ಕನ್ನಡಪ್ರಭ ವಾರ್ತೆ ಕಿಕ್ಕೇರಿ
ಫೆ.23ರಂದು ನಿರ್ದೇಶಕರ ಸ್ಥಾನಗಳಿಗೆ ಚುನಾವಣೆ ನಡೆಯಬೇಕಿತ್ತು. ಒಟ್ಟು 11 ನಿರ್ದೇಶಕರ ಆಯ್ಕೆಗಾಗಿ ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ, ಕಾಂಗ್ರೆಸ್ ಹಾಗೂ ಪ್ರತ್ಯೇಕವಾಗಿ ಒಟ್ಟು 33 ಸದಸ್ಯರು ನಾಮಪತ್ರ ಸಲ್ಲಿಸಿದ್ದರು.
ಜೆಡಿಎಸ್ ಹಿರಿಯ ನಾಯಕ ಸಿ.ಎನ್. ಪುಟ್ಟಸ್ವಾಮಿಗೌಡ ಹಾಗೂ ಕೆಪಿಸಿಸಿ ಸದಸ್ಯ ಸುರೇಶ್ ಚುನಾವಣೆ ನಡೆಯುವುದು ಬೇಡ ಎಂದು ನಿಶ್ಚಯಿಸಿ ಮಾತುಕತೆ ನಡೆಸಿ ಎಲ್ಲ ಸದಸ್ಯರ ಮನವೊಲಿಸಿದರು. ಪರಿಣಾಮ ಎಲ್ಲಾ 11 ನಿರ್ದೇಶಕರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.ಜೆಡಿಎಸ್, ಬಿಜೆಪಿ ಮೈತ್ರಿ ಬೆಂಬಲಿತ 7 ಸದಸ್ಯರು, ಕಾಂಗ್ರೆಸ್ ಪಕ್ಷದ ಬೆಂಬಲಿತ 4 ಸದಸ್ಯರು ಅವಿರೋಧವಾಗಿ ಆಯ್ಕೆಯಾದರು.
ಕಾಂಗ್ರೆಸ್ ಬೆಂಬಲಿತ ಸದಸ್ಯರಾಗಿ ಅಂಚೆಬೀರನಹಳ್ಳಿ ಲೋಕೇಶ, ಐಕನಹಳ್ಳಿ ಐ.ಎಂ. ಮಂಜೇಗೌಡ(ಸಾಮಾನ್ಯ ವರ್ಗ), ಮಂಜುಳಮ್ಮ(ಮಹಿಳಾ ಮೀಸಲು),ದೇವಮ್ಮ(ಪರಿಶಿಷ್ಟ ಜಾತಿ)ಅವರನ್ನುಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಈ ವೇಳೆ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ನಿರ್ದೇಶಕ ಸಿ.ಎನ್. ಪುಟ್ಟಸ್ವಾಮಿಗೌಡ, ಕೆಪಿಸಿಸಿ ಸದಸ್ಯ ಸುರೇಶ್, ಕಿಕ್ಕೇರಿ ಕೆಪಿಎಸ್ ಎಸ್‌ಡಿಎಂಸಿ ಅಧ್ಯಕ್ಷ ಐಕನಹಳ್ಳಿ ಕೃಷ್ಣೇಗೌಡ, ಬಿ.ಎಸ್. ಮಂಜುನಾಥ್, ದಾನಶೇಖರ್, ಶಿಶುಪಾಲ ಮುಂತಾದವರು ಇದ್ದರು.