ಮತಹಕ್ಕಿಗೆ ಚ್ಯುತಿ ಬಾರದಂತೆ ಕರ್ತವ್ಯ ನಿರ್ವಹಿಸಿ

KannadaprabhaNewsNetwork |  
Published : Jul 13, 2026, 01:00 AM IST
1ಎಚ್.ಎಲ್.ಐ1.  ತಾಲೂಕಿನ ಗೊಲ್ಲರಹಳ್ಳಿಯ ತರಳಬಾಳು ಸಮುದಾಯ ಭವನದಲ್ಲಿ ತಾಲೂಕು ಆಡಳಿತದಿಂದ ವಿಶೇಷ ತೀವ್ರ ಪರಿಷ್ಕರಣೆ 2026 ಅಂಗವಾಗಿ ಬಿಎಲ್‌ಒ,ನೋಡಲ್ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ  ಹಮ್ಮಿಕೊಂಡಿದ್ದ ಕಾರ್ಯಗಾರವನ್ನು ಶಾಸಕ ಡಿ.ಜಿ.ಶಾಂತನಗೌಡ ಉದ್ಘಾಟಿಸಿ ಮಾತನಾಡಿದರು.ಹೊನ್ನಾಳಿ ಉಪವಿಭಾಗಾಧಿಕಾರಿ ಎಚ್.ಬಿ.ಚನ್ನಪ್ಪ ಹಾಗೂ ಇತರರು ಇದ್ದರು. | Kannada Prabha

ಸಾರಾಂಶ

ಯಾರ ಮತದಾರರ ಹಕ್ಕಿಗೂ ಚ್ಯುತಿ ಬಾರದಂತೆ ಕರ್ತವ್ಯ ನಿರ್ವಹಿಸಬೇಕು. ಯಾರು ಎರಡ್ಮೂರು ಕಡೆ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ಇಟ್ಟುಕೊಂಡಿದ್ದಾರೋ ಅಂತಹವರ ಹೆಸರನ್ನು ಕೂಡಲೇ ಡಿಲಿಟ್ ಮಾಡಿ ಎಂದು ಶಾಸಕ ಡಿ.ಜಿ.ಶಾಂತನಗೌಡ ಹೇಳಿದ್ದಾರೆ.

- ಬಿಎಲ್‌ಒ, ನೋಡಲ್ ಅಧಿಕಾರಿಗಳ ಕಾರ್ಯಾಗಾರದಲ್ಲಿ ಶಾಸಕ ಶಾಂತನಗೌಡ

- - -

ಕನ್ನಡಪ್ರಭ ವಾರ್ತೆ ಹೊನ್ನಾಳಿ

ಯಾರ ಮತದಾರರ ಹಕ್ಕಿಗೂ ಚ್ಯುತಿ ಬಾರದಂತೆ ಕರ್ತವ್ಯ ನಿರ್ವಹಿಸಬೇಕು. ಯಾರು ಎರಡ್ಮೂರು ಕಡೆ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ಇಟ್ಟುಕೊಂಡಿದ್ದಾರೋ ಅಂತಹವರ ಹೆಸರನ್ನು ಕೂಡಲೇ ಡಿಲಿಟ್ ಮಾಡಿ ಎಂದು ಶಾಸಕ ಡಿ.ಜಿ.ಶಾಂತನಗೌಡ ಹೇಳಿದರು.

ಶನಿವಾರ ತಾಲೂಕಿನ ಗೊಲ್ಲರಹಳ್ಳಿಯ ತರಳಬಾಳು ಸಮುದಾಯ ಭವನದಲ್ಲಿ ತಾಲೂಕು ಆಡಳಿತದಿಂದ ವಿಶೇಷ ತೀವ್ರ ಪರಿಷ್ಕರಣೆ 2026 ಅಂಗವಾಗಿ ಬಿಎಲ್‌ಒ, ನೋಡಲ್ ಅಧಿಕಾರಿ ಹಾಗೂ ಸಿಬ್ಬಂದಿಗೆ ಹಮ್ಮಿಕೊಂಡಿದ್ದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಬಿಎಲ್‌ಒಗಳ ಜತೆ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷದ ಬಿಎಲ್‌ಎಗಳು ಸಹ ಬರುತ್ತಾರೆ. ಅವರನ್ನು ವಿಶ್ವಾಸಕ್ಕೆ ತೆಗದುಕೊಂಡು ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಬೇಕು ಅಥವಾ ಎರಡು ಕಡೆ ಹೆಸರಿದ್ದರೆ ಅಂತಹವರ ಹೆಸರನ್ನು ಮುಲಾಜಿಲ್ಲದೇ ಮತಪಟ್ಟಿಯಿಂದ ತೆಗೆಸಬೇಕು. ಕೆಲವರು ಕೂಲಿಗೆ ಹೋಗಿರುತ್ತಾರೆ. ಅಂತಹವರು ಬರುವವರೆಗೆ ಕಾಯ್ದು ಫಾರಂ ತುಂಬಿಸಬೇಕು. ಇದು ಸಾಧ್ಯವಾಗದೇ ಇದ್ದರೆ ನೀವೇ ಫಾರಂ ತುಂಬಿಸಿ ಅವರ ಹೆಸರನ್ನು ಸೇರ್ಪಡೆ ಮಾಡಿಸಿ, ಮುಂದಿನ ದಿನಗಳಲ್ಲಿ ಸರ್ಕಾರದ ಸೌಲಭ್ಯಗಳನ್ನು ನೀಡಬೇಕಾದರೆ ಆ ಭಾಗದಲ್ಲಿ ಇವರು ಮತದಾರರೋ ಅಲ್ಲವೋ ಎಂದು ಪರಿಶೀಲಿಸಬೇಕಾದ ಸ್ಥಿತಿ ಬರಬಹುದು. ಆದ್ದರಿಂದ ಮತದಾರರ ಹೆಸರು ಕೈಬಿಡುವ ಮೊದಲು ಪ್ರಾಮಾಣಿಕತೆಯಿಂದ ಪರಿಶೀಲಿಸಿ ಎಂದರು.

ತಹಸೀಲ್ದಾರ್ ಕವಿರಾಜ್ ಮಾತನಾಡಿ, ಹೊನ್ನಾಳಿ ಹಾಗೂ ನ್ಯಾಮತಿ ತಾಲೂಕಿನಲ್ಲಿ 245 ಬೂತ್‌ಗಳಿದ್ದು, 245 ಬಿಎಲ್‌ಒಗಳು, ಬಿಜೆಪಿ ಹಾಗೂ ಕಾಂಗ್ರೆಸ್‌ನ ತಲಾ 245 ಬಿಎಲ್‌ಎಗಳು,25 ನೋಡಲ್‌ ಅಧಿಕಾರಿಗಳು ಹಾಗೂ ಮೇಲ್ವಿಚಾರಕರು ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ತೊಡಗಿದ್ದಾರೆ. 2 ಲಕ್ಷ ಮತದಾರರಲ್ಲಿ 1.98 ಲಕ್ಷ ಮತದಾರರಿಗೆ ಫಾರಂ ನೀಡಿದ್ದಾರೆ. ಬಾಕಿ 2 ಸಾವಿರ ಮತದಾರರಿಗೆ ಫಾರಂ ನೀಡಬೇಕಿದೆ. 99421 ಫಾರಂ ಗಣಕಿಕರಣ ಆಗಿದ್ದು, ಶೇ 40.45 ಗುರಿ ಸಾಧನೆಯಾಗಿದೆ ಎಂದು ವಿವರಿಸಿದರು.

ಹೊನ್ನಾಳಿ ಉಪವಿಭಾಗಾಧಿಕಾರಿ ಎಚ್.ಬಿ.ಚನ್ನಪ್ಪ ಮಾತನಾಡಿ, ಮತದಾರರ ಪಟ್ಟಿಯಲ್ಲಿನ ದೋಷಗಳನ್ನು ತೆಗೆದು, ಅರ್ಹ ಮತದಾರರ ಹೆಸರು ಪಟ್ಟಿಯಲಿದ್ದರೆ ಮುಕ್ತ ಹಾಗೂ ನ್ಯಾಯ ಸಮ್ಮತ ಚುನಾವಣೆ ನಡೆಸಲಿಕ್ಕೆ ಮತಪಟ್ಟಿ ಪರಿಷ್ಕರಣೆ ಸಹಾಯಕವಾಗುತ್ತದೆ ಎಂದರು.

ಜಿಲ್ಲಾಧಿಕಾರಿ ಕಚೇರಿಯ ಸುನಿಲ್‌ಕುಮಾರ್, ತಾಲೂಕುಮಟ್ಟದ ಅಧಿಕಾರಿಗಳಾದ ಜ್ಯೋತಿ, ಇ.ಒ. ಧರಣೇಶ್, ಬಿಇಒ ನಿಂಗಪ್ಪ, ತುಂಗಾ ಮೇಲ್ದೆಂಡೆ ಎಇಇ ಮಂಜುನಾಥ್, ಗ್ರಾಮೀಣಾಭಿವೃದ್ಧಿ ಎಇಇ ಸೋಮ್ಲಾ ನಾಯ್ಕ್, ಬಿಸಿಎಂ ಅಧಿಕಾರಿ ತಿಪ್ಪೇಸ್ವಾಮಿ, ಕೃಷಿ ಸಹಾಯಕ ನಿರ್ದೇಶಕ ವಿಶ್ವನಾಥ್, ರಮೇಶ್ ತೋಟಗಾರಿಕೆ, ಉಪ ತಹಸೀಲ್ದಾರ್ ಚಂದ್ರಪ್ಪ ಇತರರು ಇದ್ದರು.

- - -

-11ಎಚ್.ಎಲ್.ಐ1:

ಹೊನ್ನಾಳಿಯಲ್ಲಿ ಬಿಎಲ್‌ಒ, ನೋಡಲ್ ಅಧಿಕಾರಿ ಹಾಗೂ ಸಿಬ್ಬಂದಿಗೆ ನಡೆದ ಕಾರ್ಯಾಗಾರವನ್ನು ಶಾಸಕ ಡಿ.ಜಿ.ಶಾಂತನಗೌಡ ಉದ್ಘಾಟಿಸಿ ಮಾತನಾಡಿದರು. ಹೊನ್ನಾಳಿ ಎಸಿ ಎಚ್.ಬಿ.ಚನ್ನಪ್ಪ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪರ್ಯಾಯ ಬೆಳೆಯಿಂದ ಮಣ್ಣಿನ ಫಲವತ್ತತೆ ಹೆಚ್ಚಳ
ಗದಗ ಜಿಲ್ಲೆಯ 898 ಮಕ್ಕಳಲ್ಲಿ ಅಪೌಷ್ಟಿಕತೆ!