ಕನ್ನಡಪ್ರಭ ವಾರ್ತೆ ಮಣಿಪಾಲ
ಅಲ್ಲದೆ ಈ ಸಂಸ್ಥೆಯ ಲ್ಯಾಟರಲ್ ಎಂಟ್ರಿ ಆಸಕ್ತ ವಿದ್ಯಾರ್ಥಿಗಳಿಗೆ ಎಂಐಟಿ ಮಣಿಪಾಲದ ಕಾಲೇಜು ಶುಲ್ಕದ ಒಟ್ಟು ಶುಲ್ಕದಲ್ಲಿ ಶೇ .75 ಶುಲ್ಕವನ್ನು ವಿದ್ಯಾರ್ಥಿವೇತನದ ರೂಪದಲ್ಲಿ ವಿಶೇಷವಾಗಿ ಒದಗಿಸಲಾಗುತ್ತಿದೆ.
ಜೊತೆಗೆ ಐ.ಟಿ.ಐ. ಶಿಕ್ಷಣ ಪೂರೈಸಿದ ಎನ್.ಸಿ.ವಿ.ಟಿ. ಅಥವಾ ಎನ್.ಟಿ.ಸಿ. ಪರೀಕ್ಷೆ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಿಗೆ ಈ ಕಾಲೇಜಿನಲ್ಲಿ ಲಭ್ಯವಿರುವ ಎಂಟು ವಿಭಾಗಗಳಲ್ಲಿ ತಮ್ಮ ಆಯ್ಕೆಯ ಯಾವುದೇ ವಿಭಾಗಕ್ಕೆ ನೇರವಾಗಿ ದ್ವಿತೀಯ ವರ್ಷಕ್ಕೆ ಪ್ರವೇಶಾತಿಯ ಹೊಸ ಸೌಲಭ್ಯವೂ ಲಭ್ಯ ಇದೆ . ಸಂಸ್ಥೆಯ ವಿದ್ಯಾರ್ಥಿಗಳ ಶೈಕ್ಷಣಿಕ ಕೌಶಲ್ಯ ಅಭಿವೃದ್ಧಿಗಾಗಿ ಕಾಲೇಜು ಆವರಣದಲ್ಲಿಯೇ ಎನ್.ಎಸ್.ಡಿ.ಸಿ. ಸಂಯೋಜಿತ ಮಣಿಪಾಲ್ ಸ್ಕಿಲ್ ಡೆವಲಪ್ಮೆಂಟ್ ಸೆಂಟರ್‌ನ ಅಂತರಾಷ್ಟ್ರೀಯ ಗುಣಮಟ್ಟದ ವಿವಿಧ 18 ವಿಭಾಗಗಳ ಕೌಶಲ್ಯ ತರಬೇತಿ ಕೇಂದ್ರವು ಇದೇ ವರ್ಷದಿಂದ ಕಾರ್ಯ ಆರಂಭವಾಗಿದೆ.ವಿದ್ಯಾರ್ಥಿಗಳ ಆಯ್ಕೆಯ ಊಟ ಮತ್ತು ವಸತಿ ವ್ಯವಸ್ಥೆಗಾಗಿ ಹವಾ ನಿಯಂತ್ರಿತ ಹಾಗೂ ಹವಾ ನಿಯಂತ್ರಣರಹಿತ ವಸತಿಗೃಹ ಹಾಗೂ ಉಪಹಾರ ಗೃಹಗಳು ಲಭ್ಯವಿವೆ. ಸಾಲ ಸೌಲಭ್ಯ ಮತ್ತು ಪ್ರವೇಶತಿಗಾಗಿ ಹೆಚ್ಚಿನ ವಿವರಗಳಿಗಾಗಿ ಆಸಕ್ತರು ಕಾಲೇಜಿನ ಆಡಳಿತ ಕಚೇರಿ ಅಥವಾ email: admission@tmapai polytechnic.edu.in ಅಥವಾ 78483182179 , 8310276314 ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ತಿಳಿಸಲಾಗಿದೆ.