ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಈ ವೇಳೆ ಆದೇಗಾರನಹಳ್ಳಿಯ ರವಿಕುಮಾರ್ ಮಾತನಾಡಿ, ಈ ಭಾಗದಲ್ಲಿ 70ಕ್ಕೂ ಹೆಚ್ಚು ಸ್ಟೋನ್ ಕ್ರಷರ್ಗಳು ಹಾಗೂ ನೂರಕ್ಕೂ ಹೆಚ್ಚು ಕಲ್ಲುಕ್ವಾರಿಗಳಿವೆ. ಆದರೆ, ಇಲ್ಲಿ ಸರ್ಕಾರದ ನೀತಿ ನಿಯಮಗಳನ್ನು ಉಲ್ಲಂಘಿಸಿ ಮನಸ್ಸೊ ಇಚ್ಚೆ ಎಂ ಸ್ಯಾಂಡ್, ಜಲ್ಲಿ ,ತುಂಬಿದ ಟಿಪ್ಪರ್‌ಗಳ ಓಡಾಟ ಮಾಡುತ್ತಿವೆ ಎಂದು ಆರೋಪಿಸಿದರು.
ಗ್ರಾಮೀಣರಿಗೆ ಅನಾರೋಗ್ಯ:ತಾಲೂಕಿನ ಆದೆನ್ನಗಾರಹಳ್ಳಿ, ಬುಶೆಟ್ಟಿಹಳ್ಳಿ, ಪೆರೇಸಂದ್ರ, ಹಳೇಪೆರೇಸಂದ್ರ, ಶೆಟ್ಟಿವಾರಹಳ್ಳಿ, ಹೂವಿನವಾರಹಳ್ಳಿ, ಮುತ್ತುಕದಹಳ್ಳಿ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಮಕ್ಕಳು, ವೃದ್ಧರಲ್ಲದೆ ಜಾನುವಾರಗಳ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಗಣಿಗಾರಿಕೆಯಿಂದ ವಿವಿಧ ಕಾಯಿಲೆಗಳಿಗೆ ತುತ್ತಾಗಿದ್ದಾರೆ ಎಂದು ಮಾಧ್ಯಮಗಳ ಮುಂದೆ ತಮ್ಮ ಅಳಲನ್ನು ತೋಡಿಕೊಂಡರು.
ನಿತ್ಯ ನೂರಾರು ಟಿಪ್ಪರ್‌ಗಳು ಸಂಚರಿಸುತ್ತಿವೆ. ಕಲ್ಲು ಬಂಡೆಗಳನ್ನ ಸಿಡಿಸಲು ಪ್ರಬಲವಾಗಿ ಸ್ಪೋಟಕ ಸಾಮಗ್ರಿ ಬಳಸಿ ಹೊಡೆಯುವುದರಿಂದ ಆ ರಭಸಕ್ಕೆ ಮನೆಗಳ ಗೋಡೆಗಳು ಬಿರುಕು ಬಿಟ್ಟಿದ್ದಲ್ಲದೆ ದಪ್ಪ ಕಲ್ಲು ದೂಳು ರೈತರ ಜಮೀನಿನಲ್ಲಿ ಬಿದ್ದು ವ್ಯವಸಾಯ ಸಂಪೂರ್ಣವಾಗಿ ಹಾಳಾಗಿ ಹೋಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.ಜನಪ್ರತಿನಿಧಿಗಳ ಬೆಂಬಲ
ಕಳೆದ ಇಪ್ಪತ್ತು ವರ್ಷಗಳಿಂದ ಸತತವಾಗಿ ಕ್ರಷರ್ ಕೆಲಸ ನಡೆಯುತ್ತಿದ್ದರೂ ಸಹ ಸ್ಥಳೀಯ ಜನಪ್ರತಿನಿಧಿಗಳು ಈ ಭಾಗದ ರೈತರ ಪರವಾಗಿ ನಿಲ್ಲಲು ಮುಂದೆ ಬರುತ್ತಿಲ್ಲ. ಬದಲಾಗಿ ಕ್ರಷರ್ ಮಾಲೀಕರಿಗೆ ಬೆಂಬಲ ನೀಡ್ತಿದ್ದಾರೆ. ಕ್ರಷರ್ ನ ಧೂಳಿನಿಂದ ಇಲ್ಲಿನ ಮೇವು ಸಹ ಸಂಪೂರ್ಣ ಕಲುಷಿತವಾಗ್ತಿದೆ. ಇದರಿಂದಾಗಿ ದನಕರುಗಳು ಅನಾರೋಗ್ಯದಿಂದ ಸಾವನ್ನಪ್ಪುತ್ತಿವೆ. ಜೊತೆಗೆ ಈ ಭಾಗದ ಪರಿಸರ ಸಂಪೂರ್ಣವಾಗಿ ನಾಶವಾಗ್ತಿದೆ. ಹಾಗಾಗಿ ಈ ಕುರಿತಾಗಿ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಸೂಕ್ತ ಕ್ರಮವಹಿಸಬೇಕೆಂದು ಆಗ್ರಹಿಸಿದರು.ಜೊತೆಗೆ ಈ ಭಾಗದಲ್ಲಿ ಕ್ರಷರ್ ಗಳು ತಲೆಎತ್ತಿದ ಬಳಿಕ ನೂರಾರು ಎಕರೆ ರೈತರ ಭೂಮಿ ಸಂಪೂರ್ಣ ನಾಶವಾಗಿದೆ. ಭೂಮಿ ಇದ್ದರೂ ಸಹ ವ್ಯವಸಾಯ ಮಾಡಲಾಗದ ದುಸ್ಥಿತಿಗೆ ನಾವೆಲ್ಲರೂ ತಲುಪಿದ್ದೇವೆ. ಆದರೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಈವರೆಗೂ ಯಾವುದೇ ಕ್ರಮವಹಿಸಿಲ್ಲ. ಹಾಗಾಗಿ ಈಗಲಾದರೂ ಸೂಕ್ತ ಕ್ರಮವಹಿಸಲಿ ಎಂದು ಒತ್ತಾಯಿಸಿದರು.
ರಸ್ತೆಯಲ್ಲಿ ಸಂಚರಿಸಲು ಭಯಇತ್ತೀಚೆಗೆ ಮಹಿಳಾ ಪೇದೆಯೊಬ್ಬರು ಸ್ಕೂಟಿಯಲ್ಲಿ ಹೋಗುತ್ತಿದ್ದಾಗ ಟಿಪ್ಪರ್ ನಿಂದ ಕಲ್ಲು ಬಿದ್ದು ಆಸ್ಪತ್ರೆ ಪಾಲಾಗಿದ್ದರು. ಶಾಲಾ-ಕಾಲೇಜು ಹಾಗೂ ಹೆಚ್ಚು ಜನಸಂದಣಿ ಇರುವ ಪ್ರದೇಶಗಳಲ್ಲಿ ಕರ್ಕಶ ಹಾರ್ನ್ ಮಾಡುವ ಟಿಪ್ಪರ್‌ಗಳು ವಿದ್ಯಾರ್ಥಿಗಳಲ್ಲಿ ಭಯ ಹುಟ್ಟಿಸುತ್ತಿವೆ. ವಾಹನಗಳ ಅಬ್ಬರಕ್ಕೆ ಮಕ್ಕಳು ರಸ್ತೆಯಲ್ಲಿ ಓಡಾಡಲು ಭಯಪಡುತ್ತಿದ್ದಾರೆ. ಕೂಡಲೆ ಟಿಪ್ಪರ್ ಗಳವರು ಧೂಳು ಎಳದಂತೆ ರಸ್ತೆಗೆ ಮತ್ತು ಎಂ ಸ್ಯಾಂಡ್ ಗೆ ನೀರು ಸಿಂಪಡಿಸ ಬೇಕು. ಓವರ್ ಲೋಡ್ ಹಾಕಬಾರದು, ಅತಿಯಾದ ವೇಗದಲ್ಲಿ ಸಾಗ ಬಾರದು ಎಂದು ಒತ್ತಾಯಿಸಿದರು.
ಟಿಪ್ಪರ್‌ಗಳ ವೇಗ ಹಾಗೂ ಆರ್ಭಟಕ್ಕೆ ಸಣ್ಣ ಪುಟ್ಟ ವಾಹನ ಸವಾರರು ಬೆದರುತ್ತಿದ್ದು ರಸ್ತೆಯಲ್ಲಿ ಹೋಗಲು ಭಯಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಶಾಲಾ-ಕಾಲೇಜು ಹಾಗೂ ಹೆಚ್ಚು ಜನಸಂದಣಿ ಇರುವ ಪ್ರದೇಶಗಳಲ್ಲಿ ಕರ್ಕಶ ಹಾರ್ನ್ ಮಾಡುವ ಟಿಪ್ಪರ್‌ಗಳು ವಿದ್ಯಾರ್ಥಿಗಳಲ್ಲಿ ಭಯ ಹುಟ್ಟಿಸುತ್ತಿವೆ. ವಾಹನಗಳ ಅಬ್ಬರಕ್ಕೆ ಮಕ್ಕಳು ರಸ್ತೆಯಲ್ಲಿ ಓಡಾಡಲು ಭಯಪಡುತ್ತಿದ್ದಾರೆ.100ಕ್ಕೂ ಹೆಚ್ಚು ಟಿಪ್ಪರ್‌ಗಳಿಗೆ ತಡೆ
ಪ್ರತಿಭಟನೆಯಿಂದ ಆದೇಗಾರಹಳ್ಳಿಯಿಂದ ಗುಡಿಬಂಡೆ , ಪರೇಸಂದ್ರ ಮಾರ್ಗದ ಎರಡೂ ಕಡೆ ನೂರಾರು ಟಿಪ್ಪರ್ ಲಾರಿಗಳು ನಿಂತಿದ್ದವು. ಪ್ರತಿಭಟನೆಯಲ್ಲಿ ರವಿಕುಂಆರ್, ಶಿವಕುಮಾರ್, ಹರೀಶ್, ಶ್ರೀಕಾಂತ್, ಶಿವಶಂಕರರೆಡ್ಡಿ, ರಾಘವೇಂದ್ರ, ಆದೇಗಾರಹಳ್ಳಿ ಮತ್ತು ಚಿಕ್ಕನಾಗವೇಲಿ ಗ್ರಾಮಸ್ಥರು ಇದ್ದರು.