ಐಸಿಸಿ ಸಭೆಯಲ್ಲಿ ರೈತರ ಸಮಸ್ಯೆಗಳ ಚರ್ಚೆ

KannadaprabhaNewsNetwork |  
Published : Aug 10, 2026, 01:30 AM IST
09ಕೆಪಿಎಸ್‌ಡಬ್ಲ್ಯೂಆರ್ 01: | Kannada Prabha

ಸಾರಾಂಶ

The actual condition of the canal will be inspected, and issues faced by farmers as well as matters regarding water release will be discussed comprehensively at the ICC meeting. Sincere efforts will be made to release water in a manner that benefits the farmers.

- ಕಾಲುವೆ ದುರಸ್ತಿಗೂ ಒತ್ತು: ಎನ್ಎಸ್ ಬೋಸರಾಜು ಭರವಸೆ । ಟಿಎಲ್‌ಬಿಸಿ ಕಾಲುವೆಗೆ ಭೇಟಿ, ಪರಿಶೀಲನೆ

ಕನ್ನಡಪ್ರಭ ವಾರ್ತೆ ಸಿರವಾರ

ಕಾಲುವೆಯ ವಾಸ್ತವ ಸ್ಥಿತಿಯನ್ನು ಪರಿಶೀಲಿಸಿ, ರೈತರ ಸಮಸ್ಯೆಗಳು ಮತ್ತು ನೀರು ಹರಿಸುವ ಕುರಿತು ಐಸಿಸಿ ಸಭೆಯಲ್ಲಿ ಸಮಗ್ರವಾಗಿ ಚರ್ಚಿಸಲಾಗುವುದು.ರೈತರ ಅನುಕೂಲಕ್ಕೆ ಅನುಗುಣವಾಗಿ ನೀರು ಬಿಡುಗಡೆ ಮಾಡಲು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು. ನಮ್ಮ ಸರ್ಕಾರ ರೈತರ ಪರವಾಗಿದ್ದು, ರೈತರ ಬೇಡಿಕೆಗೆ ಅನುಗುಣವಾಗಿ ನೀರು ಹರಿಸಲು ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದು ಮಾಜಿ ಸಚಿವ, ವಿಧಾನ ಪರಿಷತ್ ಸದಸ್ಯ ಎನ್ಎಸ್ ಬೋಸರಾಜು ತಿಳಿಸಿದರು.

ತುಂಗಭದ್ರಾ ಜಲಾಶಯದಿಂದ ಕೃಷಿ ಚಟುವಟಿಕೆಗಳಿಗೆ ನೀರು ಹರಿಸುವ ಕುರಿತು ಚರ್ಚಿಸಲು ಆ.11ರಂದು ಮುನಿರಾಬಾದ್‌ನ ಕಾಡಾ ಕಚೇರಿಯಲ್ಲಿ ನೀರಾವರಿ ಸಲಹಾ ಸಮಿತಿ (ಐಸಿಸಿ) ಸಭೆ ನಡೆಯಲಿರುವ ಹಿನ್ನೆಲೆಯಲ್ಲಿ ತಾಲೂಕು ವ್ಯಾಪ್ತಿಯ ಎಡದಂಡೆ ಕಾಲುವೆಯನ್ನು ನೀರಾವರಿ ಅಧಿಕಾರಿಗಳೊಂದಿಗೆ ಭೇಟಿ ನೀಡಿ ವಾಸ್ತವ ಸ್ಥಿತಿಯನ್ನು ಭಾನುವಾರ ಪರಿಶೀಲಿಸಿದರು.

ಸಿರವಾರ ತಾಲೂಕಿನ ನವಲಕಲ್ ಮುಖ್ಯ ಕಾಲುವೆ, ಕವಿತಾಳ, 73-74 ಕ್ಯಾಂಪ್ ಸೇರಿ ವಿವಿಧ ಭಾಗಗಳಿಗೆ ಭೇಟಿ ನೀಡಿ ನೀರು ಹರಿಯುವಿಕೆ, ಕಾಲುವೆಯ ದುರಸ್ತಿ, ನೀರು ತಲುಪುವ ಸ್ಥಿತಿ ಹಾಗೂ ರೈತರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ರೈತರು ಹಾಗೂ ಅಧಿಕಾರಿಗಳಿಂದ ಮಾಹಿತಿ ಪಡೆದು, ಕಾಲುವೆಯ ಕೆಳಭಾಗದ ರೈತರಿಗೆ ಸಮರ್ಪಕವಾಗಿ ನೀರು ತಲುಪುವಂತೆ ಜಂಗಲ್ ಕಟಿಂಗ್ ಸೇರಿ ಅಗತ್ಯ ಕ್ರಮ ಕೈಗೊಳ್ಳುವ ಕುರಿತು ಅಧಿಕಾರಿ ಗಳೊಂದಿಗೆ ಚರ್ಚಿಸಿದರು.

ಈ ಸಂದರ್ಭದಲ್ಲಿ ಶಾಸಕ ಜಿ.ಹಂಪಯ್ಯ ನಾಯಕ, ಕಾರ್ಯ ನಿರ್ವಾಹಕ ಅಭಿಯಂತರ ಕೋದಂಡರಾಮ, ವಿವಿಧ ಇಲಾಖೆಗಳ ಅಧಿಕಾರಿ,ಸಿಬ್ಬಂದಿ,ಮುಖಂಡರು ಸೇರಿ ಅನೇಕರು ಇದ್ದರು.

---

09ಕೆಪಿಎಸ್‌ಡಬ್ಲ್ಯೂಆರ್ 01: ಸಿರವಾರ ತಾಲೂಕಿನ ನವಲಕಲ್, ಕವಿತಾಳದ ಟಿಎಲ್‌ಬಿಸಿ ಕಾಲುವೆಗೆ ಮಾಜಿ ಸಚಿವ ಎನ್‌.ಎಸ್‌.ಭೋಸರಾಜು, ಶಾಸಕ ಹಂಪಯ್ಯ ನಾಯಕ ಭೇಟಿ ನೀಡಿ ಪರಿಶೀಲಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮತಾಂತರ ತಡೆಗೆ ಧರ್ಮ ಪರಿವರ್ತನೆ ಪ್ರಕ್ರಿಯೆ ಪ್ರಾರಂಭ: ಅಲೋಕ್ ಕುಮಾರ್
ಹೊಸಕೋಟೆ ಕುರುಬರ ಸಂಘಕ್ಕೆ ಎಂಟಿಬಿ ಬೆಂಬಲಿತರ ಆಯ್ಕೆ