- ವಿಎಚ್‌ಪಿ ಅಂತಾರಾಷ್ಟ್ರೀಯ ಅಧ್ಯಕ್ಷ ಮಾಹಿತಿ । 8500 ಬ್ಲಾಕ್ ಗಳ ನಿರ್ಮಾಣ । ಪ್ರತಿ ಬ್ಲಾಕ್ ಗೆ ಧರ್ಮ ರಕ್ಷಕರ ನೇಮಕ
ಕನ್ನಡಪ್ರಭ ವಾರ್ತೆ ನರಸಿಂಹರಾಜಪುರಕರ್ನಾಕದ ಹಲವು ಭಾಗಗಳಲ್ಲಿ ಮತಾಂತರ ವ್ಯಾಪಕವಾಗಿ ನಡೆಯುತ್ತಿದ್ದು ಇದನ್ನು ತಡೆಯಲು 8500 ಬ್ಲಾಕ್ ಗಳಲ್ಲಿ ಧರ್ಮ ಪರಿವರ್ಥನೆ ಪ್ರಕ ಪ್ರಾರಂಭವಾಗಿದ್ದು ಪ್ರತಿ ಬ್ಲಾಕ್ ಗೆ ಒಬ್ಬ ಧರ್ಮ ರಕ್ಷಕರರನ್ನು ನೇಮಿಸಿದ್ದೇವೆ ಎಂದು ವಿಶ್ವ ಹಿಂದೂ ಪರಿಷತ್ ಅಂತಾರಾಷ್ಟ್ರೀಯ ಅಧ್ಯಕ್ಷ ಅಲೋಕ್ ಕುಮಾರ್ ಹೇಳಿದರು.
ಶನಿವಾರ ರಾತ್ರಿ ಸಿಂಹನಗದ್ದೆ ಬಸ್ತಿಮಠಕ್ಕೆ ಭೇಟಿ ನೀಡಿ ಜ್ವಾಲಾಮಾಲಿನಿ ದೇವಿಯದರ್ಶನ ಪಡೆದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ನರಸಿಂಹರಾಜಪುರ ಸೇರಿದಂತೆ ಕರ್ನಾಟಕದ ಹಲವು ಭಾಗಗಳಲ್ಲಿ ಮತಾಂತರ ವ್ಯಾಪಕ ವಾಗಿ ನಡೆಯುತ್ತಿದೆ. ವಿಎಚ್‌ಪಿ ಇದನ್ನು ಗಂಭೀರವಾಗಿ ಪರಿಗಣಿಸಿದೆ. ಎರಡು ವರ್ಷಗಳಲ್ಲಿ ಕೇವಲ ಮತಾಂತರವನ್ನು ತಡೆಗಟ್ಟುವುದು ಹಾಗೂ ಘರ್ ವಾಪಸಿ ಕಾರ್ಯಕ್ರಮ ವ್ಯಾಪಕವಾಗಿ ಕೈಗೊಳ್ಳಲು ಸೂಚಿಸಲಾಗಿದೆ. ಇದು ಆರಂಭದ ದಿನವಾಗಿದ್ದು 4500 ಧರ್ಮರಕ್ಷಕರಿದ್ದು ಇವರು 6 ತಿಂಗಳಲ್ಲಿ 50 ಸಾವಿರ ಹಿಂದೂಗಳು ಇಸ್ಲಾಂ ಧರ್ಮಕ್ಕೆ ಪರಿವರ್ತನೆಯಾಗುವುದನ್ನು ತಡೆಗಟ್ಟಿ, ಹಿಂದೂ ಧರ್ಮಕ್ಕೆ ವಾಪಸ್ಸು ಕರೆತಂದಿದ್ದಾರೆ. ಒಂದು ವರ್ಷದಲ್ಲಿ ಈ ಸಂಖ್ಯೆ 1 ಲಕ್ಷಕ್ಕೆ ಹೆಚ್ಚಿಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.ಹಿಂದೂಗಳು ಹೆದರಿಕೆ ಹಾಗೂ ಇತರೆ ಆಮಿಷಗಳಿಗೆ ಬಲಿಯಾಗಿ ಇಸ್ಲಾಂ ಹಾಗೂ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ವಾಗಿರುವವರನ್ನು ಹಿಂದೂ ಧರ್ಮಕ್ಕೆ ಕರೆತರಬೇಕಾಗಿದೆ . ಲವ್ ಜಿಹಾದ್ ವಿಚಾರದಲ್ಲಿ ಭಜರಂಗದಳದವರು ಹುಡುಗಿ ಯರನ್ನು ಸ್ವಧರ್ಮಕ್ಕೆ ಕರೆದು ಕೊಂಡುಬರುತ್ತಾರೆ. ಮಾತೃಶಕ್ತಿ ಸಹೋದರಿಯರು ಮಾತನಾಡುತ್ತಾರೆ. ಹಿಂದೂ ಸಮಾಜ ಸಹಾಯ ಮಾಡುತ್ತದೆ. ಈ ವಿಚಾರದಲ್ಲಿ ನ್ಯಾಯಾಲಯಗಳು, ಪೊಲೀಸರು ಸಹಾಯ ಮಾಡಲು ಸಿದ್ಧರಿದ್ದಾರೆ. ಆದರೆ, ಅನೇಕ ಸಂದರ್ಭದಲ್ಲಿ ಹಿಂದೂ ಹುಡುಗಿಯೇ ವಾಪಾಸು ಬರಲು ಒಪ್ಪುವುದಿಲ್ಲ. ಇದಕ್ಕೆ ಕಾರಣ ಪ್ರಸ್ತುತ ದಿನಗಳಲ್ಲಿ ತಂದೆ,ತಾಯಿ ಮಕ್ಕಳಿಗೆ ಎಲ್ಲಾ ರೀತಿ ಸೌಲಭ್ಯ ಒದಗಿಸುತ್ತಾರೆ.
ಆದರೆ, ಹಿಂದೂ ಧರ್ಮದ ಬಗ್ಗೆ ಅವರಿಗೆ ಹೇಳುವುದಿಲ್ಲ. ಧರ್ಮದಂತೆ ನಿಮ್ಮ ಜೀವನದಲ್ಲಿ ಬದುಕಿ ಎಂದು ಹೇಳುವುದಿಲ್ಲ. ಧರ್ಮದ ಬಗ್ಗೆ ಗೊತ್ತಿರುವುದಿಲ್ಲ ಲವ್ ಜಿಹಾದ್ ಗೆ ಬಲಿಯಾಗುತ್ತಾರೆ.ರಾಮಮಂದಿರದ ನಿರ್ಮಾಣದ ಆಂದೋಲನದಲ್ಲಿ ಪ್ರಮುಖ ಪಾತ್ರವಹಿಸಿದ ಅಶೋಕ್ ಸಿಂಘಾಲ್ ಅವರ ಜನ್ಮ ಶತಾಬ್ಧಿ ಡಿ. 27 ರಿಂದ ಆರಂಭವಾಗಲಿದ್ದು ಅವರ ಇಚ್ಛೆಯಂತೆ ವಿಎಚ್‌ಪಿ ಸಂತರು ಮತ್ತು ಸಮಾಜದವರೊಂದಿಗೆ ಸೇರಿ ಗೋ ರಕ್ಷಣೆ, ಗೋ ಸಂವರ್ಧನೆ, ವೇದಗಳ ಸನ್ಮಾನ, ವೇದ ವಿದ್ಯಾಲಯ ಕಾರ್ಯಕ್ರಮ, ಗುರುಕುಲ ಮತ್ತು ಸಂಸ್ಕೃತ ಭಾಷ ಪ್ರಚಾರ ಮಾಡಲಾಗುತ್ತದೆ. ಅಲ್ಲದೆ ಅನುಸೂಚಿತ ಜಾತಿ ಮತ್ತು ಪಂಗಡದವರನ್ನು ಸ್ವಾವಲಂಭಿಯಾಗಿಸುವ ಕಾರ್ಯ ಕ್ರಮ, ಪರಿವಾರದ ಅಭಿವೃದ್ಧಿ ಹಾಗೂ ಘರ್ ವಾಪಸಿ ಕಾರ್ಯಕ್ರಮ ವರ್ಷಪೂರ್ತಿ ಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.
ಆಯೋಧ್ಯೆ ರಾಮ ಮಂದಿರದ ಹುಂಡಿ ಹಣ ಕಳ್ಳತನ ಮಾಡಿದವರಿಗೆ ಕಠಿಣ ಶಿಕ್ಷೆಯಾಗುವ ರೀತಿಯಲ್ಲಿ ಫಾಸ್ಟ್ ಟ್ರಾಕ್ ಕೋರ್ಟ್ ಸ್ಥಾಪಿಸಲಾಗಿದೆ. ತಪ್ಪಿಸ್ಥರಿಗೆ ಕಠಿಣ ಶಿಕ್ಷೆ ಖಚಿತ. ಹಿಂದೂ ಸಮಾಜದಲ್ಲಿ ಸಮಾನತೆ ಸಾಧಿಸುವ ನಿಟ್ಟಿನಲ್ಲಿ ಹಿಂದೂಳಿದವರನ್ನು, ಪರಿಶಿಷ್ಟಜಾತಿ ಮತ್ತು ಪಂಗಡದವರಿಗೆ ಸಮಾಜದ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಹಲವು ಕಾರ್ಯಕ್ರಮ ರೂಪಿಸಲಾಗಿದೆ. ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಪ್ರಗತಿ, ಕೌಶಲ್ಯಪ್ರಗತಿ ಎಂಬ 5 ಮಂತ್ರಗಳೊಂದಿಗೆ ಹಿಂದೂ ಸಮಾಜದಲ್ಲಿ ಸಮಾನತೆ ತರಲು ವಿಎಚ್‌ಪಿ ಶ್ರಮಿಸುತ್ತಿದೆ ಎಂದರು.
ಸುದ್ದಿ ಗೋಷ್ಠಿಯಲ್ಲಿ ವಿಶ್ವ ಹಿಂದೂ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಪಿ.ಸುರೇಶ್ ಕುಮಾರ್ ವಿಭಾಗೀಯ ಸಂಚಾಲಕ ಆರ್.ಡಿ.ಮಹೇಂದ್ರ, ಶೃಂಗೇರಿ ಸಂಯೋಜಕ ಅಭಿಗಡಿಗೇಶ್ವರ, ದಿವೀರ್ ಮಲ್ನಾಡ್ ಇದ್ದರು.