್ರಾಚಾರ್ಯ ಡಾ.ಕೆ.ಎ.ರಾಜಣ್ಣ ಅಧ್ಯಕ್ಷತೆ ವಹಿಸಿದ್ದರು. ಕುವೆಂಪು ವಿವಿ ಸ್ನಾತಕ್ಕೋತ್ತರ ಪದವಿ ತರಗತಿ ಕೇಂದ್ರದ ನಿರ್ದೇಶಕ ಡಾ. ಸತ್ಯನಾರಾಯಣ, ಗ್ರಾಪಂ ಅಧ್ಯಕ್ಷೆ ಪಾರ್ವತಿ, ಹಿರಿಯ ಪ್ರಾಧ್ಯಾಪಕ ಡಾ. ಶೋಭಾ, ಕಡೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಆಂತರಿಕ ಭರವಸೆ ಕುಮಾರ್ ಎನ್ಎಸ್ಎಸ್ ಘಟಕದ ಕಾರ್ಯಕ್ರಮ ಅಧಿಕಾರಿ ಸವಿತಾ, ಲೋಕಪಾವನ, ಭಂಡಾರಿ ಬಸವರಾಜ್, ನಾಗೇಶ್, ಕುಮಾರ್, ಪ್ರಸನ್ನ, ಕಡೂರು ಕಾಲೇಜಿನ ಶಿಬಿರಾರ್ಥಿ ವಿದ್ಯಾರ್ಥಿಗಳು ಉಪನ್ಯಾಸಕರು ವಿದ್ಯಾರ್ಥಿಗಳು ಭಾಗವಹಿಸಿದ್ದರು.

17ಕೆಕೆಡಿಯುು3:

ಕಡೂರು ಸಮೀಪದ ಗೆದ್ಲೆಹಳ್ಳಿಯ ಕುವೆಂಪು ಸ್ನಾತಕೋತ್ತರ ಕೇಂದ್ರದಲ್ಲಿ ಕಡೂರು ಸರ್ಕಾರಿ ಪದವಿ ಕಾಲೇಜಿನ ಕಾಲೇಜು ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರವನ್ನು ಕುಲಪತಿ ಶರತ್ ಅನಂತಮೂರ್ತಿ ಉದ್ಘಾಟಿಸಿದರು.

Share this article