ಕನ್ನಡಪ್ರಭ ವಾರ್ತೆ ವಿಜಯಪುರ
ನಗರದ ಪಿಡಿಜೆ (ಬ) ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಪಾರಿತೋಷಕ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಸಮಾಜದ ದಿವ್ಯ ಸಂಪತ್ತು. ಇಂದಿನ ವಿದ್ಯಾರ್ಥಿಗಳೇ ನಾಳಿನ ನಾಗರಿಕರು, ದೇಶವನ್ನು ಭವಿಷ್ಯದಲ್ಲಿ ಮುನ್ನಡೆಸುವ ಜವಾಬ್ದಾರಿ ಹೊತ್ತಿರುವ ವಿದ್ಯಾರ್ಥಿ ಸಮೂಹ ಶಿಕ್ಷಣ ಪಡೆಯುವ ಹಂತದಲ್ಲಿಯೇ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು. ಧೈರ್ಯ, ಸಾಹಸವನ್ನು ಬೆಳೆಸಿಕೊಳ್ಳಬೇಕು. ಅನ್ಯಾಯವನ್ನು ಪ್ರಶ್ನಿಸುವ ಧೈರ್ಯ ಬೆಳೆಸಿಕೊಳ್ಳಬೇಕು ಎಂದರು.
ತಾಲೂಕು ದೈಹಿಕ ಶಿಕ್ಷಣ ಅಧೀಕ್ಷಕ ಎಸ್.ಜೆ.ಬಿರಾದಾರ ಮಾತನಾಡಿ, ಮಕ್ಕಳ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಕ್ರೀಡೆ ಮಹತ್ವದ ಪಾತ್ರ ವಹಿಸುತ್ತದೆ. ಕ್ರೀಡೆ ಮಕ್ಕಳಲ್ಲಿ ಸ್ಥರ್ಧಾತ್ಮಕ ಮನೋಭಾವನೆ ಬೆಳೆಸುವುದರೊಂದಿಗೆ ನಾಯಕತ್ವದ ಗುಣಗಳನ್ನು ಕಲಿಸಿಕೊಡುತ್ತದೆ. ಹೀಗಾಗಿ ಪಠ್ಯದ ಜೊತೆಗೆ ಆಟೋಟದಲ್ಲಿಯೂ ಸಕ್ರೀಯವಾಗಿ ಭಾಗವಹಿಸಬೇಕು ಎಂದರು.ಅಧ್ಯಕ್ಷತೆ ಬಿಡಿಇ ಸಂಸ್ಥೆಯ ಅಧ್ಯಕ್ಷ ಕೆ.ಬಿ.ಕುಲಕರ್ಣಿ ವಹಿಸಿದ್ದರು. ಮುಖ್ಯೋಪಾಧ್ಯಾಯೆ ಕೆ.ಎಂ.ಸೀತಿಮನಿ, ಶಾಲಾ ಸಂಸತ್ ಉಪಾಧ್ಯಕ್ಷೆ ಎ.ಎನ್.ಉಮ್ಮವಗೋಳ, ಪ್ರಾಚಾರ್ಯೆ ಡಿ.ಕೆ.ಕುಲಕರ್ಣಿ, ಶಾಲಾ ಸಂಸತ್ ಪ್ರಧಾನಿ ಕುಮಾರ ಕುಬೇರ ಹೊನ್ನಕಸ್ತೂರಿ, ಉಪಪ್ರಧಾನಿ ಆದರ್ಶ ಅಂಗಡಿ, ಎಸ್.ಜಿ.ಹೊನಕೇರಿ, ಎಸ್.ಆರ್.ಜೋಶಿ, ಎಸ್.ಎಂ.ಹಲಗಣಿ, ಬಿ.ಎಚ್.ವಾಲಿಕಾರ, ಜಿ.ಜಿ.ಗಾಡಗೀಳ, ಎಂ.ಎನ್.ಬಾಬರ, ಪಿ.ಕೆ.ಆಶ್ರಿತ, ಎ.ಜಿ.ಕೋಲಟಕರ, ಎ.ಎಸ್.ಜಕ್ಕುಂಡಿ, ಆರ್.ಆರ್.ಉಪ್ಪಾರ, ಎಸ್.ಎಸ್.ಗಾಣೀಗೇರ, ವಿ.ಜಿ.ಕುಲಕರ್ಣಿ, ಎಲ್.ಎಲ್.ದೇವೂರಕರ, ವಿ.ವಿ.ಝಳಕಿ, ವಿ.ಆರ್.ನಾಗರಹಳ್ಳಿ ಮುಂತಾದವರು ಇದ್ದರು. ಎ.ಎಂ.ಮಾಂಗ ಸ್ವಾಗತಿಸಿದರು. ಐ.ಎಸ್.ಧರಿಕಾರ, ಎಸ್.ಆರ್.ಕುಲಕರ್ಣಿ ನಿರೂಪಿಸಿದರು. ಪಿ.ಕೆ.ಆಶ್ರೀತ ವಂದಿಸಿದರು.