ಮಕ್ಕಳಿಗೆ ಸಂಸ್ಕಾರ ಅತ್ಯಗತ್ಯ: ಸುರೇಶ್‌ಬಾಬು

KannadaprabhaNewsNetwork |  
Published : Jul 25, 2025, 12:30 AM IST
ಎಸ್ಸೆಸ್ಸೆಲ್ಸಿ, ಪಿಯುಸಿ, ಇಂಜಿನಿಯರಿAಗ್, ಮತ್ತು ಎಂಬಿಬಿಎಸ್ ಓದುತ್ತಿರುವ ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಿ ಗೌರವಿಸಲಾಯಿತು. | Kannada Prabha

ಸಾರಾಂಶ

ದೇವಾಂಗ ಸಮಾಜ ಮಕ್ಕಳಿಗೆ ಶಿಕ್ಷಣದ ನೆರವು ನೀಡುವ ಜತೆಗೆ ಸಂಸ್ಕಾರವನ್ನು ಬೆಳಸುವ ಕಾರ್ಯ ಮಾಡುತ್ತಿದೆ. ಈ ನಿಟ್ಟಿನಲ್ಲಿ ಮಕ್ಕಳು ಸಂಸ್ಕಾರವನ್ನು ಬೆಳಸಿಕೊಂಡು ಮುನ್ನಡೆಯಬೇಕು ಎಂದು ಶಾಸಕ ಸಿ.ಬಿ.ಸುರೇಶಬಾಬು ಹೇಳಿದರು.

ಕನ್ನಡಪ್ರಭ ವಾರ್ತೆ ಚಿಕ್ಕನಾಯಕನಹಳ್ಳಿ

ದೇವಾಂಗ ಸಮಾಜ ಮಕ್ಕಳಿಗೆ ಶಿಕ್ಷಣದ ನೆರವು ನೀಡುವ ಜತೆಗೆ ಸಂಸ್ಕಾರವನ್ನು ಬೆಳಸುವ ಕಾರ್ಯ ಮಾಡುತ್ತಿದೆ. ಈ ನಿಟ್ಟಿನಲ್ಲಿ ಮಕ್ಕಳು ಸಂಸ್ಕಾರವನ್ನು ಬೆಳಸಿಕೊಂಡು ಮುನ್ನಡೆಯಬೇಕು ಎಂದು ಶಾಸಕ ಸಿ.ಬಿ.ಸುರೇಶಬಾಬು ಹೇಳಿದರು.

ಪಟ್ಟಣದ ಬನಶಂಕರಿ ಪ್ರಾರ್ಥನ ಮಂದಿರದಲ್ಲಿ ದೇವಾಂಗ ಹಾಸ್ಟೆಲ್ ಸಂಘ ಹಾಗೂ ದೇವಾಂಗ ಸಂಘ ಜಂಟಿಯಾಗಿ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಪುರಸ್ಕರಿಸಿ ಮಾತನಾಡಿದರು.

ಮಕ್ಕಳು ಶೈಕ್ಷಣಿಕ ಅಭಿವೃದ್ಧಿಯ ಜೊತೆಗೆ ಕಲೆ ಸಾಹಿತ್ಯ ಸೇರಿ ಇತರೇ ಚಟುವಟಿಕೆಗಳತ್ತ ಗಮನ ಹರಿಸಿದಾಗ ಸರ್ವಾಂಗೀಣ ಅಭಿವೃದ್ಧಿ ಹೊಂದಲು ಸಾಧ್ಯ. ಗುಣಮಟ್ಟದ ಶಿಕ್ಷಣ ನೀಡುವುದರ ಜತೆಗೆ ಮಕ್ಕಳನ್ನು ಸುಸಂಸ್ಕೃತರನ್ನಾಗಿ ಮಾಡಬೇಕು. ಅವಕಾಶ ವಂಚಿತ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ ಸಿಬಿಎಸ್ ಚಾರಿಟಬಲ್ ಟ್ರಸ್ಟ್ ಮೂಲಕ ವಿವಿಧ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದು ವಿವರಿಸಿದರು.

ಪ್ರಾಂಶುಪಾಲ ಮಹೇಶ ಮಾತನಾಡಿ, ಅರ್ಪಣಾ ಮನೋಭಾವನೆಯನ್ನು ಸ್ವೀಕರಿಸುವ ಸಂಘಗಳು ಜನಪರವಾಗಿರುತ್ತವೆ ಎಂದು ಹೇಳಿದರು. ಪುರಸಭಾ ಸದಸ್ಯೆ ಲಕ್ಷ್ಮಿ, ದೇವಾಂಗ ಹಾಸ್ಟೆಲ್ ಸಂಘದ ಅಧ್ಯಕ್ಷ ಪಾಂಡುರಂಗ, ಸಂಪಾದಕಿ ಶೋಭಾ, ಶಿಕ್ಷಕ ಪಾರ್ಥ ಕುಮಾರಸ್ವಾಮಿ, ನಿವೃತ್ತ ಶಿಕ್ಷಕ ರಂಗಯ್ಯ, ಬನಶಂಕರಯ್ಯ ಇನ್ನಿತರರು ಮಾತನಾಡಿದರು.

ನಗರದ ಪ್ರಮುಖ ರಸ್ತೆಗೆ ಆದ್ಯ ವಚನಕಾರ ದೇವರ ದಾಸಿಮಯ್ಯ ಅವರ ಹೆಸರು ನಾಮಕರಣ ಮಾಡಬೇಕು. ಹಾಗೂ ಸದಾ ಕ್ರೀಯಾಶೀಲತೆಯನ್ನು ಮೈಗೂಡಿಸಿಕೊಂಡು ಕನ್ನಡ ನಾಡು, ನುಡಿ, ಸಾಹಿತ್ಯ, ಸೇವೆ ಮಾಡಿದ ಅಭಿನವ ಭಕ್ತ ಶಿರೋಮಣಿ ಸಿ.ಬಿ.ಮಲ್ಲಪ್ಪನವರು, ಬಿ.ಕೆ.ಈಶ್ವರಯ್ಯ ನವರ ಹೆಸರನ್ನು ಬಡಾವಣೆಗೆ ನಾಮಕರಣ ಮಾಡುವುದು ಎಂದು ದೇವಾಂಗ ಸಂಘದ ಪಧಾಧಿಕಾರಿಗಳು ಶಾಸಕರಿಗೆ ಮನವಿ ಸಲ್ಲಿಸಿದರು. ಈ ವೇಳೆ ಕೋಡಿ ಲೋಕೇಶ್, ಗಿರೀಶ್, ಕೇಶವಮೂರ್ತಿ, ರಾಧಕೃಷ್ಣ, ರಂಗನಾಥ್, ಯದುಕುಮಾರ್, ಹಾಗು ಇತರರಿದ್ದರು.

PREV

Recommended Stories

ಕಾರ್ಮಿಕರು ಒಪ್ಪಿದ್ರೆ 10 ಗಂಟೆ ಕೆಲಸಕ್ಕೆ ಓಕೆ : ಲಾಡ್‌
‘ಸಾವಿರಾರು ಶವ ಹೂಳಲು ಧರ್ಮಸ್ಥಳ ಗ್ರಾಮದಲ್ಲಿ ಮಹಾಭಾರತ ಯುದ್ಧ ನಡೆದಿಲ್ಲ’