ಸೂಕ್ತ ಚಿಕಿತ್ಸೆಯಿಂದ ಅಂಗವಿಕಲತೆ ಕಡಿಮೆ ಮಾಡಲು ಸಾಧ್ಯ

KannadaprabhaNewsNetwork |  
Published : Jan 15, 2024, 01:48 AM IST
ಮುಂಡಗೋಡ: ಪಟ್ಟಣದ ಲೊಯೋಲ ವಿಕಾಸ ಕೇಂದ್ರದಲ್ಲಿ ಶೀಘ್ರ ಮಧ್ಯಸ್ಥಿಕೆಯ (ರ‍್ಲಿ ಇಂಟರ್‌ವೆನ್ಶನ್), ಬೆಳವಣಿಗೆಯಲ್ಲಿ ಕುಂಠಿತ (ಡಿಲೆ ಡೆವೆಲಪ್‌ಮೆಂಟ್)  ಶಿಶು ಹಾಗೂ ಮಕ್ಕಳಿಗೆ ಸ್ರೀನಿಂಗ್ ಮತ್ತು ಚಿಕಿತ್ಸೆ, ವಿಶೇಷ ಚೇತನರಿಗೆ ಸೌಲಭ್ಯ ಹಾಗೂ ಶೀಘ್ರ ಮಧ್ಯಸ್ಥಿಕೆಯ ಕುರಿತು ತಿಳುವಳಿಕಾ ಶಿಬಿರ ಜರುಗಿತು | Kannada Prabha

ಸಾರಾಂಶ

ಪ್ರತಿ ಹಂತವನ್ನು ಸೂಕ್ಷ್ಮವಾಗಿ ಅವಲೋಕಿಸಿ ನ್ಯೂನ್ಯತೆಯ ಬಗ್ಗೆ ತಕ್ಷಣ ಕಾರ್ಯಮುಖರಾಗಿ, ಸೂಕ್ತ ಚಿಕಿತ್ಸೆ ಕೊಡಿಸಿದಲ್ಲಿ ಕುಂಠಿತ ಬೆಳವಣಿಗೆ ತಡೆಗಟ್ಟಬಹುದು

ಮುಂಡಗೋಡ: ಗರ್ಭಿಣಿಯರ ನಿಯಮಿತ ಪರೀಕ್ಷೆ, ಪೌಷ್ಠಿಕ ಆಹಾರ, ಶಿಶು ಹಾಗೂ ಮಕ್ಕಳ ಬೆಳವಣಿಗೆಯ ಹಂತದಲ್ಲಿ ಶೀಘ್ರ ಮಧ್ಯಸ್ಥಿಕೆ ಮತ್ತು ಸೂಕ್ತ ಚಿಕಿತ್ಸೆಯಿಂದ ಅಂಗವಿಕಲತೆ ಕಡಿಮೆ ಮಾಡಲು ಸಾಧ್ಯ ಎಂದು ಪ್ರಭಾರಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ರೂಪಾ ಅಂಗಡಿ ಹೇಳಿದರು.

ಪಟ್ಟಣದ ಲೊಯೋಲ ವಿಕಾಸ ಕೇಂದ್ರದಲ್ಲಿ ಶೀಘ್ರ ಮಧ್ಯಸ್ಥಿಕೆಯ (ಅರ‍್ಲಿ ಇಂಟರ್‌ವೆನ್ಶನ್), ಬೆಳವಣಿಗೆಯಲ್ಲಿ ಕುಂಠಿತ (ಡಿಲೆ ಡೆವೆಲಪ್‌ಮೆಂಟ್) ಶಿಶು ಹಾಗೂ ಮಕ್ಕಳಿಗೆ ಸ್ರೀನಿಂಗ್ ಮತ್ತು ಚಿಕಿತ್ಸೆ, ವಿಶೇಷಚೇತನರಿಗೆ ಸೌಲಭ್ಯ ಹಾಗೂ ಶೀಘ್ರ ಮಧ್ಯಸ್ಥಿಕೆಯ ಕುರಿತು ತಿಳಿವಳಿಕಾ ಶಿಬಿರ ಉದ್ಘಾಟಿಸಿ ಮಾತನಾಡಿದರು.

ದಿವ್ಯಾಂಗ ವ್ಯಕ್ತಿಗಳ ಕೌಶಲ್ಯಾಭಿವೃದ್ಧಿ, ದಾವಣಗೆರೆಯ ಪುನರ್ವಸತಿ ಮತ್ತು ಸಬಲೀಕರಣಗಳ ಸಂಯುಕ್ತ ಪ್ರಾದೇಶಿಕ ಕೇಂದ್ರದ ನುರಿತ ತಜ್ಞ ಡಾ.ಪಂಕಜ್ ಮತ್ತು ಡಾ. ಖಲೀದ್ ಚಿಕಿತ್ಸೆ ನೀಡುವ ಮೂಲಕ ವಂಶವಾಹಿನಿ ಹಾಗೂ ಬಡತನ ಅಪೌಷ್ಠಿಕತೆಗೆ ಪ್ರಮುಖ ಕಾರಣವಾಗಿದ್ದು, ಶಿಶು ಹಾಗೂ ಮಕ್ಕಳ ಬೆಳವಣಿಗೆಯ ಆರಂಭದ ೫ ವರ್ಷದೊಳಗಿನ ಬೆಳವಣಿಗೆಯ ಗೋಲ್ಡನ್ ಏಜ್ ಹಂತದಲ್ಲಿ ಪ್ರತಿ ಹಂತವನ್ನು ಸೂಕ್ಷ್ಮವಾಗಿ ಅವಲೋಕಿಸಿ ನ್ಯೂನ್ಯತೆಯ ಬಗ್ಗೆ ತಕ್ಷಣ ಕಾರ್ಯಮುಖರಾಗಿ, ಸೂಕ್ತ ಚಿಕಿತ್ಸೆ ಕೊಡಿಸಿದಲ್ಲಿ ಕುಂಠಿತ ಬೆಳವಣಿಗೆ ತಡೆಗಟ್ಟಬಹುದೆಂದು ಮಾಹಿತಿ ನೀಡಿದ ಅವರು, ವಿಶೇಷಚೇತನರಿಗೆ ಸಿಆರ್ ಸಿಯಿಂದ ದೊರಕುವ ಸೌಲಭ್ಯಗಳ ಬಗ್ಗೆ ವಿವರ ನೀಡಿದರು.

ಬೆಳವಣಿಗೆ ಹಂತದಲ್ಲಿಯ ನ್ಯೂನ್ಯತೆ ಪತ್ತೆಹಚ್ಚಲು ೬ ವರ್ಷದೊಳಗಿನ ೨೧೫ ಮಕ್ಕಳ ಸ್ರೀನಿಂಗ್ ನಡೆಸಿ, ಚಿಕಿತ್ಸೆಗೆ ಸಲಹೆ ನೀಡಿದರಲ್ಲದೇ, ೪೮ ಮಕ್ಕಳನ್ನು ಹೆಚ್ಚಿನ ಚಿಕಿತ್ಸೆಗೆ ಸಿಆರ್‌ಸಿ ದಾವಣಗೆರೆಗೆ ರೆಫರ್ ಮಾಡಿದರು. ೧೧೯ ವಿಶೇ಼ಷಚೇತನ ಮಕ್ಕಳನ್ನು ಪರಿಕ್ಷೀಸಿ, ೩೪ ಮಕ್ಕಳಿಗೆ ವಿಶೇಷಚೇತನರಿಗೆ ಅಗತ್ಯವಿರುವ ಬ್ರೇನಿ ಕಿಟ್, ಹಿಯರಿಂಗ್ ಎಡ್, ಸ್ಮಾರ್ಟ್ ಫೋನ್, ಸಿಪಿ ಚೇರ್-ಪರಿಕರಕ್ಕೆ ನೊಂದಾಯಿಸಿಕೊಂಡರು.

ದಿ. ಅಸೋಶಿಯೇಶನ್ ಆಪ್ ಪೀಪಲ್ ವಿತ್ ಡಿಸೆಬಿಲಿಟಿ, ಬೆಂಗಳೂರು ತಾಲೂಕಾಸ್ಪತ್ರೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಕ್ಷಣ ಇಲಾಖೆ, ಮುಂಡಗೋಡ ಹಾಗೂ ಲೊಯೋಲ ವಿಕಾ ಸ ಕೇಂದ್ರ ಇವರ ಸಹಯೋಗದೊಂದಿಗೆ ಶಿಬಿರ ಆಯೋಜಿಸಲಾಗಿತ್ತು. ಲೊಯೋಲ ವಿಕಾಸ ಕೇಂದ್ರ ನಿರ್ದೇಶಕ ಅನಿಲ್ ಡಿಸೋಜಾ, ಡಾ.ಸಿಸ್ಟರ್ ಗ್ಲಾಡಿಸ್, ಡಾ.ಮಧುರಾ ದೇವಿ, ಪ್ರೊಪೇತಾ,ಶೋಭಾ ಭಟ್ಕಳ ಉಪಸ್ಥಿತರಿದ್ದರು. ಮಂಗಳಾ ಮೋರೆ ನಿರೂಪಿಸಿದರು. ಮಲ್ಲಮ್ಮ ನೀರಲಗಿ ಸ್ವಾಗತಿಸಿದರು. ಲಕ್ಷಣ ಮೂಳೆ ವಂದಿಸಿದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ