ಶಿಸ್ತು, ವಿಧೇಯತೆ, ಸಮಯ ಪಾಲನೆ ಉತ್ತಮ ಹವ್ಯಾಸ: ಚೌರಿರ ಡಾ. ಜಗತ್ ತಿಮ್ಮಯ್ಯ

KannadaprabhaNewsNetwork |  
Published : Dec 18, 2025, 02:45 AM IST
ನಾಪೋಕ್ಲು ಶ್ರೀರಾಮ ಟ್ರಸ್ಟ್ ಆಂಗ್ಲ ಮಾಧ್ಯಮ ಶಾಲೆಯ ವತಿಯಿಂದ ಆಯೋಜಿಸಲಾಗಿದ್ದ ವಾರ್ಷಿಕೋತ್ಸವ ಸಮಾರಂಭದಲ್ಲಿ ಫೀಲ್ಡ್ ಮಾರ್ಷಲ್ ಕೆ .ಎ೦ ಕಾರ್ಯಪ್ಪ ಕಾಲೇಜು ಮಡಿಕೇರಿ ಇದರ ನಿವೃತ್ತ ಪ್ರಾಂಶುಪಾಲರಾದ  ಚೌರಿರ ಡಾ. ಜಗತ್ ತಿಮ್ಮಯ್ಯ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಕಾರ್ಯಕ್ರಮವನ್ನು ಉದ್ಘಾಟಿಸಿದರು.14-ಎನ್ ಪಿ ಕೆ-3,ನಾಪೋಕ್ಲು ಶ್ರೀರಾಮ ಟ್ರಸ್ಟ್ ಆಂಗ್ಲ ಮಾಧ್ಯಮ ಶಾಲೆಯ ವತಿಯಿಂದ ಆಯೋಜಿಸಲಾಗಿದ್ದ ವಾರ್ಷಿಕೋತ್ಸವ ಸಮಾ | Kannada Prabha

ಸಾರಾಂಶ

ಶಿಸ್ತು ವಿಧೇಯತೆ ಸಮಯಪಾಲನೆ ವಿದ್ಯಾರ್ಥಿಗಳು ರೂಢಿಸಿಕೊಳ್ಳಬೇಕಾದ ಉತ್ತಮ ಹವ್ಯಾಸಗಳು ಎಂದು ಚೌರಿರ ಜಗತ್‌ ತಿಮ್ಮಯ್ಯ ಹೇಳಿದರು.

ಕನ್ನಡಪ್ರಭ ವಾರ್ತೆ ನಾಪೋಕ್ಲು

ಶಿಸ್ತು, ವಿಧೇಯತೆ ಮತ್ತು ಸಮಯ ಪಾಲನೆ ವಿದ್ಯಾರ್ಥಿಗಳು ರೂಡಿಸಿಕೊಳ್ಳಬೇಕಾದ ಉತ್ತಮ ಹವ್ಯಾಸಗಳು ಎಂದು ಫೀಲ್ಡ್ ಮಾರ್ಷಲ್ ಕೆ .ಎ೦ ಕಾರ್ಯಪ್ಪ ಕಾಲೇಜು ಮಡಿಕೇರಿ ನಿವೃತ್ತ ಪ್ರಾಂಶುಪಾಲರಾದ ಚೌರಿರ ಡಾ. ಜಗತ್ ತಿಮ್ಮಯ್ಯ ಹೇಳಿದರು.

ಇಲ್ಲಿನ ಶ್ರೀರಾಮ ಟ್ರಸ್ಟ್ ಆಂಗ್ಲ ಮಾಧ್ಯಮ ಶಾಲೆಯ ವತಿಯಿಂದ ಶನಿವಾರ ಆಯೋಜಿಸಲಾಗಿದ್ದ ವಾರ್ಷಿಕೋತ್ಸವ ಸಮಾರಂಭದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.

ಪೋಷಕರು ಮಕ್ಕಳಿಗೆ ಒಳ್ಳೆಯ ಮಾರ್ಗದರ್ಶನ ನೀಡದಿದ್ದರೆ ಮಕ್ಕಳು ಬೆಳೆಯಲು ಸಾಧ್ಯವಿಲ್ಲ. ಪೋಷಕರು ಮಕ್ಕಳಿಗೆ ಶಿಸ್ತು ಮತ್ತು ಸಮಯ ಪಾಲನೆಯ ಮಹತ್ವವನ್ನು ಅರಿವು ಮೂಡಿಸಬೇಕು. ಮಕ್ಕಳಿಗೆ ಯಾವತ್ತು ಒಳ್ಳೆಯದನ್ನು ಹೇಳಿಕೊಡಬೇಕು. ಮಕ್ಕಳ ಬುದ್ಧಿ ಸೀಮಿತಕ್ಕೆ ಬಂದಾಗ ಅವರು ಖಂಡಿತ ಒಳ್ಳೆಯದನ್ನು ಪಾಲಿಸುತ್ತಾರೆ. ಎಂದರು.

ಕೊಡಗಿನ ಮಕ್ಕಳಲ್ಲಿ ಶಿಸ್ತು ಇದೆ. ಫೀಲ್ಡ್ ಮಾರ್ಷಲ್ ಕೆ .ಎ೦ ಕಾರ್ಯಪ್ಪ ನವರು ಜೀವನದುದ್ದಕ್ಕು ಶಿಸ್ತನ್ನು ಪಾಲಿಸಿದರು. ಅಂತಹ ನಾಡಿನಲ್ಲಿ ಹುಟ್ಟಿದ ಮಕ್ಕಳು ಶಿಸ್ತುಬದ್ಧ ಜೀವನ ನಡೆಸಲು ಶಕ್ತರು ಎಂದ ಅವರು ಇಂದಿನ ದಿನಗಳಲ್ಲಿ ಆಂಗ್ಲ ಭಾಷೆಯ ಅಗತ್ಯ ಬಹಳಷ್ಟು ಇದೆ. ಭಾಷೆ ಕಲಿತರೆ ಎಲ್ಲಿ ಹೋದರು ಯಶಸ್ಸು ಸಿಗುತ್ತದೆ. ನಮ್ಮ ಜೀವನದ ಬಹುಪಾಲು ಅವಧಿಯನ್ನು ಮೊಬೈಲ್ ಆಕ್ರಮಿಸಿಕೊಂಡಿದೆ. ಮೊಬೈಲ್ ನಲ್ಲಿ ಉತ್ತಮವಾದ ವಿಚಾರಗಳಿವೆ. ಆ ಉತ್ತಮ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದರ ಬಗ್ಗೆ ಮಕ್ಕಳಿಗೆ ಮಾರ್ಗದರ್ಶನ ನೀಡಬೇಕು. ಸೂಕ್ತ ಮಾರ್ಗದರ್ಶನ ಸಿಗದಿದ್ದಲ್ಲಿ ಮಕ್ಕಳು ತಪ್ಪು ದಾರಿಗೆ ಹೋಗುತ್ತಾರೆ ಎಂದು ಮಾತನಾಡಿದ ಜಗತ್ ತಿಮ್ಮಯ್ಯ ಶಾಲೆಯಲ್ಲಿ ಪಠ್ಯದ ಜೊತೆಗೆ ಸಹಪಠ್ಯ ಚಟುವಟಿಕೆಗಳು ಹತ್ತು ಹಲವಾರು ಇವೆ. ಎನ್‌ಸಿಸಿ ಅಂತಹ ಸಹಪಠ್ಯ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಪಾಲ್ಗೊಳ್ಳಬೇಕು. ಎನ್‌ಸಿಸಿಯಲ್ಲಿ ತೊಡಗಿಸಿಕೊಂಡರೆ ಸಮಾಜದಲ್ಲಿ ಉತ್ತಮ ಜೀವನ ರೂಪಿಸಿಕೊಳ್ಳಲು ಸಾಧ್ಯ ಎಂದರು.ಸಂಸ್ಥೆಯ ಅಧ್ಯಕ್ಷ ಕಲಿಯಂಡ ಹ್ಯಾರಿ ಮಂದಣ್ಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ನಮ್ಮ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡಿದ ವಿದ್ಯಾರ್ಥಿಗಳು ಉನ್ನತ ಸ್ಥಾನ ಮಾನಗಳನ್ನು ಪಡೆದಿದ್ದು ಸಂಸ್ಥೆಗೆ ಕೀರ್ತಿಯನ್ನು ತಂದಿದ್ದಾರೆ ಎಂದ ಅವರು ಸಂಸ್ಥೆಯ ಉನ್ನತಿಕರಣಕ್ಕೆ ಎಲ್ಲರ ಸಹಕಾರ ಅವಶ್ಯಕತೆವಾಗಿದ್ದು ಸಹಕರಿಸುವಂತೆ ಮನವಿ ಮಾಡಿದರು. ಹಾಗೂ ಪೋಷಕರು ಮಕ್ಕಳ ಓದಿನ ಬಗ್ಗೆ ಗಮನಹರಿಸಿ ಕೈಜೋಡಿಸುವಂತೆ ತಿಳಿಸಿದರು.

ಕಾರ್ಯಕ್ರಮದಲ್ಲಿ ಕಳೆದ ಶೈಕ್ಷಣಿಕ ವರ್ಷದಲ್ಲಿ ಅತ್ಯಧಿಕ ಅಂಕಗಳಿಸಿದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಗಣ್ಯರು ಬಹುಮಾನಗಳನ್ನು ವಿತರಿಸಿ ಶುಭ ಹಾರೈಸಿದರು.

ಈ ಸಂದರ್ಭ ವೇದಿಕೆಯಲ್ಲಿ ಆಡಳಿತ ಮಂಡಳಿ ಉಪಾಧ್ಯಕ್ಷ ನೆರವಂಡ ಸುನಿಲ್ ದೇವಯ್ಯ, ಕಾರ್ಯದರ್ಶಿ ನಾಯಕಂಡ ದೀಪಕ್ ಚಂಗಪ್ಪ, ನಿರ್ದೇಶಕರಾದ ಬಿದ್ದಾಟಂಡ ಪಾಪ ಮುದ್ದಯ್ಯ, ಬಿದ್ದಾಟಂಡ ಮುತ್ತಣ್ಣ, ಬೊಳ್ಳಚೆಟ್ಟಿರ ಸುರೇಶ್, ಕಲಿಯಂಡ ಕೌಶಿಕ್ ಕುಶಾಲಪ್ಪ, ಅಪ್ಪಚೆಟೊಳಂಡ ನವೀನ್ ಅಪ್ಪಯ್ಯ, ಚೌರಿರ ಮಂದಣ್ಣ, ಭಟ್ಟಿರ ಸುಬ್ಬಯ್ಯ ಹಾಗೂ ಕೇಟೋಳಿರ ಅಪ್ಪಚ್ಚ ಉಪಸ್ಥಿತರಿದ್ದರು.

ಶಿಕ್ಷಕಿ ಪಾಡಿಯಮ್ಮಂಡ ಚಂದ್ರಕಲಾ ಮಹೇಶ್ ಸ್ವಾಗತಿಸಿದ ಸಭೆಯಲ್ಲಿ ಕಲ್ಯಾಟಂಡ ತನುಜ ಅತಿಥಿಗಳ ಪರಿಚಯ ಮಾಡಿದರು. ಶಾಲಾ ಚಟುವಟಿಕೆ ವರದಿಯನ್ನು ಸಾನ್ವಿಕ ಹಾಗೂ ಶಾಲಾ ವರದಿಯನ್ನು ಪ್ರಾಂಶುಪಾಲೆ ಶಾರದಾ ವಾಚಿಸಿದರು. ಉದಿಯಂಡ ಶ್ವೇತಾ ಲೀಲಾವತಿ ಹಾಗೂ ಬುಟ್ಟೋಳಂದ ಸೌಮ್ಯ ಕಾರ್ಯಕ್ರಮವನ್ನು ನಿರೂಪಿಸಿ ಬೊಳ್ಳಚೆಟ್ಟಿರ ಶೋಭ ವಂದಿಸಿದರು.

ಬಳಿಕ ವಿದ್ಯಾರ್ಥಿಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿ ಜನಮನ ಸೆಳೆಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಚಂದ್ರಮೌಳೇಶ್ವರ ಸನ್ನಿಧಾನದಲ್ಲಿ ಪ್ರದೋಷ ಸಪ್ತರ್ಷಿ ಪೂಜೆ
ಪರಮೇಶ್ವರ್ ಸಿಎಂ ಆಗಲಿ: ಮಠಾಧೀಶರ ಒತ್ತಾಯ