ಜೂನ್‌ 26ಕ್ಕೆ ‘ಕನ್ನಡಪ್ರಭ’ ಪತ್ರಿಕೆಯಿಂದ ನೇರ ಫೋನ್‌ ಇನ್‌

KannadaprabhaNewsNetwork |  
Published : Jun 25, 2025, 01:18 AM IST
ಕನ್ನಡಪ್ರಭ ಫೋನ್‌ ಇನ್‌ ನೇರ ಸಂವಾದ ಕಾರ್ಯಕ್ರಮ ಲೋಗೋ. | Kannada Prabha

ಸಾರಾಂಶ

ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಶೇ.60ಕ್ಕಿಂತ ಕಡಿಮೆ ಫಲಿತಾಂಶ ಪಡೆದಿರುವ ಸರ್ಕಾರಿ ಪ್ರೌಢಶಾಲೆಗಳಿಗೆ ನೋಟಿಸ್‌ ಜಾರಿ ಮಾಡಿ, ಮುಖ್ಯ ಶಿಕ್ಷಕರ ವಿರುದ್ಧ ಶಿಸ್ತುಕ್ರಮಕ್ಕೆ ಸೂಚಿಸಿರುವ ರಾಜ್ಯ ಸರ್ಕಾರದ ಶಿಕ್ಷಣ ಇಲಾಖೆಯ ಆದೇಶ ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ನೀಡಿದಂತಿದೆ. ಸಾವಿರಾರು ಶಿಕ್ಷಕರ ಕೊರತೆ, ಶಾಲೆಗಳಲ್ಲಿನ ಅವ್ಯವಸ್ಥೆಗಳ ಮಧ್ಯೆಯೂ ಉತ್ತಮ ಫಲಿತಾಂಶಕ್ಕೆ ಪ್ರಾಮಾಣಿಕವಾಗಿ ದುಡಿದ ಜಿಲ್ಲೆಯ ಶಿಕ್ಷಕರ ವಲಯಕ್ಕೆ ಇದು ಆಘಾತ ಮೂಡಿಸಿದೆ.

ಸಂವಾದ ಕಾರ್ಯಕ್ರಮ । ಕಡಿಮೆ ಫಲಿತಾಂಶ ಹಿನ್ನೆಲೆ ಶಿಕ್ಷಕರಿಗೆ ಸರ್ಕಾರದ ನೋಟಿಸ್‌ ಬಗ್ಗೆ ಚರ್ಚೆ । ಶಿಕ್ಷಕರು, ಶಿಕ್ಷಣ ತಜ್ಞರು ಭಾಗಿ

ಕನ್ನಡಪ್ರಭ ವಾರ್ತೆ ಯಾದಗಿರಿ

ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಶೇ.60ಕ್ಕಿಂತ ಕಡಿಮೆ ಫಲಿತಾಂಶ ಪಡೆದಿರುವ ಸರ್ಕಾರಿ ಪ್ರೌಢಶಾಲೆಗಳಿಗೆ ನೋಟಿಸ್‌ ಜಾರಿ ಮಾಡಿ, ಮುಖ್ಯ ಶಿಕ್ಷಕರ ವಿರುದ್ಧ ಶಿಸ್ತುಕ್ರಮಕ್ಕೆ ಸೂಚಿಸಿರುವ ರಾಜ್ಯ ಸರ್ಕಾರದ ಶಿಕ್ಷಣ ಇಲಾಖೆಯ ಆದೇಶ ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ನೀಡಿದಂತಿದೆ. ಸಾವಿರಾರು ಶಿಕ್ಷಕರ ಕೊರತೆ, ಶಾಲೆಗಳಲ್ಲಿನ ಅವ್ಯವಸ್ಥೆಗಳ ಮಧ್ಯೆಯೂ ಉತ್ತಮ ಫಲಿತಾಂಶಕ್ಕೆ ಪ್ರಾಮಾಣಿಕವಾಗಿ ದುಡಿದ ಜಿಲ್ಲೆಯ ಶಿಕ್ಷಕರ ವಲಯಕ್ಕೆ ಇದು ಆಘಾತ ಮೂಡಿಸಿದೆ. ಸರ್ಕಾರದ ಈ ಆದೇಶ ಶಿಕ್ಷಕರ ವಲಯದಲ್ಲಿ ಅಸಮಾಧಾನ ಮೂಡಿಸಿದೆ.

ಶೇ.50ರಷ್ಟು ಶಿಕ್ಷಕರ ಕೊರತೆ, ಹತ್ತು ಹಲವಾರು ಅವ್ಯವಸ್ಥೆಗಳ ನಡುವೆಯೂ ಫಲಿತಾಂಶ ಸುಧಾರಣೆಗೆ ಪ್ರಯತ್ನಿಸಲಾಗಿದೆ. ಸರ್ಕಾರದ ಈ ಆದೇಶ ಅದೆಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿರುವ ಶಿಕ್ಷಕರ ವಲಯ, ತಮ್ಮದಲ್ಲದ ತಪ್ಪಿಗೆ ಶಿಕ್ಷೆ ಅನುಭವಿಸುವಂತಾಗಿದೆ ಎಂದು ಅಳಲು ವ್ಯಕ್ತಪಡಿಸುತ್ತಿದ್ದಾರೆ.

ಈ ಕುರಿತು ಜೂ.26 ರಂದು ಬೆಳಿಗ್ಗೆ 10.30ಕ್ಕೆ ‘ಕನ್ನಡಪ್ರಭ’ ನೇರ ಫೋನ್‌ ಇನ್‌ ಕಾರ್ಯಕ್ರಮ ಆಯೋಜಿಸಿದೆ. ಶಿಕ್ಷಣ ಇಲಾಖೆಯ ನಿವೃತ್ತ ಉಪನ್ಯಾಸಕ, ಹಿರಿಯ ಪತ್ರಕರ್ತ ಪ್ರೊ.ಸಿ.ಎಂ.ಪಟ್ಟೇದಾರ್, ಶಾಲಾ ಶಿಕ್ಷಣ ಇಲಾಖೆಯ ನಿವೃತ್ತ ಉಪ ನಿರ್ದೇಶಕ ಶಾಂತಗೌಡ ಪಾಟೀಲ್‌, ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ನಿವೃತ್ತ ಉಪನಿರ್ದೇಶಕ ಚೆನ್ನಬಸಪ್ಪ ಕುಳಗೇರಿ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಯಾದಗಿರಿ ಜಿಲ್ಲಾಧ್ಯಕ್ಷ ರಾಯಪ್ಪಗೌಡ ಜಿ. ಹುಡೇದ್‌, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಅಶೋಕ ಕುಮಾರ ಕೆಂಭಾವಿ, ಪ್ರಾಥಮಿಕ ಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ರಾಘವೇಂದ್ರ ಅಳ್ಳೊಳ್ಳಿ, ಹಿರಿಯ ಚಿಂತಕರು, ಶಿಕ್ಷಣ ತಜ್ಞರು ತಮ್ಮ ಅಭಿಮತ ವ್ಯಕ್ತಪಡಿಸಲಿದ್ದಾರೆ. ಆಸಕ್ತರು ನೇರ ಪ್ರಸಾರದಲ್ಲಿ ಕಾರ್ಯಕ್ರಮ ವೀಕ್ಷಿಸಬಹುದು. ಈ ಭಾಗದ ಶಿಕ್ಷಣ ಸುಧಾರಣೆಯ ಬಗ್ಗೆ ಸಲಹೆ-ಸೂಚನೆಗಳನ್ನು ನೀಡಬಹುದು.

‘ಕನ್ನಡಪ್ರಭ’ ನೇರ ಫೋನ್‌ ಇನ್‌ ಕಾರ್ಯಕ್ರಮ

ಕಡಿಮೆ ಫಲಿತಾಂಶ: ಶಾಲಾ ಶಿಕ್ಷಕರಿಗೆ ಮುಂಬಡ್ತಿ ಕಟ್‌..!

ಶೇ.60ಕ್ಕಿಂತ ಕಡಮೆ ಫಲಿತಾಂಶ: ಸರ್ಕಾರಿ ಹೈಸ್ಕೂಲ್‌ ಶಿಕ್ಷಕರಿಗೆ ಸಸ್ಪೆಂಡ್ ಭೀತಿ!

ಕೊರತೆಗಳ ಮಧ್ಯೆ ಫಲಿತಾಂಶ ಸುಧಾರಣೆ: ನೋಟಿಸ್‌- ಶಿಸ್ತುಕ್ರಮ ಬಹುಮಾನ!

ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಕೊಡ್ತಾ ಸರ್ಕಾರ ?

ಇಲ್ಲಿ ಶಿಕ್ಷಣ ಹದಗೆಡಲು ಶಿಕ್ಷಕರು ಕಾರಣರೇ? ಅಥವಾ ಸೌಲಭ್ಯಗಳ ನೀಡದ ಸರ್ಕಾರವೇ!

ದಿನಾಂಕ: 26-06-2025, ಗುರುವಾರ,

ಸಮಯ: ಬೆಳಿಗ್ಗೆ 10.30 ರಿಂದ

ಮೊಬೈಲ್‌ ಸಂಖ್ಯೆ: 7204601197

ಸಾಮಾಜಿಕ ಜಾಲತಾಣ: facebook.com/kannadaprabha.yadgir

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಿ ರಾಮ್‌ ಜಿ ರದ್ದು ಮಾಡಿ, ನರೇಗಾ ಮರುಸ್ಥಾಪಿಸಿ: ಸಿದ್ದು
ಸಚಿವ ತಿಮ್ಮಾಪುರ ರಾಜೀನಾಮೆಗೆ ಅಹೋರಾತ್ರಿ ಧರಣಿ