-ಸ್ವಾತಂತ್ರ ದಿನಾಚರಣೆ ಸಮಾರಂಭದ ಪೂರ್ವಭಾವಿ ಸಭೆಯಲ್ಲಿ ತಹಸೀಲ್ದಾರ್ ಎಚ್ಚರಿಕೆ
-----ಕನ್ನಡಪ್ರಭ ವಾರ್ತೆ ಹೊಳಲ್ಕೆರೆ
ಸ್ವಾತಂತ್ರ್ಯ ದಿನಾಚರಣೆ ಸಮಾರಂಭ ಅದ್ಧೂರಿಯಾಗಿ ಆಚರಿಸಲು ತಾಲೂಕು ಮಟ್ಟದ ಆಧಿಕಾರಿಗಳು ಜೊತೆಯಲ್ಲಿದ್ದು ಈ ಕಾಯರ್ಕ್ರಮವನ್ನು ಯಶಸ್ವಿಗೊಳಿಸಿಕೊಡಬೇಕು ಎಂದು ತಹಸೀಲ್ದಾರ್ ಬೇಬಿ ಪಾತಿಮ ಹೇಳಿದರು.ತಾಲೂಕು ಕಛೇರಿ ಸಭಾಂಗಣದಲ್ಲಿ ನಡೆದ ಸ್ವಾತಂತ್ರ ದಿನಾಚರಣೆ ಸಮಾರಂಭದ ಪೂರ್ವಭಾವಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು. ಶಾಸಕರು ಹೊಸ ಕ್ರೀಡಾಂಗಣದಲ್ಲಿ ಸ್ವಾತಂತ್ರ ದಿನ ಆಚರಿಸಲು ತಿಳಿಸಿದ್ದಾರೆ. ಕಾರ್ಯಕ್ರಮದಲ್ಲಿ ಅಧಿಕಾರಿಗಳು ಗೈರು ಹಾಜರಾದರೆ. ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡುವ ಮೂಲಕ ಶಿಸ್ತು ಕ್ರಮ ಜರುಗಿಸುತ್ತೇನೆ ಎಂದರು.
ಸಮಾರಂಭದಲ್ಲಿ ಪೋಲಿಸರು, ಗೃಹ ರಕ್ಷಕದಳ, ಎನ್.ಸಿ.ಸಿ, ಶಾಲಾ ಮಕ್ಕಳುಗಳು, ಕ್ರೀಡಾಂಗಣಕ್ಕೆ ನಿಗದಿತ ಸಮಯಕ್ಕೆ ಹಾಜರಾಗಬೇಕು ಎಂದು ತಿಳಿಸುತ್ತಾ ನಿಯಮಾವಳಿಯ ಪ್ರಕಾರ ಕ್ಷೇತ್ರದ ಶಾಸಕ ಡಾ.ಎಂ.ಚಂದ್ರಪ್ಪ ಸಮಾರಂಭದ ಅಧ್ಯಕ್ಷತೆ ವಹಿಸುವರು. ತಹಸೀಲ್ದಾರ್ ಬೇಬಿ ಫಾತೀಮ ಧ್ವಜೋರೋಹಣ ಮಾಡುವರು, ನಿಯಮಾವಳಿಯಂತೆ ಅತಿಥಿ ಗಣ್ಯರನ್ನು ಕರೆಯಲಾಗವುದು ಎಂದರು.ಅಧಿಕಾರಿಗಳು, ಸಾವರ್ಜನಿಕ ಕೆಲಸಗಳಿಗೆ ತೊಂದರೆಯಾಗದಂತೆ ಇದೇ ತಿಂಗಳಲ್ಲಿ 15ರಂದು ಸ್ವಾತಂತ್ರ್ಯ ದಿನಾಚರಣೆ 19ರಂದು ಶ್ರೀ ನುಲಿಯಚಂದ್ರಯ್ಯ ಜಯಂತಿ. 20ರಂದು ಶ್ರೀಬ್ರಹ್ಮಶ್ರೀನಾರಾಯಣಗುರು ಜಯಂತಿ 20ರಂದು ಶ್ರೀ ದೇವರಾಜ ಆರಸು ಜಯಂತಿ 26ರಂದು ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಜಯಂತಿಗಳ ಆಚರಣೆಗೆ ಸಂಬಂಧಪಟ್ಟಂತೆ ಸಭೆಯನ್ನು ಕರೆಯಲಾಗಿದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀನಿವಾಸ್, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎನ್ ಶಿವಮೂರ್ತಿ, ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಹನುಮಂತರಾಯಪ್ಪ ಹನುಮಂತಪ್ಪ .ಬಿ.ಸಿ.ಎಂ ಅಧಿಕಾರಿ ಪ್ರದೀಪ್, ರೇಖಾ. ಚೇತನ್ ತಾಲೂಕು ಮಟ್ಟದ ಅಧಿಕಾರಿ ಮತ್ತು ಇತರರು ಇದ್ದರು.---------
ಫೋಟೊ: (5 ಹೆಚ್.ಎಲ್.ಕೆ 1)ಹೊಳಲ್ಕೆರೆ ತಾಲೂಕು ಕಛೇರಿ ಸಭಾಂಗಣದಲ್ಲಿ ನಡೆದ ಸ್ವಾತಂತ್ರ ದಿನಾಚರಣೆ ಸಮಾರಂಭದ ಪೂರ್ವಭಾವಿ ಸಭೆಯಲ್ಲಿ ತಹಸೀಲ್ದಾರ್ ಬೇಬಿ ಫಾತೀಮ ಮಾತನಾಡಿದರು.