ವೈದ್ಯರ ಸಮಸ್ಯೆ ಬಗ್ಗೆ ಚರ್ಚಿಸುವೆ: ಡಾ. ನಾಗಲಕ್ಷ್ಮಿ ಬಾಯಿ

KannadaprabhaNewsNetwork |  
Published : Oct 23, 2024, 12:51 AM IST
ಸುರಪುರ ತಾಲೂಕಿನ ಮಾಲಗತ್ತಿ ಗ್ರಾಮದಲ್ಲಿ ಮಂಗಳವಾರ ನಡೆದ ಮಹಿಳೆಯರ ಸಂವಾದ ಕಾರ್ಯಕ್ರಮಕ್ಕೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿಬಾಯಿ ಅವರು ಚಾಲನೆ ನೀಡಿದರು. | Kannada Prabha

ಸಾರಾಂಶ

Discussing the problem of doctors: Dr. Nagalakshmi statement

- ಸುರಪುರ ತಾಲೂಕು ಆಸ್ಪತ್ರೆಗೆ ಮಹಿಳಾ ಆಯೋಗದ ಅಧ್ಯಕ್ಷೆ ಭೇಟಿ, ಪರಿಶೀಲನೆ

- ರೋಗಿಗಳಿಂದ ವಿವರ ಪಡೆದು ಚಿಕಿತ್ಸೆ ನೀಡಲು ಸೂಚನೆ

ಕನ್ನಡಪ್ರಭ ವಾರ್ತೆ ಸುರಪುರ

ತಾಲೂಕಿನ ಸರ್ಕಾರಿ ತಾಲೂಕು ಆಸ್ಪತ್ರೆಗೆ ಮಂಗಳವಾರ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಬಾಯಿ ಚೌಧರಿ ಭೇಟಿ ನೀಡಿ, ಪರಿಶೀಲಿಸಿ ತಾಲೂಕು ಆರೋಗ್ಯ ಅಧಿಕಾರಿಯಿಂದ ಮಾಹಿತಿ ಪಡೆದರು.

ಆಸ್ಪತ್ರೆಯ ಬೆಂಚ್‌ ಮೇಲೆ ಕುಳಿತಿದ್ದ ಬೋನಾಳದ ಹಿರಿಯ ಮಹಿಳೆ ನೀಲಮ್ಮ ಅವರನ್ನು ಮಾತನಾಡಿಸಿ, ಯಾಕೆ ಬಂದಿದ್ದೀರಿ ಎನ್ನುತ್ತಿದ್ದಂತೆ ಮಹಿಳೆಯೂ ಆರೋಗ್ಯ ಸರಿಯಿಲ್ಲ. ತೋರಿಸಿಕೊಳ್ಳಲು ಬಂದಿದೀನಿ ಅಂದಾಗ, ಗೃಹಲಕ್ಷ್ಮಿ ಮತ್ತು ವೃದ್ಧಾಪ್ಯ ವೇತನ ಬರುತ್ತದೆ ಎಂದು ಕೇಳಿದಾಗ ಬರುವುದಿಲ್ಲ ಎಂಬುದಾಗಿ ತಿಳಿಸಿದರು. ತಕ್ಷಣವೇ ಸಿಡಿಪಿಒ ಮತ್ತು ತಹಸೀಲ್ದಾರ ಅವರನ್ನು ಕರೆಯಿಸಿ ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ತಕ್ಷಣವೇ ಒದಗಿಸಿ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಕುಡಿವ ನೀರಿನ ಟ್ಯಾಂಕ್ ಪರಿಶೀಲಿಸಿ ಲೋಟಗಳನ್ನು ಕೈಯಲ್ಲಿ ಎತ್ತಿಕೊಂಡು ನೋಡಿದರು. ಇದನ್ನು ಜನರು ಕುಡಿಯಲು ಇಟ್ಟಿರುವುದು ತಾನೆ ಎಂದು ಕೇಳಿದರು. ರೋಗಿಗಳಿದ್ದ ವಾರ್ಡ್ ಪ್ರವೇಶಿಸಿ ಅಜ್ಜಿ ಏನಾಗಿದೆ. ಡಾಕ್ಟರ್ ನೋಡಿದ್ದೀರಾ? ಟ್ರೀಟ್‌ಮೆಂಟ್ ಕೊಟ್ಟಿದ್ದಾರಾ? ಎಂಬುದಾಗಿ ಪ್ರಶ್ನಿಸಿ ಉತ್ತರ ಪಡೆದುಕೊಂಡರು. ವೈದ್ಯರು ರೋಗಿಯನ್ನು ಸಂಪೂರ್ಣವಾಗಿ ಪರಿಶೀಲಿಸಿ ಚಿಕಿತ್ಸೆ ಕೊಡಿ ಎಂದು ವೈದ್ಯರಿಗೆ ಸೂಚಿಸಿದರು.

ಮಹಿಳಾ ರೋಗಿಗಳಿಗೆ ಗೃಹಲಕ್ಷ್ಮಿ ಹಣ ಬರುತ್ತಿದೆ ಇಲ್ಲವೇ ಎಂಬುದನ್ನು ಖಚಿತಪಡಿಸಿಕೊಂಡರು. ಅಲ್ಲಿಂದ ಶಸ್ತ್ರ ಚಿಕಿತ್ಸಾ ಘಟಕ ಭೇಟಿ ನೀಡಿ ಮಹಿಳೆಯರ ಆರೋಗ್ಯ ಪರಿಶೀಲಿಸಿ ಹೆಣ್ಣು ಮಕ್ಕಳು ಹೆತ್ತವರು ತಪ್ಪದೇ ಭಾಗ್ಯಲಕ್ಷ್ಮಿ ಬಾಂಡ್ ಮಾಡಿಸಬೇಕು ಎಂದು ತಿಳಿಸಿ, ಪ್ರಸವೋತ್ತರ ಆರೈಕೆ ವಾರ್ಡ್ ಭೇಟಿಗೆ ಭೇಟಿ ನೀಡಿ ಮಕ್ಕಳ ತಾಯಂದಿರನ್ನು ಮಾತನಾಡಿಸಿದರು.

ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಆಯೋಗದ ಅಧ್ಯಕ್ಷರು, 10 ಜನಕ್ಕಿಂತಲೂ ಹೆಚ್ಚು ಮಹಿಳೆಯರು ಕಾರ್ಯನಿರ್ವಹಿಸುವ ಪ್ರತಿಯೊಂದು ಸರ್ಕಾರಿ ಇಲಾಖೆಯಲ್ಲಿ ಡಿಸ್ಟಿಕ್ ಲೀಗಲ್ ಸೆಲ್ ತಂಡ ರಚಿಸಬೇಕು. ಯಾದಗಿರಿ ಪ್ರವಾಸದಲ್ಲಿ 20ಕ್ಕಿಂತಲೂ ಹೆಚ್ಚು ಅರ್ಜಿ ಸ್ವೀಕರಿಸಲಾಗಿದೆ. ಆಯೋಗವೂ ಅರ್ಜಿಗಳನ್ನು ವಿಲೇವಾರಿ ಮಾಡಲು ತನ್ನ ಪರಿಮಿತಿಯೊಳಗೆ ಕಾರ್ಯನಿರ್ವಹಿಸುತ್ತದೆ ಎಂದರು.

ತಾಲೂಕಿನಲ್ಲಿ 4.75 ಲಕ್ಷ ಜನಸಂಖ್ಯೆಗೆ ನಾಲ್ವರು ವೈದ್ಯರು ಮಾತ್ರ ಇದ್ದಾರೆ. ಆಸ್ಪತ್ರೆಗೆ ಕನಿಷ್ಠವೆಂದರೂ 20 ವೈದ್ಯರು ಇರಬೇಕು. ಇದು ದೊಡ್ಡ ಸಮಸ್ಯೆ. ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಮತ್ತು ಇತರೆ ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ಚರ್ಚಿಸಿ ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು.

ರಾಜ್ಯದಲ್ಲಿ ನೀಡುವ ಎಲ್ಲ ಅರ್ಜಿಗಳಿಗೆ ಸಮಯಾನುಸಾರ ಪರಿಹಾರ ಕೊಡಲು ಶ್ರಮಿಸುತ್ತಿದ್ದೇವೆ. ವಡಗೇರಾ ತಾಲೂಕಿನಲ್ಲಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯರು ಎರಡು ವರ್ಷದಿಂದ ಇಲ್ಲವಂತೆ. ನಾನು ಬರುತ್ತೇನೆ ಎಂದೇ ವೈದ್ಯರೊಬ್ಬರು ಬಂದಿದ್ದರು. ಅದು ನಮಗೆ ತಿಳಿಯುವುದಿಲ್ಲವೇ? ಈಗ ಪ್ರಸ್ತುತ ಕುಡುಕರ ಅಡ್ಡೆಯಾಗಿದೆ. ಜನರ ಅಪೇಕ್ಷೆಯಂತೆ ಆಂಬ್ಯುಲೆನ್ಸ್ ಮತ್ತು ವೈದ್ಯರನ್ನು ನೇಮಿಸಲಾಗುವುದು ಎಂದರು.

------

.....ಕೋಟ್-1....

ಸಮಸ್ಯೆ ಪರಿಶೀಲಿಸಿದ್ದೇನೆ. ವರದಿ ನೀಡುವಂತೆಯು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಹೇಳಿ ಬಿಡುವುದಿಲ್ಲ. ಅದರ ಅನುಸರಣೆ ಮಾಡುತ್ತೇನೆ. ಮುಂದಿನಗಳಲ್ಲಿ ಮತ್ತೊಮ್ಮೆ ಸುರಪುರಕ್ಕೆ ಭೇಟಿ ನೀಡುವೆ. ಜನರೊಂದಿಗೆ ಬೆರೆತಾಗ ಕಷ್ಟ ಅರಿಯಲು ಸಾಧ್ಯ. ಅದನ್ನೇ ಮಾಡುತ್ತಿರುವೆ.:- ಡಾ. ನಾಗಲಕ್ಷ್ಮಿಬಾಯಿ ಚೌಧರಿ, ಮಹಿಳಾ ಆಯೋಗದ ಅಧ್ಯಕ್ಷರು, ಕರ್ನಾಟಕ ರಾಜ್ಯ.

-----

---ಬಾಕ್ಸ್ ---

- ನವೆಂಬರ್ 5 ರಂದು ಗ್ರಾಮಸಭೆ

ಸುರಪುರ: ತಾಲೂಕಿನ ಮಾಲಗತ್ತಿ ಗ್ರಾಮದಲ್ಲಿ ಮಂಗಳವಾರ ನಡೆದ ಮಹಿಳೆಯರ ಸಂವಾದ ಕಾರ್ಯಕ್ರಮದಲ್ಲಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿಬಾಯಿ ಅವರು, ಕಂದಾಯ, ಮಹಿಳಾ ಮತ್ತು ಮಕ್ಕಳ ಇಲಾಖೆ, ಪಂಚಾಯತ್ ರಾಜ್ ಇಲಾಖೆ, ಕೆ.ಎಸ್.ಆರ್.ಟಿ.ಸಿ ಇಲಾಖೆ, ಕಾರ್ಮಿಕ ಇಲಾಖೆ, ಪೊಲೀಸ್ ಇಲಾಖೆ ಸೇರಿದಂತೆ ಹಲವು ಮನವಿ ಸ್ವೀಕರಿಸಿ ಕೆಲವು ಸ್ಥಳದಲ್ಲೇ ಪರಿಹರಿಸಿದರು.

ಈ ವೇಳೆ ಮುಂದಿನ ನ.5 ರಂದು ತಹಸೀಲ್ದಾರರು ಹಾಗೂ ತಾಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿಗಳ ಸಮ್ಮುಖದಲ್ಲಿ ಗ್ರಾಮಸಭೆ ನಡೆಸಿ ಗ್ರಾಮದ ಸಮಸ್ಯೆಗಳ ಮನವಿ ಲಿಖಿತ ರೂಪದಲ್ಲಿ ಪಡೆದು ಪರಿಹಾರ ಕಂಡುಕೊಳ್ಳಲಾಗುತ್ತದೆ ಎಂದು ತಹಸೀಲ್ದಾರ್ ತಿಳಿಸಿದರು.

-----

22ವೈಡಿಆರ್9: ಸುರಪುರ ನಗರದ ತಾಲೂಕು ಆಸ್ಪತ್ರೆಯಲ್ಲಿ ರೋಗಿಯೊಬ್ಬರನ್ನು ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಬಾಯಿ ಚೌಧರಿ ಮಾತನಾಡಿಸಿದರು.

-

22ವೈಡಿಆರ್10: ಸುರಪುರ ತಾಲೂಕಿನ ಮಾಲಗತ್ತಿ ಗ್ರಾಮದಲ್ಲಿ ಮಂಗಳವಾರ ನಡೆದ ಮಹಿಳೆಯರ ಸಂವಾದ ಕಾರ್ಯಕ್ರಮಕ್ಕೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿಬಾಯಿ ಅವರು ಚಾಲನೆ ನೀಡಿದರು.

-

22ವೈಡಿಆರ್ : ಸುರಪುರ ತಾಲೂಕಿಗೆ ಮಂಗಳವಾರ ಭೇಟಿ ನೀಡಿದ್ದ ವೇಳೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿಬಾಯಿ ಅವರು ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸುತ್ತಿರುವುದು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ 2 ದಿನ ಮೋಡಕವಿದ ವಾತಾವರಣ, ಮಳೆ
ಜಾಲಹಳ್ಳಿ ಕೆಳಸೇತುವೆ ನಿರ್ಮಾಣ ಸಂಬಂಧ ಶಾಸಕರ ಸಭೆ-ಮಿ. ಮುನಿ ಪ್ರಶ್ನೆಗೆ ಉತ್ತರಿಸಲ್ಲ: ಡಿಸಿಎಂ