ಆಡಳಿತ ಪಕ್ಷದವರಿಂದಲೇ ಅನುದಾನ ಹಂಚಿಕೆಯಲ್ಲಿ ತಾರತಮ್ಯ

KannadaprabhaNewsNetwork |  
Published : Dec 24, 2025, 01:15 AM IST
23ಕೆಆರ್ ಎಂಎನ್ 1.ಜೆಪಿಜಿಬಿಡದಿ ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾದ ದೇವರಾಜು ಅವರನ್ನು ಸದಸ್ಯರು ಅಭಿನಂದಿಸಿದರು. | Kannada Prabha

ಸಾರಾಂಶ

ರಾಮನಗರ: ವಾರ್ಡುಗಳಿಗೆ ಅನುದಾನ ಹಂಚಿಕೆಯಲ್ಲಿ ಆಗಿರುವ ತಾರತಮ್ಯದ ವಿರುದ್ಧ ಆಡಳಿತ ರೂಢ ಸದಸ್ಯರೇ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಬಿಡದಿ ಪುರಸಭೆ ಅಧ್ಯಕ್ಷೆ ಭಾನುಪ್ರಿಯಾ ಮುಂದಿನ ದಿನಗಳಲ್ಲಿ ಸರ್ಕಾರದಿಂದ ಲಭ್ಯವಾಗುವ ಅನುದಾನದಲ್ಲಿ ಸರಿದೂಗಿಸುವ ಕೆಲಸ ಮಾಡಲಾಗುವುದು ಎಂದು ಭರವಸೆ ನೀಡಿದರು.

ರಾಮನಗರ: ವಾರ್ಡುಗಳಿಗೆ ಅನುದಾನ ಹಂಚಿಕೆಯಲ್ಲಿ ಆಗಿರುವ ತಾರತಮ್ಯದ ವಿರುದ್ಧ ಆಡಳಿತ ರೂಢ ಸದಸ್ಯರೇ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಬಿಡದಿ ಪುರಸಭೆ ಅಧ್ಯಕ್ಷೆ ಭಾನುಪ್ರಿಯಾ ಮುಂದಿನ ದಿನಗಳಲ್ಲಿ ಸರ್ಕಾರದಿಂದ ಲಭ್ಯವಾಗುವ ಅನುದಾನದಲ್ಲಿ ಸರಿದೂಗಿಸುವ ಕೆಲಸ ಮಾಡಲಾಗುವುದು ಎಂದು ಭರವಸೆ ನೀಡಿದರು.

ಬಿಡದಿ ಪುರಸಭೆ ಸಭಾಂಗಣದಲ್ಲಿ ಮಂಗಳವಾರ ಅಧ್ಯಕ್ಷೆ ಭಾನುಪ್ರಿಯಾ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಸ್ವ ಪಕ್ಷಿಯೇ ಸದಸ್ಯರು, ಹಿಂದಿದ್ದ ಅಧ್ಯಕ್ಷರು ಸದಸ್ಯರನ್ನು ವಿಶ್ವಾಸಕ್ಕೆ ಪಡೆಯದೆ ತಮಗಿಷ್ಟ ಬಂದಂತೆ ಅನುದಾನ ಹಂಚಿಕೆ ಮಾಡಿದ್ದಾರೆ ಎಂದು ದೂರಿ ಪರಸ್ಪರ ವಾಗ್ವಾದದಲ್ಲಿ ತೊಡಗಿದರು.

ಸದಸ್ಯರಾದ ಸೋಮ ಶೇಖರ್, ರಮೇಶ್, ರಾಕೇಶ್ ಮಾತನಾಡಿ, ಪ್ರತಿ ವಾರ್ಡಿಗೆ 25 ರಿಂದ 30 ಲಕ್ಷ ರುಪಾಯಿ ಅನುದಾನ‌ ನೀಡುವ ಬಗ್ಗೆ ತೀರ್ಮಾನ ಮಾಡಲಾಗಿತ್ತು. ಆದರೆ 50 ರಿಂದ 60 ಲಕ್ಷ ರುಪಾಯಿ ಅನುದಾನ ಹಂಚಿಕೆ ಮಾಡಲಾಗಿದೆ. ಅಲ್ಲದೆ, ಕೆಲ ವಾರ್ಡುಗಳಿಗೆ 1 ರಿಂದ 3 ಕೋಟಿ ರುಪಾಯಿವರೆಗೊ ಅನುದಾನ ಹಂಚಿಕೆ ನಡೆದಿದೆ. ಯಾವ ಮಾನದಂಡದ ಮೇಲೆ ಟೆಂಡರ್ ಕರೆಯಲಾಗಿದೆ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.

ಬಿಡದಿ ಪಟ್ಟಣದ ಅಭಿವೃದ್ಧಿ ದೃಷ್ಟಿಯಿಂದ ಅವಶ್ಯಕತೆಯಿರುವ ವಾರ್ಡ್ ಗಳಿಗೆ ಹೆಚ್ಚು ಅನುದಾನ ಹಾಕಲಾಗಿದೆ ಎಂದು ಮಾಜಿ ಅಧ್ಯಕ್ಷ ಹರಿಪ್ರಸಾದ್ ಉತ್ತರಿಸಿದರು. ಇದಕ್ಕೆ ತೃಪ್ತರಾಗದ ಸದಸ್ಯರು ನಮ್ಮ‌ ಗಮನಕ್ಕೆ ಬರದೆ ಹಲವು ಟೆಂಡರ್ ಕರೆದಿದ್ದೀರಿ, ಸದಸ್ಯರಿಗೆ ಮಾಹಿತಿ ಗೊತ್ತಿಲ್ಲ ಎಂದು ಅಧಿಕಾರಿಗಳ ವಿರುದ್ಧ ಕಿಡಿಕಾರಿದರು.

ಈ ವೇಳೆ ವಿಪಕ್ಷ ನಾಯಕ ಸಿ.ಉಮೇಶ್ ಮಾತನಾಡಿ, ಅನುದಾನ ದುರ್ಬಳಕೆ ಮತ್ತು ಕಾಮಗಾರಿಗಳು ಗುಣಮಟ್ಟದಿಂದ ನಡೆದಿಲ್ಲ ಎಂದು ವಿರೋಧ ಪಕ್ಷದವರು ಕೇಳಬೇಕಾಗಿತ್ತು. ಆದರೆ, ಆಡಳಿತ ಪಕ್ಷದವರೇ ಕಿತ್ತಾಡುತ್ತಿರುವುದನ್ನು ನೋಡಿದರೆ ಪುರಸಭೆಯಲ್ಲಿ ಆಡಳಿತ ವೈಪಲ್ಯತೆ ಎದ್ದು ಕಾಣುತ್ತಿದೆ. ಆಡಳಿತ ನಡೆಸುವಲ್ಲಿ ನೀವು ವಿಫಲರಾಗಿದ್ದು, ರಾಜೀನಾಮೆ ಕೊಡುವಂತೆ ಕಾಲೆಳೆದರು.

ಆಗ ಸದಸ್ಯರಾದ ಸೋಮಶೇಖರ್ ಮತ್ತು ರಮೇಶ್ ಮಾತನಾಡಿ ಎಲ್ಲರಂತೆ ನಮ್ಮನ್ನು ವಾರ್ಡಿನಲ್ಲಿ ಆಯ್ಕೆ ಮಾಡಿದ್ದಾರೆ. ಹಿಂದುಳಿದ ಸಮುದಾಯದ ಜನರು ಹೆಚ್ಚಿದ್ದಾರೆ.‌ ನಮ್ಮ ವಾರ್ಡ್ ಸಹ ಅಭಿವೃದ್ಧಿ ಕಾಣ ಬೇಕಿದೆ. ಅನುದಾನ ಹಂಚಿಕೆ ಯಲ್ಲಿ ನೀವು ಮಲ ತಾಯಿ ಧೋರಣೆ ತೋರಿದ್ದೀರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೆ ಸದಸ್ಯೆ ಬಿಂದಿಯಾ, ಮನು ಅವರು ಸಹ ಧ್ವನಿಗೂಡಿಸಿದರು.

ಸಭೆಯಲ್ಲಿ ಹೈಮಾಸ್ ಲೈಟ್ ಸ್ಥಿರೀಕರಣ, ರಸ್ತೆ ಅಭಿವೃದ್ಧಿ, ಮೀಟಿಂಗ್ ಹಾಲ್ ಮಾಡದಿರುವುದು, ಬಾನಂದೂರು ಸ್ಮಶಾನಕ್ಕೆ ಭೂ ಸ್ವಾದೀನ ಪಡಿಸಿಕೊಳ್ಳು ವುದು, ಉದ್ದಿಮೆ ಪರವಾನಗಿ, ಜಾಹಿರಾತು ಶುಲ್ಕ ವಸೂಲಿ ಸೇರಿದಂತೆ 55 ವಿಷಯಗಳ ಬಗ್ಗೆ ಚರ್ಚೆ ನಡೆಯಿತು.

ಕೋಟ್ .............

ಎಚ್.ಸಿ.ಬಾಲಕೃಷ್ಣ ಕಾಂಗ್ರೆಸ್ ಶಾಸಕರಾಗಿದ್ದಾರೆ. ಅವರು ಬಿಡದಿ ಪಟ್ಟಣದ ಅಬಿವೃದ್ಧಿ ದೃಷ್ಟಿಯಿಂದ ರಾಜಕೀಯ ಮಾಡಲಿಲ್ಲ. ಜೆಡಿಎಸ್ ಸದಸ್ಯರ ವಾರ್ಡಿಗಳಿಗೂ ಅತೀ ಹೆಚ್ಚು ಅನುದಾನವನ್ನು ನೀಡಿ ಅಭಿವೃದ್ದಿ ಮಾಡುತ್ತಿದ್ದಾರೆ. ನಿಮ್ಮಿಂದ ಆಡಳಿತ ನಡೆಸಲು ಸಾಧ್ಯವಾಗದಿದ್ದರೆ ರಾಜೀನಾಮೆ ಕೊಟ್ಟು

- ಸಿ.ಉಮೇಶ್ , ವಿಪಕ್ಷ ನಾಯಕರು, ಬಿಡದಿ ಪುರಸಭೆ.

ಬಾಕ್ಸ್ .............

ವಾರ್ಡುಗಳಿಗೆ ಅನುದಾನ ಹಂಚಿಕೆ, ವಿಚಾರವಾಗಿ ಆಡಳಿತರೂಢ ಪಕ್ಷದ ಸದಸ್ಯರು ವಿರೋಧ ಪಕ್ಷದವರಂತೆ ಪರಸ್ಪರ ವಾಗ್ವಾದದಲ್ಲಿ ತೊಡಗಿದರೆ, ವಿಪಕ್ಷದವರು ಆಡಳಿತ ಪಕ್ಷದವರಂತೆ ವರ್ತಿಸಿದ ಪ್ರಸಂಗ ಬಿಡದಿ ಪುರಸಭೆ ಸಾಮಾನ್ಯಸಭೆಯಲ್ಲಿ ನಡೆಯಿತು.

ಆಡಳಿತ ರೂಢ ಸದಸ್ಯರಾದ ಸೋಮಶೇಖರ್ , ಕೆ.ಎನ್.ರಮೇಶ್ , ರಾಕೇಶ್ ಹಾಗೂ ನಾಗರಾಜುರವರು ಅನುದಾನ ಹಂಚಿಕೆಯಲ್ಲಿ ತಮ್ಮ ವಾರ್ಡುಗಳಿಗೆ ಅನ್ಯಾಯವಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸುತ್ತಿದ್ದರು. ಇದರ ಬಗ್ಗೆ ಅಧ್ಯಕ್ಷೆ ಭಾನುಪ್ರಿಯಾ ಮತ್ತು ಮಾಜಿ ಅಧ್ಯಕ್ಷ ಹರಿಪ್ರಸಾದ್ ಏನೇ ಉತ್ತರ ನೀಡಿದರು ಕೇಳಿಸಿಕೊಳ್ಳುವ ಸ್ಥಿತಿಯಲ್ಲಿ ಸದಸ್ಯರು ಇರಲಿಲ್ಲ.

ಕೊನೆಗೆ ವಿಪಕ್ಷ ನಾಯಕ ಸಿ.ಉಮೇಶ್ ಅವರು ಆಡಳಿತ ಪಕ್ಷವನ್ನು ಸಮರ್ಥಿಸಿಕೊಂಡಂತೆ ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸುವ ಪರಿಸ್ಥಿತಿ ಸಭೆಯಲ್ಲಿ ನಿರ್ಮಾಣವಾಯಿತು. ಆಡಳಿತ ಪಕ್ಷದ ಸದಸ್ಯರ ಪ್ರಶ್ನೆಗಳಿಗೆ ವಿಪಕ್ಷ ನಾಯಕರೇ ಸಮರ್ಥವಾಗಿ ಉತ್ತರ ನೀಡುತ್ತಿದ್ದರು.

ಬಾಕ್ಸ್ ..............

ಬಿಡದಿ ಪುರಸಭೆ ಸ್ಥಾಯಿ‌ ಸಮಿತಿ ಅಧ್ಯಕ್ಷರಾಗಿ ದೇವರಾಜು‌ ಅವಿರೋಧ ಆಯ್ಕೆ

ರಾಮನಗರ: ಬಿಡದಿ ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ರಾಗಿ 8ನೇ ವಾರ್ಡಿನ ಸದಸ್ಯ ಆರ್. ದೇವರಾಜು ಅವಿರೋಧವಾಗಿ ಆಯ್ಕೆಯಾದರು.

ಬಿಡದಿ ಪುರಸಭೆ ಸಾಮಾನ್ಯ ಸಭೆಯಲ್ಲಿ ಸ್ಥಾಯಿ‌ ಸಮಿತಿ‌ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಿತು. 8ನೇ ವಾರ್ಡಿನ ಸದಸ್ಯ ಆರ್.ದೇವರಾಜು ಅದ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರೆ ಸದಸ್ಯರಾಗಿ ಮಂಜುಳಾ, ಎಂ.ಎನ್.ಹರಿಪ್ರಸಾದ್, ಸರಸ್ವತಮ್ಮ, ಕೆ.ಎನ್.ರಮೇಶ್, ಕೆ.ಸಿ.ಬಿಂದಿಯಾ, ಮಹಿಮಾ, ಕೆ.ಶ್ರೀನಿವಾಸ್ ಆಯ್ಕೆಯಾಗಿದ್ದಾರೆ ಎಂದು ಪುರಸಭಾ ಮುಖ್ಯಾಧಿಕಾರಿ ಎಂ.ಮೀನಾಕ್ಷಿ ಘೋಷಿಸಿದರು.

ನೂತನ ಅಧ್ಯಕ್ಷ ಆರ್.ದೇವರಾಜು ಮಾತನಾಡಿ, ಬಿಡದಿ ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಮಾಡಿದ ಎಲ್ಲ ಸದಸ್ಯರು ಹಾಗೂ ಮಾಜಿ ಶಾಸಕರಾದ ಎ.ಮಂಜುನಾಥ್ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ನನ್ನ ಅವಧಿಯಲ್ಲಿ ಬಿಡದಿ ಪಟ್ಟಣವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ಪಕ್ಷಾತೀತವಾಗಿ ಎಲ್ಲರ ಸಹಕಾರ, ಮಾರ್ಗದರ್ಶನ ಪಡೆದು ಉತ್ತಮ ಆಡಳಿತ ಕೊಡುವ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.

ಈ ವೇಳೆ ಪುರಸಭೆ ಅಧ್ಯಕ್ಷೆ ಭಾನುಪ್ರಿಯಾ, ಉಪಾಧ್ಯಕ್ಷೆ ಆಯಿಷಾಕಲೀಲ್, ವಿಪಕ್ಷ ನಾಯಕ ಸಿ.ಉಮೇಶ್, ಸದಸ್ಯರಾದ ಹೆಚ್.ಎಸ್.ಲೋಹಿತ್ ಕುಮಾರ್, ಸೋಮಶೇಖರ್, ರಾಕೇಶ್, ಸರಸ್ವತ್ತಮ್ಮ, ಲಲಿತಾನರಸಿಂಹಯ್ಯ, ಮನುಲೋಕೇಶ್, ಯಲ್ಲಮ್ಮ, ಹೊಂಬಯ್ಯ ಹಾಜರಿದ್ದು ಅಭಿನಂದಿಸಿದರು‌.

23ಕೆಆರ್ ಎಂಎನ್ 1.ಜೆಪಿಜಿ

ಬಿಡದಿ ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾದ ದೇವರಾಜು ಅವರನ್ನು ಸದಸ್ಯರು ಅಭಿನಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಒಲವಿನ ಊಟ ಬಡಿಸಲು ಸಿದ್ಧವಾದ ಅಕ್ಕ ಕೆಫೆ
ಚನ್ನಮ್ಮ ಮೂರ್ತಿ ಉದ್ಘಾಟನಾ ಸಮಾರಂಭಕ್ಕೆ ಬಹಿಷ್ಕಾರ