ಕುಂದುಕೊರತೆಗಳ ಬಗ್ಗೆ ಚರ್ಚೆ

KannadaprabhaNewsNetwork | Published : Sep 30, 2024 1:22 AM

ಸಾರಾಂಶ

ತುಮಕೂರು: ಜಯನಗರ ಪೂರ್ವ ಬಡಾವಣೆಯ ನಾಗರಿಕರೊಂದಿಗೆ, ಬಡಾವಣೆಯ ಕುಂದುಕೊರತೆಗಳ ಕುರಿತು ಕೌಶಲ್ಯಾಭಿವೃದ್ದಿ ಮಂಡಳಿಯ ಮಾಜಿ ಅಧ್ಯಕ್ಷ ಮುರಳೀಧರ ಹಾಲಪ್ಪ ಚರ್ಚೆ ನಡೆಸಿದರು.

ತುಮಕೂರು: ಜಯನಗರ ಪೂರ್ವ ಬಡಾವಣೆಯ ನಾಗರಿಕರೊಂದಿಗೆ, ಬಡಾವಣೆಯ ಕುಂದುಕೊರತೆಗಳ ಕುರಿತು ಕೌಶಲ್ಯಾಭಿವೃದ್ದಿ ಮಂಡಳಿಯ ಮಾಜಿ ಅಧ್ಯಕ್ಷ ಮುರಳೀಧರ ಹಾಲಪ್ಪ ಚರ್ಚೆ ನಡೆಸಿದರು.ಜಯನಗರ ಪೂರ್ವ ಬಡಾವಣೆಯ ಹಸಿರುವನ ಪಾರ್ಕಿನಲ್ಲಿ ಬಡಾವಣೆಯ ನಾಗರಿಕರೊಂದಿಗೆ ಬೆಳಗಿನ ವಾಯುವಿಹಾರದ ನಂತರ ಬಡಾವಣೆಯಲ್ಲಿ ಆಗಬೇಕಾಗಿರುವ ಅಭಿವೃದ್ದಿ ಕಾರ್ಯಗಳು ಕುರಿತಂತೆ ಅಲ್ಲಿನ ನಾಗರಿಕರು ಹಲವು ಮನವಿಗಳನ್ನು ಮಾಡಿದರು.ಬಡಾವಣೆಯಲ್ಲಿ ಬೀದಿ ದೀಪಗಳ ನಿರ್ವಹಣೆ ಸರಿಯಿಲ್ಲ. ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಬೆಳಗಿನ ಜಾವ ವಾಯು ವಿಹಾರಕ್ಕೆ ಬರುವ ಮಹಿಳೆಯರು, ವಯೋವೃದ್ದರ ಮೇಲೆ ಎರಗಿರುವ ಹಲವಾರು ಉದಾಹರಣೆಯಿದೆ. ಅಲ್ಲದೆ ರಾತ್ರಿ ೧೦ ಗಂಟೆ ನಂತರ ಬಡಾವಣೆಯ ರಸ್ತೆಗಳಲ್ಲಿ ತಿರುಗಾಡುವುದು ಕಷ್ಟವಾಗಿದೆ. ಎಲ್ಲೆಂದರಲ್ಲಿ ನಾಯಿಗಳು ದಾಳಿ ನಡೆಸುತ್ತೇವೆ. ಈ ಬಗ್ಗೆ ಹಲವು ಬಾರಿ ಪಾಲಿಕೆಗೆ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಬಡಾವಣೆಗಳಲ್ಲಿ ಕಳ್ಳತನ ಹೆಚ್ಚಿರುವ ಕಾರಣ ಪೊಲೀಸ್ ನೈಟ್‌ಬೀಟ್ ಹೆಚ್ಚಿಸಬೇಕು. ಬಡಾವಣೆಯಲ್ಲಿರುವ ಹಸಿರುವನ ಪಾರ್ಕು ಅಭಿವೃದ್ದಿಯಾಗಿದ್ದು,ಇನ್ನೂ ಕೆಲವು ಕೊರತೆಗಳಿದ್ದು, ಅವುಗಳನ್ನು ಪೂರೈಸುವ ನಿಟ್ಟಿನಲ್ಲಿ ಪಾಲಿಕೆ ಮುಂದಾಗಬೇಕೆಂದು ಆಗ್ರಹಿಸಿದರು.ಬಡಾವಣೆಯ ಹಿರಿಯ ನಾಗರಿಕರಾದ ರಾಮಚಂದ್ರ ಮಾತನಾಡಿ,ನಾಗರಿಕರೆಲ್ಲರೂ ಸೇರಿ ನಾವೇ ಸ್ವಯಂ ಶ್ರಮಾದಾನ ಮಾಡಿ ಹಸಿರುವನ ಪಾರ್ಕ್‌ ಅಭಿವೃದ್ದಿ ಪಡಿಸಿಕೊಂಡಿದ್ದೇವೆ. ಕೆಲ ಸೌಕರ್ಯಗಳ ಅಗತ್ಯವಿದೆ. ಅಲ್ಲದೆ ಬಡಾವಣೆಗಳಲ್ಲಿ ಪಾಲಿಕೆಯಿಂದ ಕಸವಿಲೇವಾರಿ ಸರಿಯಾಗಿ ಆಗುತ್ತಿಲ್ಲ. ವಾಚನಾಲಯಕ್ಕೆ ಜಾಗ ಮೀಸಲಿಟ್ಟಿದ್ದು, ಕಟ್ಟಡ ನಿರ್ಮಾಣವಾಗಬೇಕಿದೆ.ಈ ನಿಟ್ಟಿನಲ್ಲಿ ಜಿಲ್ಲಾಡಳಿತ, ನಗರಪಾಲಿಕೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದರು. ಈವೇಳೇ ಮಾತನಾಡಿದ ಮುರಳೀಧರ ಹಾಲಪ್ಪ, ನಮ್ಮ ಬಡಾವಣೆ, ನಮ್ಮ ಹೆಮ್ಮೆ ಎಂಬ ಘೋಷ ವ್ಯಾಕ್ಯದೊಂದಿಗೆ ಎಲ್ಲಾ ನಾಗರಿಕರ ಸಮಿತಿಗಳು ಒಗ್ಗೂಡಿದರೆ ಬಡಾವಣೆ ಅಭಿವೃದ್ದಿ ತಾನಾಗಿಯೇ ಆಗುತ್ತದೆ. ಈ ನಿಟ್ಟಿನಲ್ಲಿ ನಗರ ಪಾಲಿಕೆ, ಆರೋಗ್ಯ ಇಲಾಖೆ, ಪೊಲೀಸ್, ಬೆಸ್ಕಾಂ ಸೇರಿದಂತೆ ಸಂಬಂಧಪಟ್ಟ ಎಲ್ಲಾ ಇಲಾಖೆಗಳ ಹಿರಿಯ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಯಿಸಿ, ಅವರಿಗೆ ಬಡಾವಣೆಯ ಸಮಸ್ಯೆಗಳನ್ನು ಮನವರಿಕೆ ಮಾಡಿಕೊಡುವ ಮೂಲಕ ಸಮಸ್ಯೆಗಳ ಪರಿಹಾರಕ್ಕೆ ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಬಡಾವಣೆಗಳು ಅಭಿವೃದ್ದಿಯಾದರೆ ಮಾತ್ರ ಇಡೀ ನಗರ ಸುಂದರವಾಗಿ ಕಾಣಲು ಸಾಧ್ಯ. ಎಲ್ಲಾ ಬಡಾವಣೆಗಳಲ್ಲಿ ಸುಸಜ್ಜಿತ ರಸ್ತೆ, ಚರಂಡಿ, ಆಟದ ಮೈದಾನ, ಬೀದಿ ದೀಪ ಅಳವಡಿಸುವುದರ ಜೊತೆಗೆ, ಬೀದಿ ನಾಯಿಗಳು, ಕೋತಿಗಳ ಕಾಟಕ್ಕೆ ಕಡಿವಾಣ ಹಾಕಬೇಕಾಗಿದೆ. ಈ ಸಂಬಂಧ ಪಾಲಿಕೆಯ ಅಧಿಕಾರಿಗಳೊಂದಿಗೆ ಮಾತನಾಡುವ ಭರವಸೆ ವ್ಯಕ್ತಪಡಿಸಿದ ಮುರಳೀಧರ ಹಾಲಪ್ಪ, ಅಧಿಕಾರಿಗಳ ಸಭೆ ಸಂದರ್ಭದಲ್ಲಿ ನಾಗರಿಕರ ಬಡಾವಣೆಗೆ ಮೂಲಭೂತ ಸೌಕರ್ಯ ಸಂಬಂಧ ಮನವಿ ಸಲ್ಲಿಸಲು ಸಿದ್ದತೆ ಮಾಡಿಕೊಳ್ಳುವಂತೆ ಸಲಹೆ ನೀಡಿದರು. ಈ ವೇಳೆ ಬಡಾವಣೆಯ ನಾಗರಿಕರಾದ ರಾಜೇಶ್ವರಿ, ಷಡಕ್ಷರಿ, ವಿಜಯೇಂದ್ರ, ಮಂಗಳಕುಮಾರ್, ಕಿರಣ್‌ಕುಮಾರ್, ಚನ್ನವೀರಯ್ಯ, ರಾಮಚಂದ್ರಪ್ಪ, ಕುಲಕರ್ಣಿ, ಶಾಂತಕುಮಾರ್, ಶ್ರೀಧರಮೂರ್ತಿ, ವಿಜಯಶ್ರೀ ಸೇರಿದಂತೆ ಹಲವರು ಭಾಗವಹಿಸಿದ್ದರು.

Share this article