ಅಣ್ಣಿಗೇರಿ:
ತಾಲೂಕಿನ ಇಬ್ರಾಹಿಂಪೂರ ಗ್ರಾಮದ ಮಲ್ಲರಡ್ಡಿ ಹನುಮರಡ್ಡಿ ಸರ್ಕಾರಿ ಪ್ರೌಢಶಾಲೆಯಲ್ಲಿ ಕನ್ನಡಪ್ರಭ ಯುವ ಆವೃತ್ತಿ ಬಿಡುಗಡೆ ಹಾಗೂ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಹಮ್ಮಿಕೊಳ್ಳಲಾಗಿದ್ದ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡು ಮಾತನಾಡಿದರು.
ವಿದ್ಯಾರ್ಥಿಗಳು ಶಿಕ್ಷಕರು ಹೇಳುವ ಪಾಠವನ್ನು ಸಂಯಮದಿಂದ ಆಲಿಸಬೇಕು ಹಾಗೂ ಪಾಠದ ಸಮಗ್ರ ಮಾಹಿತಿ ಪಡೆದುಕೊಳ್ಳುವುದರೊಂದಿಗೆ ವಿಷಯವಾರು ಗೊಂದಲಗಳಿದ್ದಲ್ಲಿ ತಕ್ಷಣವೇ ಶಿಕ್ಷಕರ ಬಳಿ ಕೇಳಿ ಸಮಸ್ಯೆಗಳ ಕುರಿತು ಮನವರಿಕೆ ಮಾಡಿಕೊಳ್ಳಬೇಕು. ಪರೀಕ್ಷೆಯ ವೇಳೆ ಯಾವುದೇ ರೀತಿಯ ಗೊಂದಲ, ಭಯಪಡದೇ ಪರೀಕ್ಷೆ ಬರೆಯುವಂತೆ ಸಲಹೆ ನೀಡಿದರು. ಜತೆಗೆ ಕನ್ನಡಪ್ರಭ ಯುವ ಆವೃತ್ತಿಯು ವಿದ್ಯಾರ್ಥಿಗಳ ಕಲಿಕಾಸಕ್ತಿ, ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡುವ ಮೂಲಕ ಮಕ್ಕಳ ಜ್ಞಾನವೃದ್ಧಿಗೆ ಸಹಕಾರಿಯಾಗಿದೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳುವಂತೆ ಕರೆ ನೀಡಿದರು.ಪಿಡಿಒ ಆನಂದ ಕೆಂಚಣ್ಣವರ ಮಾತನಾಡಿ, ಅಭಿವೃದ್ಧಿ ಪಥದಲ್ಲಿ ಶಾಲಾ ಮಕ್ಕಳ ಆಗು-ಹೋಗುಗಳ ಬಗ್ಗೆ ಸರಿಯಾದ ಕ್ರಮ ವಹಿಸುವುದು ನಮ್ಮೆಲ್ಲರ ಜವಾಬ್ದಾರಿ. ಶೈಕ್ಷಣಿಕ ಪ್ರಗತಿಗೆ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿಯು ಸಹಕಾರ ನೀಡಲಿದೆ ಎಂದರು.
ಎಸ್.ಜಿ. ಹಿರೇಮಠ ಅಧ್ಯಕ್ಷತೆ ವಹಿಸಿದ್ದರು. ಈ ವೇಳೆ ಅಬಕಾರಿ ಇಲಾಖೆ ಉಪ ನಿರೀಕ್ಷಿಕಿ ಅನುರಾಧ ಓಲೇಕಾರ, ಭೂದಾನಿ ಮಲ್ಲರಡ್ಡಿ ಹನುಮರಡ್ಡಿ ಕುರಹಟ್ಟಿ, ಶಿಕ್ಷಕರಾದ ಚಂದ್ರಶೇಖರ ಬಡಗೇರ, ಬಸವರಾಜ ನಾಯ್ಕರ, ನಿಂಗಪ್ಪ ಈಟಿ, ಎಚ್.ಜಿ. ನಾಗರಾಜ ಸೇರಿದಂತೆ ಹಲವರಿದ್ದರು.