ಪಂಚಾಚಾರ್ಯ ಪತ್ತಿನ ಸಹಕಾರ ಸಂಘದ ಉದ್ಘಾಟನೆಯಲ್ಲಿ ಮಾಜಿ ಶಾಸಕ ಎಸ್.ಕೆ.ಬಸವರಾಜನ್ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಚಿತ್ರದುರ್ಗ ನಗರದ ಜೆಸಿಆರ್ ಬಡಾವಣೆಯ ಮುಖ್ಯ ವೃತ್ತದ ಬಳಿ ಹಮ್ಮಿಕೊಳ್ಳಲಾದ ಕಾರ್ಯಕ್ರಮದಲ್ಲಿ ಶ್ರೀ ಜಗದ್ಗುರು ಪಂಚಾಚಾರ್ಯ (ಎಸ್‌ಜೆಪಿ) ಪತ್ತಿನ ಸಹಕಾರ ಸಂಘ ಪ್ರಾರಂಭೋತ್ಸವದ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇಂದಿನ ದಿನಮಾನದಲ್ಲಿ ಸಹಕಾರ ಎನ್ನುವುದು ಎಲ್ಲರಿಗೂ ಅಗತ್ಯವಾಗಿದೆ. ಒಬ್ಬರ ಸಹಕಾರ ಇನ್ನೊಬ್ಬರಿಗೆ ಇಲ್ಲದಿದ್ದರೆ ಜೀವನ ನಡೆಸುವುದು ಕಷ್ಠವಾಗುತ್ತದೆ. ರಾಷ್ಟ್ರೀಕೃತ ಬ್ಯಾಂಕ್‌ಗಳು ಸಾಲವನ್ನು ನೀಡುವಾಗ ವಿವಿಧ ರೀತಿಯ ದಾಖಲೆಗಳನ್ನು ತೆಗೆದುಕೊಂಡು ಬನ್ನಿ ಎಂದು ಅಲೆದಾಡಿಸುತ್ತಾರೆ. ಈ ರೀತಿಯ ಸಹಕಾರಿ ಬ್ಯಾಂಕ್‌ಗಳು ಬಡವರ ಪಾಲಿಗೆ ವರದಾನವಾಗುತ್ತಿವೆ ಎಂದರು.
ಸಹಕಾರ ಸಂಘಗಳು ಸರಿಯಾದ ರೀತಿಯಲ್ಲಿ ಕಾರ್ಯನಿರ್ವಹಿಸಬೇಕಾದರೆ ಅಲ್ಲಿನ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ವರ್ಗ ಸರಿಯಾಗಿ ಇರಬೇಕಿದೆ. ಆಡಳಿತ ಮಂಡಳಿ ಎಲ್ಲದಕ್ಕೂ ಮಧ್ಯ ಬರಬಾರದು. ಕೆಲವೊಂದು ಸ್ವಾತಂತ್ರ್ಯಗಳನ್ನು ವ್ಯವಸ್ಥಾಪಕರಿಗೆ ನೀಡುವುದರ ಮೂಲಕ ಉತ್ತಮವಾಗಿ ಸಹಕಾರ ಸಂಘ ನಡೆಯಲು ಅನುವು ಮಾಡಬೇಕಿದೆ. ಹಣ ಇದ್ದವರು ಡಿಪಾಜಿಟ್ ಮಾಡುವುದರ ಮೂಲಕ ಬೇರೆಯವರಿಗೆ ನೆರವಾಗಬೇಕಿದೆ. ಸಂಘದ ಆಡಳಿತ ಮಂಡಳಿಯವರು ಸಾಧ್ಯವಾದಷ್ಟು ಬಡವರಿಗೆ ಸಾಲ ಸೌಲಭ್ಯ ಕಲ್ಪಿಸಿ ಅವರ ಅರ್ಥಿಕ ಪರಿಸ್ಥಿತಿ ಸುಧಾರಿಸುವುದರ ಕಡೆ ಗಮನ ನೀಡುವಂತೆ ಬಸವರಾಜನ್ ಮನವಿ ಮಾಡಿದರು.ಸಹಕಾರ ಸಂಘದ ಮುಖ್ಯ ಪ್ರವರ್ತಕ ಕಲ್ಲೇಶಯ್ಯ ಮಾತನಾಡಿ, ಸಹಕಾರ ಸಂಘ ಸ್ಥಾಪನೆ ಮಾಡಲು ಹಲವಾರು ವರ್ಷಗಳ ಕಾಲ ಕಷ್ಟ ಎದುರಿಸಲಾಗಿದೆ. ನಮ್ಮ ಸಮುದಾಯದ ಮನೆಗಳಿಗೆ ಭೇಟಿ ಮಾಡಿ ಅವರಿಂದ ಷೇರು ಹಣ ಪಡೆಯಲಾಗಿದೆ. ಶೇರುದಾರರ ವಿಶ್ವಾಸ, ನಂಬಿಕೆ ಉಳಿಸಿಕೊಳ್ಳುವ ನಿಟ್ಟನಲ್ಲಿ ಕೆಲಸ ಮಾಡಲಾಗುತ್ತದೆ. ಮಂದಿನ ದಿನದಲ್ಲಿ ಸಹಕಾರ ಸಂಘ ಉತ್ತಮ ಕಾರ್ಯ ಮಾಡುತ್ತದೆ ಎಂದು ಹೇಳಿದರು.