ರಸ್ತೆ ಕಾಮಗಾರಿ ಅಪೂರ್ಣ: ಗುತ್ತಿಗೆದಾರರಿಗೆ ತರಾಟೆ

KannadaprabhaNewsNetwork |  
Published : Feb 21, 2025, 11:45 PM IST
21ಕೆಜಿಎಫ್‌1 | Kannada Prabha

ಸಾರಾಂಶ

ಕಾಮಗಾರಿಗಳ ವಿಳಂಬ ಕುರಿತು ಪತ್ರಿಕೆಗಳಲ್ಲಿ ತಾಲೂಕಿನ ಮಾನ ಹರಾಜು ಹಾಕುತ್ತಿದ್ದರೂ ಗುತ್ತಿಗೆದಾರರಿಗೆ ಏನು ಅನಿಸುವುದಿಲ್ಲವೇ, ಒಬ್ಬ ಒಬ್ಬ ಗುತ್ತಿಗೆದಾರರ ೮ ರಿಂದ ೧೦ ಗುತ್ತಿಗೆಯ ಟೆಂಡರ್‌ಗಳನ್ನು ಪಡೆದು ಒಂದುರೆಡು ಕಾಮಗಾರಿಗಳನ್ನು ಪ್ರಾರಂಭಿಸಿ ನಂತರ ಕಾಮಗಾರಿಯನ್ನು ಅರ್ಧದಲ್ಲಿ ಬಿಟ್ಟು ಹೋಗಿದ್ದಾರೆ.

ಕನ್ನಡಪ್ರಭ ವಾರ್ತೆ ಕೆಜಿಎಫ್ರಸ್ತೆಗಳ ಅಭಿವೃದ್ಧಿಗಾಗಿ ಕೋಟ್ಯತರ ರುಪಾಯಿಗಳ ಅನುದಾನು ತಂದು, ಟೆಂಡರ್ ಪ್ರಕ್ರಿಯೆ ಮುಗಿಸಿ ಗುತ್ತಿಗೆದಾರರಿಗೆ ಕಾರ್ಯಾದೇಶ ನೀಡಿದರೂ ರಸ್ತೆ ಕಾಮಗಾರಿಗಳನ್ನು ವರ್ಷನುಗಟ್ಟಲೇ ಆದರೂ ಪೂರ್ಣಗೊಳಿಸಿಲ್ಲ ಎಂದು ಗುತ್ತಿಗೆದಾರರನ್ನು ಶಾಸಕಿ ರೂಪಕಲಾಶಶಿಧರ್ ತರಾಟೆಗೆ ತೆಗೆದುಕೊಂಡರು.ಲೋಕೋಪಯೋಗಿ ಇಲಾಖೆಯ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ನಗರ ನೀರು ಸರಬರಾಜು ಒಳಚರಂಡಿ ಮಂಡಳಿ, ನಗರಸಭೆ, ಬೆಸ್ಕಾಂ ಹಾಗೂ ಲೊಕೋಪಯೋಗಿ ಇಲಾಖೆಯ ಅಧಿಕಾರಿಗಳು ಗುತ್ತಿಗೆದಾರರ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.

ಅರ್ಧಕ್ಕೆ ಕಾಮಗಾರಿ ಸ್ಥಗಿತ

ಕಾಮಗಾರಿಗಳ ವಿಳಂಬ ಕುರಿತು ಪತ್ರಿಕೆಗಳಲ್ಲಿ ತಾಲೂಕಿನ ಮಾನ ಹರಾಜು ಹಾಕುತ್ತಿದ್ದರೂ ಗುತ್ತಿಗೆದಾರರಿಗೆ ಏನು ಅನಿಸುವುದಿಲ್ಲವೇ, ಒಬ್ಬ ಒಬ್ಬ ಗುತ್ತಿಗೆದಾರರ ೮ ರಿಂದ ೧೦ ಗುತ್ತಿಗೆಯ ಟೆಂಡರ್‌ಗಳನ್ನು ಪಡೆದು ಒಂದುರೆಡು ಕಾಮಗಾರಿಗಳನ್ನು ಪ್ರಾರಂಭಿಸಿ ನಂತರ ಕಾಮಗಾರಿಯನ್ನು ಅರ್ಧದಲ್ಲಿ ಬಿಟ್ಟು ಹೋಗುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಗುತ್ತಿಗೆದಾರದರೂ ಟೆಂಡರ್ ಪಡೆದ ನಂತರ ಆರು ತಿಂಗಳಲ್ಲಿ ಕಾಮಗಾರಿಗಳನ್ನು ಪೂರ್ತಿಗೊಳಿಸಬೇಕು, ಸರ್ಕಾರದ ಮಟ್ಟದಲ್ಲಿ ಕಾಡಿ ಬೇಡಿ ಅಭಿವೃದ್ದಿಗೆ ಅನುದಾನ ತಂದರೆ ಇಲ್ಲಿ ಗುತ್ತಿಗೆದಾರರು ಟೆಂಡರ್ ಪಡೆದುಕೊಂಡು ಕಾಮಗಾರಿಗಳನ್ನು ಮಾಡದೆ ಸತಾಯಿಸುತ್ತಿದ್ದಾರೆ. ಅಂತಹ ಗುತ್ತಿಗೆದಾರರನ್ನು ಕ್ಷೇತ್ರಕ್ಕೆ ಕಾಲಿಡದಂತೆ ನೋಡಿಕೊಳ್ಳಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಒಳಚರಂಡಿ ಕಾಮಗಾರಿ ಅವೈಜ್ಞಾನಿಕನೀರು ಸರಬರಾಜು ಒಳಚರಂಡಿ ಇಲಾಖೆಯ ಅಧಿಕಾರಿ ಶಿವಕುಮಾರ್ ಅವರವನ್ನು ತೀವ್ರ ತರಾಟೆಗೆ ತೆಗೆದುಕೊಂಡ ಶಾಸಕರು, ನಗರದಲ್ಲಿ ಎಲ್ಲಿ ನೋಡಿದರೂ ಒಳಚರಂಡಿ ಕಾಮಗಾರಿ ಅವೈಜ್ಞಾನಿಕವಾಗಿದೆ. ಇದರ ನಿರ್ವಹಣೆ ಮಾಡುವವರು ಯಾರು, ಎಲ್ಲಿ ನೋಡಿದರೂ ಒಳಚರಂಡಿ ಪೈಪ್‌ಗಳಲ್ಲಿ ತ್ಯಾಜ್ಯದ ನೀರು ರಸ್ತೆಗಳ ಮೇಲೆ ಹರಿಯುತ್ತಿದ್ದು, ಒಳಚರಂಡಿ ನಿರ್ವಹಣೆ ಮಾಡುವವರು ಯಾರು ಎಂದು ಪ್ರಶ್ನಿಸಿದರು.ನಗರದ ೧೮ ವಾರ್ಡ್ಗಳಲ್ಲಿ ಗುತ್ತಿಗೆ ಪಡೆದುವರು ಯುಜಿಡಿ ಸಂಪರ್ಕ ನೀಡಿ ೫ ವರ್ಷಗಳ ಕಾಲ ಯುಜಿಡಿ ನಿರ್ವಹಣೆ ಮಾಡಿಕೊಡಬೇಕು, ಆದರೆ ಯುಜಿಡಿ ಗುತ್ತಿಗೆ ಪಡೆದ ಗುತ್ತಿಗೆದಾರರು ನಾಪತ್ತೆಯಾಗಿದ್ದಾರೆ, ಯುಜಿಡಿ ಸಮಸ್ಯೆ ಯಾರನ್ನು ಕೇಳಬೇಕೆಂದು ಸಭೆಯಲ್ಲಿ ಹಾಜರಿದ್ದ ನಗರಸಭೆ ಸದಸ್ಯರು ನಗರದ ಯುಜಿಸಿ ಸಮಸ್ಯೆಯನ್ನು ಸಭೆಯಲ್ಲಿ ಶಾಸಕರ ಗಮನಕ್ಕೆ ತಂದರು.

ವಿದ್ಯುತ್ ಕಂಬ ತೆರವುಗೊಳಿಸಿ

ನಗರದ ಗೀತಾರಸ್ತೆ, ಪಾರಂಡಹಳ್ಳಿ, ಕಳ್ಳಿಕುಪ್ಪ, ಚಿಕ್ಕಕಲ್ಲಹಳ್ಳಿ ರಸ್ತೆಯ ಅಗಲೀಕರಣದ ಕಾಮಗಾರಿಗೆ ಅಡ್ಡವಿರುವ ವಿದ್ಯುತ್ ಕಂಬಗಳನ್ನು ತೆರವುಗೊಳಿಸಿ ರಸ್ತೆ ಕಾಮಗಾರಿ ಅನುವು ಮಾಡಿಕೊಡಬೇಕೆಂದು ಬೆಸ್ಕಾಂ ಅಧಿಕಾರಿಗಳಿಗೆ ಶಾಸಕರು ಸೂಚಿಸಿದರು.ಸಭೆಯಲ್ಲಿ ನಗರಸಭೆ ಪೌರಾಯುಕ್ತ ಪವನ್‌ಕುಮಾರ್, ಬೆಸ್ಕಾಂನಇಇ ಕವಿತಾ, ಎಇಇ.ರಾಜಶೇಖರ್, ಎಇಇ ಮಂಜುನಾಥ್,ಜೆ.ಇ ಸುಮತ್ರಿ, ಗುತ್ತಿಗೆದಾರರಾದ ಕೃಷ್ಣಾರೆಡ್ಡಿ,ಬಿ.ಎಂ.ವೆಂಕಟರಾಮಗೌಡ, ಭಾಸ್ಕರ್‌ನಾಯ್ಡ, ಶಂಕರ್‌ಶಿಲ್ಪಿ, ಎಇಇ.ರಾಜಶೇಖರ್, ಚಂಗಾರೆಡ್ಡಿ ಹಾಗೂ ಇನ್ನಿತರು ಉಪಸ್ಥಿತರಿದ್ದರು.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...