ಹೊಸಕೋಟೆ: ತಾಲೂಕಿನಲ್ಲಿ ಸಾಕಷ್ಟು ರೋಗಿಗಳು ಡಯಾಲಿಸಿಸ್‌ಗಾಗಿ ಬೆಂಗಳೂರು ನಗರಕ್ಕೆ ತೆರಳುತ್ತಿದ್ದು ಲಯನ್ಸ್ ವತಿಯಿಂದ ನಗರದಲ್ಲಿ ಉಚಿತ ಡಯಾಲಿಸಿಸ್ ಕೇಂದ್ರವನ್ನು ಸ್ಥಾಪಿಸಿ ಎಂದು ಲಯನ್ಸ್ ಪಾಸ್ಟ್ ಮಲ್ಟಿಪಲ್ ಕೌನ್ಸಿಲ್ ಚೇರ್ಮನ್ ಬಿ.ಎಸ್.ರಾಜಶೇಖರಯ್ಯ ತಿಳಿಸಿದರು.
52ನೇ ಅಧ್ಯಕ್ಷ ಅನಿಲ್ ಕುಮಾರ್ ಮಾತನಾಡಿ, ಈ ಹಿಂದೆ ಲಯನ್ಸ್ ಕ್ಲಬ್‌ನಲ್ಲಿ ಹಲವಾರು ಹುದ್ದೆಗಳನ್ನು ಅಲಂಕರಿಸಿ ಸೇವೆ ಸಲ್ಲಿಸಿದ್ದೇನೆ. ಈಗ ೫೨ನೇ ಅಧ್ಯಕ್ಷನಾಗಿದ್ದೇನೆ. ಮಾಡಬೇಕಾದ ಸೇವಾ ಚಟುವಟಿಕೆಗಳ ಪಟ್ಟಿ ಸಿದ್ದಪಡಿಸಿಕೊಂಡಿದ್ದೇನೆ. ಅದಕ್ಕೆ ಎಲ್ಲಾ ಸದಸ್ಯರ ಸಹಕಾರ ಅಗತ್ಯ ಎಂದರು.
ಲಯನ್ಸ್ ಸೇವಾ ಟ್ರಸ್ಟ್ ಅಧ್ಯಕ್ಷ ಶ್ರೀನಿವಾಸಯ್ಯ, ಲಯನ್ಸ್ 2ನೇ ಉಪರಾಜ್ಯಪಾಲ ಎ.ವಿಜಯಕುಮಾರ್, ವಲಯ ಅಧ್ಯಕ್ಷ ಪ್ರಭಾಕರ್, ಪ್ರಾಂತೀಯ ಅಧ್ಯಕ್ಷ ಡಬ್ಲ್ಯೂ.ಡಿ.ವಿಜಯಕುಮಾರ್, ಪಿಆರ್‌ಒ ಮಂಜುನಾಥ್, ಲಯನ್ಸ್ ಟ್ರಸ್ಟ್ ಅಧ್ಯಕ್ಷ ಶ್ರೀನಿವಾಸಯ್ಯ, ಲಯ್ನಸ್ ಕ್ಲಬ್ ಉಪಾಧ್ಯಕ್ಷ ವಿಎನ್ ಮಂಜುನಾಥ್, ಕಾರ್ಯದರ್ಶಿ ದಿನಕರ್ ಬಿ.ಎಸ್, ಖಜಾಂಚಿ ಮಹೇಶ್, ನಿರ್ದೇಶಕ ಮುರಲೀಧರ್ ಹಾಗು ಪದಾಧಿಕಾರಿಗಳು ಹಾಜರಿದ್ದರು.