ರಾಣಿಬೆನ್ನೂರು ನಗರಸಭೆಯಲ್ಲಿ ಕಂದಾಯ ಪಾವತಿಗೆ ಡಿಜಿಟಲ್ ವ್ಯವಸ್ಥೆ!

KannadaprabhaNewsNetwork |  
Published : May 25, 2025, 11:49 PM IST
ಫೋಟೊ ಶೀರ್ಷಿಕೆ: 25ಆರ್‌ಎನ್‌ಆರ್2ರಾಣಿಬೆನ್ನೂರು ನಗರಸಭೆ ಕಚೇರಿ  | Kannada Prabha

ಸಾರಾಂಶ

ಸ್ಥಳೀಯ ನಗರಸಭೆ ಪ್ರತಿ ತಿಂಗಳು ಸುಮಾರು ₹50 ಲಕ್ಷ ನೀರಿನ ಬಿಲ್ ವಸೂಲಿ ಮಾಡುವ ಗುರಿ ಹೊಂದಿದೆ. ಸದ್ಯ ತಿಂಗಳಿಗೆ ಸುಮಾರು ₹40ರಿಂದ ₹45 ಲಕ್ಷ ಸಂಗ್ರಹವಾಗುತ್ತಿದೆ. ಈಗ ಜನರಿಗೆ ಯುಪಿಐ ವ್ಯವಸ್ಥೆ ಕಲ್ಪಿಸಲಾಗಿದ್ದು, ತೆರಿಗೆ ಸಂಗ್ರಹ ಇನ್ನಷ್ಟು ಹಗುರವಾಗಲಿದೆ.

ಬಸವರಾಜ ಸರೂರ

ರಾಣಿಬೆನ್ನೂರು: ಸಾರ್ವಜನಿಕರು ಸರಿಯಾದ ಸಮಯಕ್ಕೆ ಕಂದಾಯ ಪಾವತಿಸುವುದರಿಂದ ಸ್ಥಳೀಯ ಸಂಸ್ಥೆಗಳ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ. ಆದರೆ ಕಂದಾಯ ಪಾವತಿಸಲು ನಗರಸಭೆ ಅಥವಾ ಬ್ಯಾಂಕಿನ ಎದುರು ತಾಸುಗಟ್ಟಲೇ ಸರತಿ ಸಾಲಿನಲ್ಲಿ ನಿಲ್ಲಬೇಕಾಗುತ್ತದೆ. ಇದನ್ನು ತಪ್ಪಿಸಲು ಸ್ಥಳೀಯ ನಗರಸಭೆಯು ನೀರಿನ ಬಿಲ್ ಸೇರಿದಂತೆ ಇತರೆ ಕಂದಾಯವನ್ನು ಮನೆಯಲ್ಲಿಯೇ ಕುಳಿತು ಪಾವತಿಸುವ ವ್ಯವಸ್ಥೆ ಮಾಡಲಾಗಿದ್ದು ಜಿಲ್ಲೆಯಲ್ಲಿಯೇ ಪ್ರಥಮ ಪ್ರಯತ್ನವಾಗಿದೆ.

ನಗರಸಭೆಯಡಿ ಬರುವ 35 ವಾರ್ಡ್‌ಗಳಲ್ಲಿ ಸುಮಾರು 28500 ಸಾವಿರ ನಳಗಳ ಸಂಪರ್ಕವನ್ನು ಕಲ್ಪಿಸಲಾಗಿದೆ. ದಿನದ 24 ಗಂಟೆ ನಿರಂತರ ಕುಡಿಯುವ ನೀರಿನ ಸೌಲಭ್ಯವನ್ನು ಕಲ್ಪಿಸಲಾಗಿದ್ದು, ನೀರನ್ನು ಬಳಕೆ ಮಾಡುವ ಆಧಾರದ ಮೇಲೆ ಬಿಲ್ ಬರುತ್ತಿದೆ. ಸ್ಥಳೀಯ ನಗರಸಭೆ ಪ್ರತಿ ತಿಂಗಳು ಸುಮಾರು ₹50 ಲಕ್ಷ ನೀರಿನ ಬಿಲ್ ವಸೂಲಿ ಮಾಡುವ ಗುರಿ ಹೊಂದಿದೆ. ಸದ್ಯ ತಿಂಗಳಿಗೆ ಸುಮಾರು ₹40ರಿಂದ ₹45 ಲಕ್ಷ ಸಂಗ್ರಹವಾಗುತ್ತಿದೆ. ಈಗ ಜನರಿಗೆ ಯುಪಿಐ ವ್ಯವಸ್ಥೆ ಕಲ್ಪಿಸಲಾಗಿದ್ದು, ತೆರಿಗೆ ಸಂಗ್ರಹ ಇನ್ನಷ್ಟು ಹಗುರವಾಗಲಿದೆ.ಜನರಿಗೆ ಸಹಾಯ: ನಗರಸಭೆಯ ದಿನದ 24 ಗಂಟೆ ಕುಡಿಯುವ ನೀರಿನ ಬಳಕೆ ಮಾಡುವ ಇದು ತುಂಬಾ ಸಹಾಯವಾಗಲಿದೆ. ಏಕೆಂದರೆ 28500 ನಳಗಳ ಸಂಪರ್ಕ ಪಡೆದವರಲ್ಲಿ ಸುಮಾರು 10 ಸಾವಿರ ಜನರಿಗೆ ತಿಂಗಳಿಗೆ ₹100 ಒಳಗೆ ಬಿಲ್ ಬರುತ್ತಿದೆ. ಅವರು ಪ್ರತಿ ತಿಂಗಳು ನಗರಸಭೆಗೆ ಬಂದು ಬಿಲ್ ಪಾವತಿ ಮಾಡುವ ಬದಲು ಮೂರರಿಂದ ನಾಲ್ಕು ತಿಂಗಳಿಗೆ ಬಂದು ಬಿಲ್ ಪಾವತಿ ಮಾಡುತ್ತಾರೆ. ಆದರೆ ಯುಪಿಐ ವ್ಯವಸ್ಥೆಯಲ್ಲಿ ನಗರಸಭೆಗೆ ಹೋಗದೇ ಬಿಲ್ ಪಾವತಿ ಮಾಡಿದರೆ ಪ್ರತಿ ತಿಂಗಳು ನಗರಸಭೆಗೆ ಹೆಚ್ಚಿನ ಆದಾಯವೂ ಬರುತ್ತದೆ. ಗ್ರಾಹಕರಿಗೆ ಸಮಯದ ಜತೆಗೆ ಆರ್ಥಿಕ ಹೊರೆಯೂ ಕಡಿಮೆಯಾಗುತ್ತದೆ. ಹೆಚ್ಚಿನ ಜನರು ಪ್ರತಿ ತಿಂಗಳು ನಗರಸಭೆಗೆ ಹೋಗದೇ ಇರುವುದರಿಂದ ಅವರ ನಳದ ಬಿಲ್‌ನ ಮೊತ್ತ ಹೆಚ್ಚಳವಾಗಿ, ಒಟ್ಟಿಗೆ ತುಂಬುವುದು ಕಷ್ಟವಾಗುತ್ತದೆ. ಹೀಗಾಗಿ ಯುಪಿಐ ಅವರಿಗೆ ಅನುಕೂಲವಾಗುತ್ತದೆ ಎನ್ನುವುದು ನಿರಂತರ ನೀರು ಯೋಜನೆಯ ಎಂಜಿನಿಯರ್ ಶೇಖರ ಹಾದಿಮನಿ ಅಭಿಪ್ರಾಯ.

ನೀರಿನ ಬಿಲ್‌ ಜತೆಗೆ ನಗರಸಭೆಯ ಆಸ್ತಿ ತೆರಿಗೆ ಸೇರಿದಂತೆ ಹಲವು ಸೇವೆಗಳ ಶುಲ್ಕ, ಬಿಲ್‌ಗಳನ್ನು ಆನ್‌ಲೈನ್‌ನಲ್ಲೇ ತುಂಬಲು ವ್ಯವಸ್ಥೆ ಕಲ್ಪಿಸಲಾಗಿದೆ ಎನ್ನುತ್ತಾರೆ ನಗರಸಭೆ ಅಧಿಕಾರಿಗಳು.ಜನರಿಗೆ ಸೌಲಭ್ಯ ನೀಡುವ ಜತೆಗೆ ನೀರಿನ ಕರ ತುಂಬಲು ಅನುಕೂಲವಾಗುವ ರೀತಿಯಲ್ಲಿ ಯುಪಿಐ ವ್ಯವಸ್ಥೆ ಮಾಡಲಾಗಿದೆ. ಜನರು ಈ ಸೌಲಭ್ಯವನ್ನು ಬಳಕೆ ಮಾಡಿಕೊಂಡು ನೀರಿನ ಕರವನ್ನು ಬಾಕಿ ಉಳಿಸಿಕೊಳ್ಳದೇ ಭರಣ ಮಾಡಬೇಕು ಎಂದು ನಗರಸಭೆ ಆಯುಕ್ತ ಎಫ್.ಐ. ಇಂಗಳಗಿ ತಿಳಿಸಿದರು.ಹಾವೇರಿ: ವಿದ್ಯಾರ್ಥಿನಿಲಯಗಳ ಪ್ರವೇಶಕ್ಕೆ ಅರ್ಜಿ ಆಹ್ವಾನ

ಹಾವೇರಿ: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ಹಾಗೂ ಮೆಟ್ರಿಕ್ ನಂತರ ಬಾಲಕ ಮತ್ತು ಬಾಲಕಿಯರ ಹಾವೇರಿ ತಾಲೂಕಿನ 13 ವಿದ್ಯಾರ್ಥಿನಿಲಯಗಳಿಗೆ ಪ್ರವೇಶಕ್ಕೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.ತಾಲೂಕಿನ ಅಗಡಿ, ಗುತ್ತಲ, ಹಾವೇರಿ, ಕನವಳ್ಳಿ, ಕಾಟೇನಹಳ್ಳಿ, ಮರೋಳ, ಯಲಗಚ್ಚ ವರದಾಹಳ್ಳಿಯ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯಗಳಿಗೆ ಜೂ. 16ರೊಳಗಾಗಿ ವೆಬ್‌ಸೈಟ್ https://bcwd.karnataka.gov.inc ನಲ್ಲಿ ಅರ್ಜಿ ಸಲ್ಲಿಸಬೇಕು.ಹಾವೇರಿ ನಗರದ ಮೆಟ್ರಿಕ್ ನಂತರದ ಬಾಲಕಿಯರ ಮೂರು ಹಾಗೂ ಬಾಲಕರ ಒಂದು ವಿದ್ಯಾರ್ಥಿನಿಲಯಗಳಿಗೆ ಪ್ರವೇಶಕ್ಕಾಗಿ ಜೂ. 20ರೊಳಗಾಗಿ ವೆಬ್‌ಸೈಟ್ https://bcwd.karnataka.gov.inc ನಲ್ಲಿ ಅರ್ಜಿ ಸಲ್ಲಿಸಬೇಕು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಕೀಲರು, ಜಡ್ಜ್ ಗಳು ನಡವಳಿಕೆಯಲ್ಲಿ ಸಮಾಜಕ್ಕೆ ಮಾದರಿಯಾಗಬೇಕು: ನ್ಯಾ. ಅಬ್ದುಲ್ ನಝೀರ್
ಪಂಚ ಗ್ಯಾರಂಟಿ ಯೋಜನೆ ಸಮರ್ಪಕ ಜಾರಿ: ಫೆಬ್ರವರಿಯಲ್ಲಿ ತಾಲೂಕು ಮಟ್ಟದ ಸಮಾವೇಶ