ತೋಟಗಾರಿಕೆಯಲ್ಲಿ ಮೌಲ್ಯ ಸರಪಳಿ ಅಭಿವೃದ್ಧಿ ಕುರಿತು ಚರ್ಚೆ

KannadaprabhaNewsNetwork |  
Published : Jul 30, 2025, 01:27 AM IST
ಎಡಿಬಿ ಅನುದಾನಿತ ಯೋಜನೆ ರೂಪಿಸಲು ಜಿಲ್ಲೆಗೆ ತಂಡ ಭೇಟಿತೋಟಗಾರಿಕೆಯಲ್ಲಿ ಮೌಲ್ಯ ಸರಪಳಿ ಅಭಿವೃದ್ದಿ ಕುರಿತು ಚರ್ಚೆ | Kannada Prabha

ಸಾರಾಂಶ

ಬಾಗಲಕೋಟೆ ಜಿಲ್ಲೆಯ ಸಮಗ್ರ ತೋಟಗಾರಿಕೆ ಅಭಿವೃದ್ಧಿಗೆ ಸಂಬಂಧಿಸಿದ ಶೈತ್ಯಾಗಾರ ನಿರ್ಮಾಣ, ತೋಟಗಾರಿಕೆ ಉತ್ಪನ್ನಗಳ ಸಂಸ್ಕರಣೆ ಹಾಗೂ ಉತ್ಪನ್ನಗಳ ಪ್ಯಾಕಿಂಗ್ ಮತ್ತು ಶೇಖರಣೆ ಕುರಿತು ಎಡಿಬಿ ತಂಡ ಜಿಲ್ಲಾಧಿಕಾರಿ ಸಂಗಪ್ಪ ಅವರ ಜೊತೆ ಚರ್ಚೆ ನಡೆಸಿತು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಜಿಲ್ಲೆಯ ಸಮಗ್ರ ತೋಟಗಾರಿಕೆ ಅಭಿವೃದ್ಧಿಗೆ ಸಂಬಂಧಿಸಿದ ಶೈತ್ಯಾಗಾರ ನಿರ್ಮಾಣ, ತೋಟಗಾರಿಕೆ ಉತ್ಪನ್ನಗಳ ಸಂಸ್ಕರಣೆ ಹಾಗೂ ಉತ್ಪನ್ನಗಳ ಪ್ಯಾಕಿಂಗ್ ಮತ್ತು ಶೇಖರಣೆ ಕುರಿತು ಎಡಿಬಿ ತಂಡ ಜಿಲ್ಲಾಧಿಕಾರಿ ಸಂಗಪ್ಪ ಅವರ ಜೊತೆ ಚರ್ಚೆ ನಡೆಸಿತು.

ಸೋಮವಾರ ಎಡಿಬಿ ತಂಡ ಭೇಟಿ ನೀಡಿದ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳ ಚರ್ಚೆ ಮಾಡಿದ ಅವರು, ಜಿಲ್ಲೆಯಲ್ಲಿ ಪ್ರಸ್ತುತ 6 ಶೈತ್ಯಾಗಾರಗಳಿದ್ದು, ಅವುಗಳ ಸಾಮರ್ಥ್ಯ ಜಿಲ್ಲೆಯಲ್ಲಿ ಉತ್ಪಾದನೆಯಾಗುತ್ತಿರುವ ಹಣ್ಣು ಮತ್ತು ತರಕಾರಿಗಳನ್ನು ಶೇಖರಿಸಿಡಲು ಸಾಧ್ಯವಾಗುತ್ತಿಲ್ಲ. ಈ ಹಿನ್ನಲೆಯಲ್ಲಿ ಶೈತ್ಯಾಗಾರಗಳನ್ನು ಪಿಪಿಪಿ ಮಾದರಿಯಲ್ಲಿ ನಿರ್ಮಾಣ ಮಾಡುವ ಕುರಿತು ಚರ್ಚಿಸಲಾಯಿತು. ಹೋಬಳಿ ಮಟ್ಟದ ಮತ್ತು ಗ್ರಾಮಮಟ್ಟದಲ್ಲಿ ತೋಟಗಾರಿಕೆ ಉತ್ಪನ್ನಗಳಿಗೆ ಈಗಾಗಲೇ ಮಹಾತ್ವಾಗಾಂಧಿ ಉದ್ಯೋಗ ಖಾತರಿ ಯೋಜನೆಯಡಿ ಲಭ್ಯವಿರುವ ಸಣ್ಣ ಗಾತ್ರದ ಗೋದಾಮಗಳನ್ನು ನಿರ್ಮಿಸಬೇಕಿದೆ.

ಜಿಲ್ಲೆಯ ರೈತ ಉತ್ಪಾದಕ ಸಂಘಗಳಿಗೆ ಬೇಕಾಗುವ ಮೂಲ ಸೌಕರ್ಯ ಕಾರ್ಯಕ್ಷಮತೆ ಹಾಗೂ ಉತ್ಪನ್ನಗಳ ಲಭ್ಯತೆ, ಬೇಡಿಕೆ ಮತ್ತು ಪೂರೈಕೆ ಅನುಸಾರ ಸಂಬಂಧಪಟ್ಟ ಬೆಳೆಗಾರರ ಜೊತೆ ಸಮನ್ವಯ ಸಾಧಿಸಬೇಕು. ತೋಟಗಾರಿಕೆ ಉತ್ಪನ್ನಗಳ ಮಾರಾಟ ಮತ್ತು ಖರೀದಿದಾರರ ಸಮ್ಮೇಳನವನ್ನು ರಾಜ್ಯಮಟ್ಟದಲ್ಲಿ ಏರ್ಪಡಿಸಲು ಚರ್ಚಿಸಿದಾಗ ಜಿಲ್ಲಾಧಿಕಾರಿಗಳು ಮಾತನಾಡಿ, ಈಗಾಗಲೇ ಜಿಲ್ಲೆಯಲ್ಲಿ ಸಮ್ಮೇಳನ ಮತ್ತು ಸಂವಾದ ಕಾರ್ಯಕ್ರಮ ಯಶಸ್ವಿಯಾಗಿದೆ. ರೈತರಿಂದ ಹಾಗೂ ಎಪ್‌ಪಿಒಗಳಿಂದ ಉತ್ತಮ ಪ್ರತಿಕ್ರಿಯೆ ಕುರಿತು ಎಡಿಬಿ ಪ್ರತಿನಿಧಿಗಳಿಗೆ ಮನವರಿಕೆ ಮಾಡಲಾಯಿತು.

ಹವಾಮಾನ, ನೈಸರ್ಗಿಕ ವಿಕೋಪಗಳ ವಿವರಗಳನ್ನು ಹೆಚ್ಚಿನ ರೀತಿಯಲ್ಲಿ ಲಭ್ಯವಿರುವಂತೆ ಸಾಮಾಜಿಕ ಜಾಲತಾಣಗಳಾದ ರೇಡಿಯೋ ಟಾಕ್, ಮೊಬೈಲ್ ಆ್ಯಪ್ ಅಭಿವೃದ್ಧಿಪಡಿಸುವುದು, ತೋಟಗಾರಿಕೆ ಉತ್ಪನ್ನಗಳ ಮೌಲ್ಯವರ್ಧನೆ ಹಾಗೂ ಸಂಸ್ಕರಣೆ, ದ್ರಾಕ್ಷಿ ಮತ್ತು ದಾಳಿಂಬೆ ಬೆಳೆಗೆ ವಿಶೇಷ ಪ್ಯಾಕೇಜ್‌ ಗುರುತಿಸುವುದು, ಉತ್ಪನ್ನಗಳ ಸಂಸ್ಕರಣೆಗೆ ಬೇಕಾಗುವ ಯಂತ್ರೋಪಕರಣಗಳು ದುಬಾರಿಯಾಗಿದ್ದು, ಅವುಗಳನ್ನು ಎಫ್‌ಪಿಓ ಮುಖಾಂತರ ಖರೀದಿಸುವ ಕೆಲಸ ಕಾರ್ಯವಾಗಬೇಕು.

ತೋಟಗಾರಿಕೆ ಉತ್ಪನ್ನಗಳು ಮಾರುಕಟ್ಟೆಯನ್ನು ಉತ್ತಮಗೊಳಿಸಲು ಹೋಬಳಿ ಮತ್ತು ತಾಲೂಕು ಮಟ್ಟದಲ್ಲಿ ಕಲೆಕ್ಷನ್ ಸೆಂಟರ್ ಮತ್ತು ಆಕ್ಷನ್ ಸೆಂಟರ್‌ಗಳ ಸ್ಥಾಪನೆ, ಕ್ಲೀನ್ ಪ್ಲಾಂಟ್ ಪ್ರೋಗ್ರಾಮ್ ಅಡಿಯಲ್ಲಿ ಉತ್ತಮ ಗುಣಮಟ್ಟದ ದಾಳಿಂಬೆ, ದ್ರಾಕ್ಷಿ, ಮಾವು ಹಾಗೂ ನಿಂಬೆ ಸಸಿಗಳನ್ನು ಉತ್ಪಾದಿಸಲು ಸರ್ಕಾರಿ ಹಾಗೂ ಖಾಸಗಿ ನರ್ಸರಿಗಳಿಗೆ ಎಸ್.ಓ.ಪಿ ಹಾಗೂ ವೈಜ್ಞಾನಿಕವಾಗಿ ಉತ್ಪಾದಿಸುವ ಅಂಶಗಳ ಕುರಿತು ತಂಡ ಚರ್ಚಿ ನಡೆಸಿದರು.

ಎಡಿಬಿ ತಂಡದಲ್ಲಿ ಅಗ್ರಿಕಲ್ಚರ ಆಂಡ್ ನ್ಯಾಚುರಲ್ ರೆಸೋರ್ಸ ಸ್ಟೇಷಾಲಿಸ್ಟ್ ರಾಘವೇಂದ್ರ ನಡುವಿನಮನಿ, ಅಗ್ರಿ ಬ್ಯೂಜಿನೆಸ್ ಎಕ್ಸಪರ್ಟ್‌ ಮೇಘಾ ಪಾಂಡೆ, ರೂರಲ್ ಫೈನಾನ್ಸಿಂಗ್ ಎಕ್ಷಪರ್ಟ್‌ ಅಲೋಕ್ ಕುಮಾರ ಸಿಂಗ್ ಸೇರಿದಂತೆ ತೋಟಗಾರಿಕೆ ಉಪನಿರ್ದೇಶಕ ರವೀಂದ್ರ ಹಕಾಟಿ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಗವಂತನ ಶಕ್ತಿ ಪಡೆದವರಿಂದ ಡಿಕೆಶಿ ಸಿಎಂ ಆಗುವ ದಿನಾಂಕ ನಿಗದಿ : ಇಕ್ಬಾಲ್
ಜನ ನಂಗೆ ಇನ್ನೊಂದು ಅವಕಾಶ ಕೊಡಲಿ : ಎಚ್ಡಿಕೆ