ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಜಿಲ್ಲಾಧಿಕಾರ ಕಚೇರಿಯಲ್ಲಿ ಸಭಾಂಗಣದಲ್ಲಿ ಏರ್ಪಡಿಸಿದ್ದ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ (ಎಸ್‌ಐಆರ್) ಹಾಗೂ ಭಾವಚಿತ್ರ ಸಹಿತ ಮತದಾರರ ಪಟ್ಟಿಗೆ ಸಂಬಂಧಿಸಿದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿ, ಮ್ಯಾಪಿಂಗ್ ಇಲ್ಲದಿರುವ, ದೋಷವಿರುವ ಮತದಾರರ ಪಟ್ಟಿಯನ್ನು ಪರಿಶೀಲಿಸಿ, ಮತದಾರರಿಂದ ಸಮರ್ಪಕವಾದ ದಾಖಲೆಗಳನ್ನು ಪಡೆದು ಸರಿಪಡಿಸುವ ಪ್ರಕ್ರಿಯೆಯನ್ನು ಪರಿಣಾಮಕಾರಿಯಾಗಿ ಮಾಡಬೇಕು ಎಂದು ತಿಳಿಸಿದರು.
ಮ್ಯಾಪಿಂಗ್ ಇಲ್ಲದಿರುವ/ದೋಷವಿರುವ ಮತದಾರರ ಅಂಕಿ-ಅಂಶಗಳನ್ನು ಪರಿಶೀಲಿಸಿದ ಅವರು, ವರದಿಯ ಪ್ರಕಾರ ಜಿಲ್ಲೆಯಲ್ಲಿ ಮ್ಯಾಪಿಂಗ್ ಇಲ್ಲದಿರುವ ಮತ್ತು ದೋಷವಿರುವ ಒಟ್ಟು 48,666 ಮತದಾರರನ್ನು ಗುರುತಿಸಲಾಗಿದೆ. ಬಿಎಲ್‌ಓಗಳು ನಿಗದಿತ ಭೇಟಿಗಳನ್ನು ಮಾಡಬೇಕು. ಮರಣ ಹೊಂದಿದವರು, ಶಾಶ್ವತವಾಗಿ ಬೇರೆಡೆಗೆ ಸ್ಥಳಾಂತರಗೊಂಡವರು ಅಥವಾ ನಕಲಿ ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕುವಾಗ, ನಿಯಮಾವಳಿ ಪ್ರಕಾರ ಮಾಡಬೇಕು. ಮತದಾರರ ಕರಡು ಪಟ್ಟಿಯನ್ನು ಪ್ರದರ್ಶಿಸಬೇಕು. ಮನೆ ಭೇಟಿ ವೇಳೆ ಸ್ಟಿಕ್ಕರ್ ಹಚ್ಚುವುದನ್ನು ದಾಖಲು ಮಾಡಬೇಕು. ಎಸ್ ಐ ಆರ್ ನ ಪ್ರತಿ ಚಟುವಟಿಕೆಗಳ ಬಗ್ಗೆ ಕಡತ ನಿರ್ವಹಿಸಬೇಕು. ಸಮರ್ಪಕ ದಾಖಲಾತಿಗಳ ನಿರ್ವಹಣೆ ಅತಿ ಮುಖ್ಯವಾಗಿದ್ದು ಫಾರ್ಮ್, 6, 7, 8 ರ ಬಗ್ಗೆ ನಿಗಾ ವಹಿಸಿ ದಾಖಲು ಮಾಡಿ ಕ್ರಮ ವಹಿಸಬೇಕು ಎಂದು ಸೂಚಿಸಿದರು.ಅರ್ಹ ಮತದಾರರ ಸೇರ್ಪಡೆ: 18 ವರ್ಷ ತುಂಬಿದ ಯುವ ಮತದಾರರನ್ನು ತಪ್ಪದೇ ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಲು ಬಿಎಲ್‌ಒ ಮಟ್ಟದಲ್ಲಿ ಪರಿಣಾಮಕಾರಿ ಜಾಗೃತಿ ಮೂಡಿಸಲು ಸೂಚಿಸಿದರು.
ಮತಗಟ್ಟೆ ಕೇಂದ್ರಗಳಲ್ಲಿ ಅಗತ್ಯ ಸೌಲಭ್ಯಗಳು ಹಾಗೂ ಮತದಾರರ ಅನುಕೂಲಕ್ಕೆ ತಕ್ಕಂತೆ ಮತಗಟ್ಟೆಗಳ ಮರುಸಂಘಟನೆ ಕುರಿತು ಪ್ರಸ್ತಾಪಿಸಿದ ಅವರು ಬಿಎಲ್ ಒ ಯಿಂದ ಹಿಡಿದು ಎಲ್ಲ ಅಧಿಕಾರಿಗಳು ಉತ್ತಮವಾಗಿ, ಸಮರ್ಪಕವಾಗಿ ತಮ್ಮ ತಮ್ಮ ಕರ್ತವ್ಯ ನಿರ್ವಹಿಸುವ ಮೂಲಕ ಪ್ರಗತಿ ಸಾಧಿಸಬೇಕೆಂದು ತಿಳಿಸಿದರು.
ಶಿಕಾರಿಪುರ-2,06,415. ಸೊರಬ-1,98,955. ಸಾಗರ- 2,09,520 ಮತದಾರರು ಇದ್ದಾರೆಂದು ತಿಳಿಸಿದರು.
ಎನ್ಯುಮರೇಷನ್ ಫಾರ್ಮ್ ಡಿಜಿಟಲೀಕರಣದ ಸ್ಥಿತಿ
ಸಭೆಯಲ್ಲಿ ಎಸಿ ಡಾ.ಮೈತ್ರಿ, ಮತದಾರರ ನೋಂದಣಾಧಿಕಾರಿಗಳು, ಸಹಾಯಕ ಮತದಾರರ ನೋಂದಣಾಧಿಕಾರಿಗಳು, ತಹಶೀಲ್ದಾರರು, ಚುನಾವಣಾ ಶಾಖೆಯ ಅಧಿಕಾರಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಭಾಗವಹಿಸಿದ್ದರು.
ಪೊಟೋ: 22ಎಸ್‌ಎಂಜಿಕೆಪಿ02