ಸಂಸ್ಥೆಗಳು ನೌಕರರ ಮಾನಸಿಕ ಒತ್ತಡ ನಿವಾರಿಸಿ : ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್‌ ಗುಂಡೂರಾವ್

KannadaprabhaNewsNetwork |  
Published : Oct 29, 2024, 01:47 AM ISTUpdated : Oct 29, 2024, 01:27 PM IST
Dinesh 5 | Kannada Prabha

ಸಾರಾಂಶ

ಸರ್ಕಾರಿ, ಖಾಸಗೀ ಉದ್ಯೋಗದ ಸ್ಥಳದಲ್ಲಿ ಉದ್ಯೋಗಿಯ ಮಾನಸಿಕ ಒತ್ತಡಕ್ಕೆ ಪರಿಹಾರ ಒದಗಿಸುವ ಸೌಲಭ್ಯವನ್ನು ಸಂಸ್ಥೆಗಳು ಕಲ್ಪಿಸಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

ಬೆಂಗಳೂರು : ಸರ್ಕಾರಿ, ಖಾಸಗೀ ಉದ್ಯೋಗದ ಸ್ಥಳದಲ್ಲಿ ಉದ್ಯೋಗಿಯ ಮಾನಸಿಕ ಒತ್ತಡಕ್ಕೆ ಪರಿಹಾರ ಒದಗಿಸುವ ಸೌಲಭ್ಯವನ್ನು ಸಂಸ್ಥೆಗಳು ಕಲ್ಪಿಸಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯಲ್ಲಿ (ಬಿಎಂಸಿಆರ್‌ಐ) ಸೋಮವಾರ ಕರ್ನಾಟಕ ರಾಜ್ಯ ಮಾನಸಿಕ ಆರೋಗ್ಯ ಪ್ರಾಧಿಕಾರ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ನಡೆದ ‘ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ’ ಉದ್ಘಾಟಿಸಿ ಅವರು ಮಾತನಾಡಿದರು.

ಉದ್ಯೋಗಿಗಳು ಹಲವು ಹಂತದಲ್ಲಿ ಮಾನಸಿಕ ಒತ್ತಡಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚು. ಹೀಗಾಗಿ ಪ್ರತಿಯೊಂದು ಸಂಸ್ಥೆ ತನ್ನ ಉದ್ಯೋಗಿಯ ಮಾನಸಿಕ ಸ್ಥಿತಿ ಗುರುತಿಸಬೇಕು. ಹೆಚ್ಚಿನ ಒತ್ತಡ ಹೇರದೆ ಗಂಭೀರ ಪರಿಣಾಮಕ್ಕೆ ವ್ಯಕ್ತಿ ತುತ್ತಾಗುವುದನ್ನು ತಡೆಯಬೇಕು. ಅವರ ಕೆಲಸದ ಒತ್ತಡ ಗಮನಿಸಿ ತಮ್ಮ ಸಮಸ್ಯೆ ಹೇಳಿಕೊಳ್ಳುವ, ಪರಿಹಾರ ಕಂಡುಕೊಳ್ಳುವ ಸೌಲಭ್ಯ ಒದಗಿಸಬೇಕು ಎಂದು ಹೇಳಿದರು.

ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎನ್.ಕುಮಾರ್ ಮಾತನಾಡಿ, ದೈಹಿಕ ಬಾಧೆಗಳನ್ನು ಮೀರಿ ಮಾನಸಿಕ ಸಮಸ್ಯೆಯೇ ಮೊದಲ ಸ್ಥಾನ ಪಡೆಯುತ್ತಿದೆ. ವಿಪರೀತ ಮೊಬೈಲ್‌ ಬಳಕೆ ಕೂಡ ಮಾನಸಿಕ ಸಮಸ್ಯೆಗೆ ದಾರಿ ಮಾಡಿಕೊಡುತ್ತಿದೆ. ಭಾರತದಲ್ಲಿ ಶೇ.17ರಷ್ಟು ಮಾನಸಿಕ ಆರೋಗ್ಯದ ಸಮಸ್ಯೆ ಕಂಡು ಬಂದಿದೆ. ಇದು ನಗರಗಳಲ್ಲಿ ಶೇ.10ರಷ್ಟಿದ್ದರೆ, ಗ್ರಾಮೀಣ ಪ್ರದೇಶಗಳಲ್ಲಿ ಶೇ.7ರಷ್ಟಿದೆ. ಈಗಲೇ ಎಚ್ಚೆತ್ತುಕೊಳ್ಳದಿದ್ದರೆ ಸಮಸ್ಯೆ ಹೆಚ್ಚಬಹುದು ಎಂದು ಎಚ್ಚರಿಸಿದರು.

ಶಾಸಕ ಬಿ.ಉದಯ್ ಬಿ.ಗರುಡಾಚಾರ್ ಮಾತನಾಡಿದರು. ಮನಶಾಸ್ತ್ರಜ್ಞ ಡಾ। ಎ.ಜಗದೀಶ್ ವಿಶೇಷ ಉಪನ್ಯಾಸ ನೀಡಿದರು. ಆರೋಗ್ಯ ಇಲಾಖೆ ಆಯುಕ್ತ ಕೆ.ಬಿ.ಶಿವಕುಮಾರ್, ಬಿಎಂಸಿಆರ್‌ಐ ನಿರ್ದೇಶಕಿ ಡಾ। ಎಂ.ಜಿ.ತ್ರಿವೇಣಿ, ಪ್ರಾಧಿಕಾರದ ಉಪ ನಿರ್ದೇಶಕಿ ಡಾ। ಪಿ.ರಜನಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

500 ನಾಯಿಗಳಿಗೆ ಚಿಕನ್‌ ರೈಸ್ ನೀಡಲು ವರ್ಷಕ್ಕೆ 1.83 ಕೋಟಿ
ಯಲಹಂಕದಲ್ಲಿ ‘ಚೀನಾದ ಹ್ಯಾಂಗ್‌ಝೌ’ ಮಾದರಿ ರೈಲು ನಿಲ್ದಾಣ