ಹನೂರು: ತಾಲೂಕಿನ ಕಾಡಂಚಿನ ಗ್ರಾಮಗಳಲ್ಲಿ ಚಿರತೆ ಹಾವಳಿ ಮುಂದುವರೆದಿದ್ದು ರೈತರು ಜಮೀನಿಗೆ ತೆರಳಲು ಭಯಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಚಿಂಚಳ್ಳಿ ಗ್ರಾಮದ ಬಸವರಾಜು, ಮುರುಗಶೆಟ್ಟಿ ಎಂಬುವರ ತೋಟದಲ್ಲಿ ಚಿರತೆ ಹೆಜ್ಜೆ ಗುರುತು ಕಾಣಿಸಿಕೊಂಡಿದ್ದು, ಮಾರ್ಟಳ್ಳಿ ಗ್ರಾಮದ ರೈತ ದೊರೆಸ್ವಾಮಿ ಸಾಕುನಾಯಿಯೊಂದನ್ನು ಚಿರತೆ ಹೊತ್ತೊಯ್ದಿದೆ, ಗಂಗನದೊಡ್ಡಿಯಲ್ಲಿ ಚಿರತೆ ಹಾವಳಿ ಮುಂದುವರಿದಿದ್ದು, ರೈತರು ನಿದ್ದೆಗೆಡಿಸಿದೆ.
ಲೋಕ್ಕನಹಳ್ಳಿ ರಸ್ತೆಯಲ್ಲಿ ಜೋಡಿ ಚಿರತೆ ಪ್ರತ್ಯಕ್ಷ:ಕಳೆದ ವಾರ ಈ ಭಾಗದಲ್ಲೂ ಜೋಡಿ ಚಿರತೆ ಪ್ರಯಾಣಿಕರಿಗೆ ರಸ್ತೆ ಬದಿಯಲ್ಲಿ ಅರಣ್ಯ ಪ್ರದೇಶದಲ್ಲಿ ಕುಳಿತು ಕೊಂಡಿರುವ ಬಗ್ಗೆ ಪ್ರಯಾಣಿಕರು ವಿಡಿಯೋ ಮಾಡುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ರೈತರಿಗೆ ಎಚ್ಚರಿಕೆ ಸಹ ನೀಡಿರುವುದರಿಂದ ಈ ಭಾಗದಲ್ಲೂ ರೈತರು ರಾತ್ರಿ ವೇಳೆ ತಮ್ಮ ಜಮೀನುಗಳಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಳ್ಳಲು ಭಯ ಭೀತರಾಗಿದ್ದಾರೆ.
---20ಸಿಎಚ್‌ಎನ್54
ಹನೂರು ತಾಲೂಕಿನ ಚಿಂಚಳ್ಳಿ ಗ್ರಾಮದ ಬಸವರಾಜು, ಮುರುಗಶೆಟ್ಟಿ ಎಂಬವರ ತೋಟದಲ್ಲಿ ಚಿರತೆ ಹೆಜ್ಜೆ ಗುರುತು ಕಾಣಿಸಿಕೊಂಡಿರುವುದು.
---