ಬಿಜೆಪಿ ಷಡ್ಯಂತ್ರದ ಕೇಸು । ಮುಖ್ಯಮಂತ್ರಿ, ಪತ್ನಿಗೆ ಕ್ಲೀನ್ ಚಿಟ್‌ಗೆ ಹರ್ಷ
ಬಿಜೆಪಿಯವರ ಷಡ್ಯಂತ್ರದಿಂದಾಗಿ ಮುಡಾ ಕೇಸ್ ದಾಖಲಾಗಿದೆ. ಈ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಪತ್ನಿಗೆ ಕ್ಲೀನ್ ಚಿಟ್ ದೊರೆತಿರುವುದು ಬಿಜೆಪಿಗೆ ನ್ಯಾಯಾಂಗದಿಂದ ತಕ್ಕ ಪಾಠ ದೊರೆತಂತಾಗಿದೆ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ತಿಳಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಮುಖ್ಯಮಂತ್ರಿ ಮತ್ತವರ ಪತ್ನಿಗೆ ಈಗ ಲೋಕಾಯುಕ್ತದಿಂದಲೇ ಕ್ಲೀನ್ ಚಿಟ್ ಸಿಕ್ಕಿರುವುದು ತಮಗೆ ಸಂತಸ ತಂದಿದೆ ಎಂದರು.ಒಬ್ಬ ಹಿಂದುಳಿದ ವರ್ಗಗಳ ನಾಯಕನಿಗೆ ಕಪ್ಪು ಚುಕ್ಕೆ ತರಲು ಬಿಜೆಪಿ ಯಾವ ರೀತಿ ಸಂಚು ಮಾಡಿತ್ತು ಎಂಬುದು ಇದರಿಂದಲೇ ತಿಳಿಯುತ್ತದೆ. ಮುಡಾದ 14 ನಿವೇಶನಗಳ ಬಗ್ಗೆ ಮಾತ್ರ ಚರ್ಚೆಯಾಗುತ್ತಿದೆ. ಆದರೆ, ಅಲ್ಲಿರುವ 125ಕ್ಕೂ ಹೆಚ್ಚು ನಿವೇಶನಗಳ ಬಗ್ಗೆ ಯಾಕೆ ಚರ್ಚೆಯಾಗುತ್ತಿಲ್ಲ? ಉಳಿದ 111 ನಿವೇಶನಗಳನ್ನು ನೀಡಿದ್ದು ಯಾರು? ಯಾವ ಆಧಾರದಲ್ಲಿ ಹಂಚಿಕೆ ಮಾಡಿದ್ದರು ಎಂಬುದೂ ಚರ್ಚೆಯಾಗಬೇಕಲ್ಲವೇ. ಅದರ ಬಗ್ಗೆ ಯಾಕೆ ತನಿಖೆಯಾಗಿಲ್ಲ ಎಂದು ಪ್ರಶ್ನಿಸಿದರು.
ಕೇಂದ್ರ ಸಚಿವ ನಿತಿನ್ ಗಡ್ಕರಿ ಪ್ರಧಾನಿಯಾದರೆ ಒಳ್ಳೆಯದಾಗುತ್ತದೆ. ಬಿಜೆಪಿ ಪಕ್ಷವೇ ಈ ದೇಶದಲ್ಲಿ ಇರಬಾರದು ಎಂಬುದು ನಮ್ಮ ಅಭಿಪ್ರಾಯವಿದೆ. ಆದರೆ, ಗಡ್ಕರಿ ಪ್ರಧಾನಿ ಆಗಬೇಕು. ದೇಶ ಇನ್ನೂ ಬೆಳೆಯಬೇಕಾದರೆ ಉಳಿದ 4 ವರ್ಷಗಳ ಅವಧಿಗೆ ನಿತಿನ್ ಗಡ್ಕರಿಗೆ ಪ್ರಧಾನಿಯಾಗಲು ಅವಕಾಶ ಮಾಡಿಕೊಟ್ಟರೆ ದೇಶ ಅಭಿವೃದ್ಧಿಯಾಗುತ್ತದೆ ಎಂದು ಹೇಳಿದರು.
ಗೃಹಲಕ್ಷ್ಮಿ ಹಣ ಮೂರು ತಿಂಗಳಿನದು ಬಾಕಿ ಇದ್ದು, ಅದನ್ನು ಕೊಡುವುದಾಗಿ ಮುಖ್ಯಮಂತ್ರಿಗಳೇ ಹೇಳಿದ್ದಾರೆ. ಕೇಂದ್ರ ಸರ್ಕಾರ 10 ಲಕ್ಷ ರು. ಕೊಡ್ತೀವಿ, 11 ಲಕ್ಷ ರು. ಕೊಡ್ತೀವಿ ಎಂದು ಹೇಳಿಯೇ 11 ವರ್ಷವಾಯ್ತು. ಅದನ್ನು ಯಾರೂ ಕೇಳುತ್ತಿಲ್ಲ. ಇದು ಚರ್ಚೆಯಾಗುತ್ತಿಲ್ಲ. ಕೇಂದ್ರ ಹೇಳಿದ್ದ ಕಾಮಗಾರಿಗಳ ಬಗ್ಗೆಯೂ ಚರ್ಚೆಯಾಗುತ್ತಿಲ್ಲ. ಮೂರು ತಿಂಗಳ ಗೃಹಲಕ್ಷ್ಮಿ ಹಣ ಬಂದಿಲ್ಲವೆಂದರೆ ಮಾತ್ರ ಕೇಳುತ್ತೀರಿ ಎಂದು ವ್ಯಂಗ್ಯವಾಡಿದರು.
ಮೇಕ್ ಇನ್ ಇಂಡಿಯಾ ಎಂದು ಹೇಳುತ್ತಾರೆ. ಏನಾಗಿದೆ ಅದರಲ್ಲಿ ಎಂಬ ಬಗ್ಗೆ ಕೇಂದ್ರ ಸರ್ಕಾರ ಚರ್ಚೆಗೆ ಬರಲಿ. ನಮಗೊಂದು ಕಡ್ಡಿಪಟ್ಟಣ ಬರಬೇಕಂದರೂ ಅದು ಚೀನಾದಿಂದ ಬರಬೇ
ನನ್ನ ಹಣೆಬರಹವನ್ನು ಯಾರೂ ಬದಲಾಯಿಸೋಕೆ ಆಗುವುದಿಲ್ಲ. ಯಾರೂ ಸಹ ಏನು ಮಾಡುವುದಕ್ಕೂ ಆಗುವುದಿಲ್ಲ. ದೇಶದ ಜನತೆಗೆ ಕೇಂದ್ರದ ಐವರು ಮಂತ್ರಿಗಳ ಹೆಸರು ಗೊತ್ತಿಲ್ಲ