ಕರ್ತವ್ಯ ಲೋಪವೆಸಗುವ ಅಧಿಕಾರಿಗಳು, ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ: ಎಎಸ್ಪಿ ಈ.ಗಂಗಾಧರಸ್ವಾಮಿ

KannadaprabhaNewsNetwork |  
Published : Apr 25, 2024, 01:00 AM IST
24ಕೆಎಂಎನ್ ಡಿ26 | Kannada Prabha

ಸಾರಾಂಶ

ಮದ್ದೂರು ಕ್ಷೇತ್ರ ವ್ಯಾಪ್ತಿ ಚುನಾವಣೆ ಕರ್ತವ್ಯಕ್ಕೆ 1 ಡಿಎಸ್ಪಿ, 3 ಇನ್ಸ್ ಪೆಕ್ಟರ್ , 9 ಪಿಎಸ್ಐ ಒಳಗೊಂಡಂತೆ 400 ಸಿಬ್ಬಂದಿ ನಿಯೋಜಿಸಲಾಗಿದೆ. ಮುಕ್ತ, ನ್ಯಾಯ ಸಮ್ಮತ ಚುನಾವಣೆ ನಡೆಸುವ ಜೊತೆಗೆ ಮತಗಟ್ಟೆಗಳಲ್ಲಿ ಯಾವುದೇ ಕಾನೂನು ಬಾಹಿರ ಚಟುವಟಿಕೆ ನಡೆಯದಂತೆ ತೀವ್ರ ಕಟ್ಟೆಚರ ವಹಿಸಿ ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಬೇಕು.

ಕನ್ನಡ ಪ್ರಭ ವಾರ್ತೆ ಮದ್ದೂರು

ಮತದಾನ ಕೇಂದ್ರಗಳಲ್ಲಿ ಕರ್ತವ್ಯ ಲೋಪವೆಸಗುವ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ವಿರುದ್ಧ ಶಿಸ್ತುಕ್ರಮ ಜರುಗಿಸುವುದು ಅನಿವಾರ್ಯ ಎಂದು ಅಪರ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಈ.ಗಂಗಾಧರಸ್ವಾಮಿ ಬುಧವಾರ ಹೇಳಿದರು.

ಪಟ್ಟಣದ ಎಚ್.ಕೆ. ವೀರಣ್ಣಗೌಡ ಕಾಲೇಜ್ ಆವರಣದಲ್ಲಿ ಲೋಕಸಭಾ ಚುನಾವಣೆ ಮದ್ದೂರು ವಿಧಾನಸಭಾ ಕ್ಷೇತ್ರದ ಮತಗಟ್ಟೆಗಳ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಹಾಗೂ ಗೃಹರಕ್ಷಕ ದಳದ ಸಿಬ್ಬಂದಿಯನ್ನು ಉದ್ದೇಶಿಸಿ ಮಾತನಾಡಿದರು.

ಮದ್ದೂರು ಕ್ಷೇತ್ರ ವ್ಯಾಪ್ತಿ ಚುನಾವಣೆ ಕರ್ತವ್ಯಕ್ಕೆ 1 ಡಿಎಸ್ಪಿ, 3 ಇನ್ಸ್ ಪೆಕ್ಟರ್ , 9 ಪಿಎಸ್ಐ ಒಳಗೊಂಡಂತೆ 400 ಸಿಬ್ಬಂದಿ ನಿಯೋಜಿಸಲಾಗಿದೆ. ಮುಕ್ತ, ನ್ಯಾಯ ಸಮ್ಮತ ಚುನಾವಣೆ ನಡೆಸುವ ಜೊತೆಗೆ ಮತಗಟ್ಟೆಗಳಲ್ಲಿ ಯಾವುದೇ ಕಾನೂನು ಬಾಹಿರ ಚಟುವಟಿಕೆ ನಡೆಯದಂತೆ ತೀವ್ರ ಕಟ್ಟೆಚರ ವಹಿಸಿ ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಬೇಕು ಎಂದು ಸೂಚಿಸಿದರು.

ಮತದಾನದ ವೇಳೆ ಯಾವುದೇ ಅಕ್ರಮ ಚಟುವಟಿಕೆ, ಗಲಭೆ, ರಾಜಕೀಯ ವ್ಯಕ್ತಿಗಳ ಮತ್ತು ಬೆಂಬಲಿಗರು ಮತಗಟ್ಟೆಗಳಿಗೆ ಪ್ರವೇಶ ಮಾಡದಂತೆ ತೀವ್ರ ನಿಗಾವಹಿಸಬೇಕು. ಯಾವುದೇ ಅಕ್ರಮ ಚಟುವಟಿಕೆ ಅಥವಾ ತೊಂದರೆಗಳು ಉಂಟಾದ ವೇಳೆ ಸಂಬಂಧಪಟ್ಟ ಸೆಕ್ಟರ್ ಅಧಿಕಾರಿಗಳು ಅಥವಾ ಗಸ್ತು ವಾಹನಕ್ಕೆ ಶೀಘ್ರವಾಗಿ ಮಾಹಿತಿ ನೀಡುವಂತೆ ಸೂಚನೆ ನೀಡಿದರು.

ಪೊಲೀಸ್ ಸಿಬ್ಬಂದಿಗೆ ವಸತಿ ಮತ್ತು ಊಟದ ವ್ಯವಸ್ಥೆಯಲ್ಲಿ ಲೋಪವಾಗದಂತೆ ಎಚ್ಚರವಹಿಸಲಾಗಿದೆ ಎಂದು ಮಳವಳ್ಳಿ ಉಪ ವಿಭಾಗದ ಡಿವೈಎಸ್ಪಿ ಕೃಷ್ಣಪ್ಪ ತಿಳಿಸಿದರು. ಮದ್ದೂರು ವೃತ್ತ ನಿರೀಕ್ಷಕ ಕೆ .ಆರ್. ಪ್ರಸಾದ್, ಗ್ರಾಮಾಂತರ ವಿಭಾಗದ ವೃತ ನಿರೀಕ್ಷಕ ವೆಂಕಟೇಗೌಡ, ಕೆ. ಎಂ. ದೊಡ್ಡಿ ಠಾಣೆ ವೃತ್ತನೀರೀಕ್ಷಕ ಆನಂದ್, ಅರಕ್ಷಕ ಉಪ ನಿರೀಕ್ಷಕರಾದ ಮಂಜುನಾಥ, ಮಲ್ಲಪ್ಪ ಸಂಗಪ್ಪ ಕಂಬಾರ, ನರೇಶ್ ಇದ್ದರು.

PREV

Recommended Stories

ವೈದ್ಯರ ಕೊರತೆಗೆ ನಲುಗಿದ ಸಾರ್ವಜನಿಕ ಆಸ್ಪತ್ರೆ
ಸತ್ಯಕಾಮರ ಸುಮ್ಮನೆಯಲ್ಲಿ ಕಸಾಪ ವಾರ್ಷಿಕ ಸಭೆ: ಡಾ.ಮಹೇಶ ಜೋಷಿ