ಕನ್ನಡಪ್ರಭ ವಾರ್ತೆ ವಿಜಯಪುರ
ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ವೃತ್ತಿ ರಂಗಭೂಮಿ ಕಲಾವಿದರ ಸಂಘದ ಆಶ್ರಯದಲ್ಲಿ ವಿಶ್ವ ರಂಗಭೂಮಿ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಆಧುನಿಕತೆಯ ಭರಾಟೆಯಲ್ಲಿ ದೇಶದ, ನಾಡಿನ ನಾಟಕಗಳ ಪ್ರದರ್ಶನ ಕುಂಟಿತಗೊಂಡಿವೆ ಎಂದರು.
ಕಸಾಪ ಗೌರವ ಕೋಶಾಧ್ಯಕ ಡಾ.ಸಂಗಮೇಶ ಮೇತ್ರಿ ಮಾತನಾಡಿ, ನಾಟಕದಲ್ಲಿ ಭಾಷೆ, ಸಂಸ್ಕೃತಿ, ಓದು ಬರಹ, ಕಲೆ , ಸಂಗೀತ, ನೃತ್ಯ ಮುಂತಾದ ಸಂಕೀರ್ಣತೆ ಹೊಂದಿದ ರಂಗಭೂಮಿ ಕಲಾವಿದರು ಅತ್ಯಂತ ಅನುಭವಿಗಳು. ದೇಶದ ಅನೇಕ ಶ್ರೇಷ್ಠ ಸಿನಿಮಾಕ್ಕೆ ಬಂದವರೆಲ್ಲರೂ ರಂಗಭೂಮಿಯಿಂದ ಎಂದರು.ಕರ್ನಾಟಕ ನಾಟಕ ಅಕಾಡೆಮಿ ಮಾಜಿ ಅಧ್ಯಕ್ಷ ಎಲ್ .ಬಿ ಶೇಖ ಮಾತನಾಡಿ, ಉಸಿರೇ ನಾಟಕವೆಂದು ಬದುಕಿದವರು. ಕಿಸೆಯಲ್ಲಿ ಮೊಬೈಲ್ ಬಂದಾಗಿನಿಂದ ನಾಟಕಗಳ ಪ್ರದರ್ಶನ ಕುಂಠಿತವಾಗಿವೆ ಎಂದರು.
ಇದೇ ಸಂದರ್ಭದಲ್ಲಿ ರಂಗಭೂಮಿ ಕಲಾವಿದರ ಸಂಗಮೇಶ ಬದಾಮಿ ವಿಶ್ವ ರಂಗಭೂಮಿ ಸಂದೇಶ ವಾಚಿಸಿದರು ರಂಗ ಭೂಮಿಯ ಹಿರಿಯ ಸಂಘಟಿಕ ವಿಶ್ವೇಶ್ವರ ಸುರಪುರ, ಕರ್ನಾಟಕ ನಾಟಕ ಅಕಾಡೆಮಿಯ ಸದಸ್ಯ ರಾಜಣ್ಣ ಜೇವರಗಿ, ರಂಗಸಮಾಜ ಕರ್ನಾಟಕ ಸರಕಾರ ಮಹಾಂತೇಶ ಗಜೇಂದ್ರಗಡ, ಕರ್ನಾಟಕ ನಾಟಕ ಅಕಾಡೆಮಿಯ ಸದಸ್ಯ ಜ್ಯೋತಿ ಮಂಗಳೂರ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯೆ ದ್ರಾಕ್ಷಾಯಿಣಿ ಹುಡೇದ, ಲಲಿತಕಲಾ ಅಕಾಡೆಮಿಯ ಸದಸ್ಯೆ ರಾಜಶ್ರೀ ಮೋಪಗಾರ ಅವರನ್ನು ಸನ್ಮಾನಿಸಿದರು.