ಹರಿಹರ: ಕಬಡ್ಡಿ ಟೀಮ್ ವರ್ಕ್ ಕ್ರೀಡೆಯಾಗಿದ್ದು, ಆಟಗಾರರಲ್ಲಿ ಶಿಸ್ತು, ಏಕಾಗ್ರತೆ ಹೆಚ್ಚಿಸುವುದು ಹಾಗೂ ಮನಸ್ಸನ್ನು ಚುರುಕುಗೊಳಿಸಲು ಸಹಾಯ ಮಾಡುತ್ತದೆ ಎಂದು ಅನುದಾನಿತ ಪ್ರಾಥಮಿಕ ಶಾಲೆ ಶಿಕ್ಷಕರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಮಲ್ಲಿಕಾರ್ಜುನ ಭಾವಿಕಟ್ಟಿ ಹೇಳಿದರು.
ಕಬ್ಬಡಿ ಭಾರತದಲ್ಲಿ ಅತ್ಯಂತ ಜನಪ್ರಿಯ ಕ್ರೀಡೆಯಾಗಿದೆ. ಅದನ್ನು ತ್ವರಿತವಾಗಿ ಕರಗತ ಮಾಡಿಕೊಳ್ಳಲು ಸಾಕಷ್ಟು ತ್ರಾಣ, ಶಕ್ತಿ, ವೇಗ ಕಾರ್ಯ ತಂತ್ರದ ಮನಸ್ಥಿತಿಯ ಅಗತ್ಯವಿದೆ. ಕಬಡ್ಡಿ ಕ್ರೀಡೆ ವೈಶಿಷ್ಟವೆಂದರೆ, ಕ್ರಿಕೆಟ್, ಫುಟ್ಬಾಲ್ ಇತ್ಯಾದಿ ಯಾವುದೇ ಸಲಕರಣೆಗಳು ಅಗತ್ಯವಿಲ್ಲ. ಆಸಕ್ತಿಯಿಂದ ಭಾಗವಹಿಸಿದಾಗ ಯಶಸ್ಸು ಸಾಧ್ಯ ಎಂದು ಕ್ರೀಡಾಪಟುಗಳಿಗೆ ತಿಳಿಸಿದರು.
ಅಧ್ಯಕ್ಷತೆಯನ್ನು ದೇವರಾಜ್ ದ್ಯಾವಣ್ಣ ವಹಿಸಿದ್ದರು. ಹಾವೇರಿ ಜಿಲ್ಲಾ ಕಬಡ್ಡಿ ಸಂಸ್ಥೆಯ ಮಾಜಿ ಸಹ ಕಾರ್ಯದರ್ಶಿ ಮಲ್ಲನಗೌಡ ಮುದಿಗೌಡರ, ಖಜಾಂಚಿ ಚಂದ್ರಪ್ಪ, ಕಾರ್ಯದರ್ಶಿ ಶ್ರೀಧರ್ ಕಾಗಿನೆಲಿ, ರಾಷ್ಟ್ರೀಯ ತೀರ್ಪುಗಾರರಾದ ಜಿ.ಜಿ. ಹಿರೇಮಠ, ಶ್ರೀಕಾಂತ್, ಸದಸ್ಯರಾದ ಉಮೇಶ್, ಪ್ರಾ.ಶಾ. ಬಾವಿಕಟ್ಟಿ ಹಾಗೂ ಸ್ಥಳೀಯ ಕಬಡ್ಡಿ ಆಟಗಾರರು, ಕ್ರೀಡಾಪ್ರೇಮಿಗಳು ಭಾಗವಹಿಸಿದ್ದರು.- - - -01ಎಚ್‍ಆರ್‍ಆರ್03.ಜೆಪಿಜಿ:
ಹರಿಹರ ಸಮೀಪದ ಕವಲೆತ್ತು ಗ್ರಾಮದಲ್ಲಿ ಶನಿವಾರ ಕಬಡ್ಡಿ ಕ್ರೀಡಾಪಟುಗಳಿಗೆ ತರಬೇತಿ ಕಾರ್ಯಕ್ರಮ ನಡೆಯಿತು.