ಚಳ್ಳಕೆರೆ: ಮಾದಿಗ ಸಮುದಾಯದ ಒಳಮೀಸಲಾತಿ ಬಗ್ಗೆ ವಿಧಾನಸಭೆ ಅಧಿವೇಶನದ ವೇಳೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ನ್ಯಾಯದೊರಕಿಸಿಕೊಡುವುದಾಗಿ ಶಾಸಕ, ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮ ಅಧ್ಯಕ್ಷ ಟಿ.ರಘುಮೂರ್ತಿ ಭರವಸೆ ನೀಡಿದ್ದಾರೆ.
ಜಿಲ್ಲಾ ಮಾದಿಗ ಮಹಾಸಭಾ ಅಧ್ಯಕ್ಷ ದ್ಯಾವರನಹಳ್ಳಿ ತಿಪ್ಪೇಸ್ವಾಮಿ, ದಲಿತ ಸಂಘಟನೆಗಳ ಪ್ರಮುಖ ಹೋರಾಟಗಾರರಾದ ಟಿ.ವಿಜಯಕುಮಾರ್, ಕೃಷ್ಣಮೂರ್ತಿ, ಬೋರಣ್ಣ, ಬಿ.ಪಿ. ಪ್ರಕಾಶ್‌ಮೂರ್ತಿ, ಶಿವಣ್ಣ, ಆನಂದಕುಮಾರ್, ಹೊನ್ನೂರುಸ್ವಾಮಿ, ಭೀಮನಕೆರೆ ಶಿವಮೂರ್ತಿ, ಎಚ್.ಪ್ರಕಾಶ್ ಮುಂತಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ನಗರಸಭೆ ಅಧ್ಯಕ್ಷೆ ಜೈತುಂಬಿ, ಉಪಾಧ್ಯಕ್ಷೆ ಸುಜಾತಾ, ಸದಸ್ಯರಾದ ರಾಘವೇಂದ್ರ, ರಮೇಶ್‌ಗೌಡ, ಕೆ.ವೀರಭದ್ರಪ್ಪ, ಸುಮಾ, ನಾಮಿನಿ ಸದಸ್ಯ ಬಡಗಿ ಪಾಪಣ್ಣ, ಆರ್. ವೀರಭದ್ರಪ್ಪ, ಅನ್ವರ್‌ಮಾಸ್ಟರ್ ಮುಂತಾದವರು ಇದ್ದರು.