ಶ್ರೀಶಿವರಾತ್ರೀಶ್ವರ ಶಿವಯೋಗಿಗಳ ಜಯಂತಿ ಹಿನ್ನೆಲೆ ಸ್ವಾಮೀಜಿಗಳೊಂದಿಗೆ ಚರ್ಚೆ

KannadaprabhaNewsNetwork |  
Published : May 15, 2025, 01:30 AM IST
14ಕೆಎಂಎನ್ ಡಿ15 | Kannada Prabha

ಸಾರಾಂಶ

ಮಳವಳ್ಳಿ ಪಟ್ಟಣದಲ್ಲಿ 1066ನೇ ಆದಿ ಜಗದ್ಗುರು ಶಿವರಾತ್ರೀಶ್ವರ ಶಿವಯೋಗಿಗಳ ಜಯಂತಿ ಮಹೋತ್ಸವವನ್ನು ಡಿ.18ರಿಂದ ಆಚರಿಸುವ ಸಂಬಂಧ ವೀರಶೈವ ಲಿಂಗಾಯತ ಸಮುದಾಯದ ನಿಯೋಗ ಕನಕಪುರ ದೇಗುಲ ಮಠಾಧ್ಯಕ್ಷ ಡಾ.ಮುಮ್ಮಡಿ ನಿರ್ವಾಣ ಸ್ವಾಮೀಜಿ ಹಾಗೂ ಕಿರಿಯ ಚನ್ನಬಸವಸ್ವಾಮಿ ಅವರನ್ನು ಭೇಟಿ ಮಾಡಿ ಯಶ್ವಸಿಗೊಳಿಸಬೇಕೆಂದು ಕೋರಿದರು.

ಕನ್ನಡಪ್ರಭ ವಾರ್ತೆ ಮಳವಳ್ಳಿ

ಪಟ್ಟಣದಲ್ಲಿ 1066ನೇ ಆದಿ ಜಗದ್ಗುರು ಶಿವರಾತ್ರೀಶ್ವರ ಶಿವಯೋಗಿಗಳ ಜಯಂತಿ ಮಹೋತ್ಸವವನ್ನು ಡಿ.18ರಿಂದ ಆಚರಿಸುವ ಸಂಬಂಧ ವೀರಶೈವ ಲಿಂಗಾಯತ ಸಮುದಾಯದ ನಿಯೋಗ ಕನಕಪುರ ದೇಗುಲ ಮಠಾಧ್ಯಕ್ಷ ಡಾ.ಮುಮ್ಮಡಿ ನಿರ್ವಾಣ ಸ್ವಾಮೀಜಿ ಹಾಗೂ ಕಿರಿಯ ಚನ್ನಬಸವಸ್ವಾಮಿ ಅವರನ್ನು ಭೇಟಿ ಮಾಡಿ ಯಶ್ವಸಿಗೊಳಿಸಬೇಕೆಂದು ಕೋರಿದರು.

ಕನಕಪುರ ದೇಗುಲ ಮಠಕ್ಕೆ ಜಯಂತಿ ಆಚರಣೆ ಸಂಚಾಲಕ ಪ್ರೊ.ಪಿ.ಎಂ.ಮಹದೇವಸ್ವಾಮಿ ಹಾಗೂ ತಾಲೂಕು ವೀರಶೈವ ಮಹಾಸಭಾದ ನೇತೃತ್ವದಲ್ಲಿ ನೂರಾರು ಮುಖಂಡರು ತೆರಳಿ ಮುಮ್ಮಡಿ ನಿರ್ವಾಣ ಮಹಾಸ್ವಾಮಿ ಅವರನ್ನು ಭೇಟಿ ಮಾಡಿ ಶಿವರಾತ್ರೀಶ್ವರ ಶಿವಯೋಗಿಗಳರವರ ಜಯಂತಿ ಮಹೋತ್ಸವದ ನೇತೃತ್ವದ ದಿವ್ಯಸಾನಿಧ್ಯ ವಹಿಸುವುದರೊಂದಿಗೆ ಮಾರ್ಗದರ್ಶನ ನೀಡುವಂತೆ ಕೋರಿದರು.

ಚನ್ನಬಸವಸ್ವಾಮಿ ಮಾತನಾಡಿ, ಜಯಂತಿ ಸಂಬಂಧ ಪ್ರತಿಯೊಬ್ಬರು ಒಂದೊಂದು ಜವಾಬ್ದಾರಿ ತೆಗೆದುಕೊಂಡು ಯಶಸ್ವಿಯಾಗಿ ಪೂರೈಸಬೇಕು. ಎಲ್ಲಾ ಸಮುದಾಯದ ಜನರು ಜಯಂತಿಯಲ್ಲಿ ಭಾಗವಹಿಸುವಂತೆ ಪ್ರಚಾರ ನೀಡಬೇಕು. ಪೂರ್ವಭಾವಿ ಸಭೆ ನಡೆಸಿ ಒಮ್ಮತದ ನಿರ್ಣಾಯಗಳನ್ನು ಕೈಗೊಳ್ಳಬೇಕೆಂದು ಸಲಹೆ ನೀಡಿದರು.

1066ನೇ ಆದಿಜಗದ್ಗುರು ಶಿವರಾತ್ರೀಶ್ವರ ಶಿವಯೋಗಿಗಳರವರ ಜಯಂತಿ ಅಂಗವಾಗಿ ಮೇ 24ರಂದು ಬೆಳಗ್ಗೆ 10.30ಕ್ಕೆ ಪಟ್ಟಣದ ಶ್ರೀಬಸವೇಶ್ವರ ಪತ್ತಿನ ಸಹಕಾರ ಸಂಘದ ಭವನದಲ್ಲಿ ಪೂರ್ವಭಾವಿ ಸಭೆ ನಡೆಸಲು ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಸಭೆಗೆ ಪಕ್ಷಾತೀತ ಮತ್ತು ಜಾತ್ಯತೀತವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಚರ್ಚೆ ನಡೆಸಿ ಎಂದು ಶುಭ ಕೋರಿದರು.

ಸಭೆಯಲ್ಲಿ ತಾಲೂಕು ವೀರಶೈವ ಮಹಾಸಭಾದ ಪದಾಧಿಕಾರಿಗಳು, ಎಲ್ಲ ಪಕ್ಷಗಳ ಸಮುದಾಯದ ಮುಖಂಡರು ಪಕ್ಷಾತೀತವಾಗಿ ಭಾಗವಹಿಸಿದ್ದರು.

ನಾಳೆ ಡೆಂಘೀ ನಿಯಂತ್ರಣ ಕುರಿತು ಜಾಗೃತಿ ಜಾಥಾ

ಮಂಡ್ಯ: ರಾಷ್ಟ್ರೀಯ ಡೆಂಘೀ ದಿನಾಚಾರಣೆ ಪ್ರಯುಕ್ತ ಮೇ 16 ರಂದು ಎಸ್.ಡಿ. ಜಯರಾಮ್ ಪ್ಯಾರಾಮೆಡಿಕಲ್ ವಿಜ್ಞಾನ ಸಂಸ್ಥೆ ಮತ್ತು ಸದ್ವಿದ್ಯಾ ಪ್ಯಾರಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳಿಂದ ನಗರದ ಜಯಚಾಮರಾಜ ಒಡೆಯರ್ ವೃತ್ತ ದಿಂದ ಬೆಂಗಳೂರು, ಮೈಸೂರು ಮುಖ್ಯ ರಸ್ತೆ ಮುಖಾಂತರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿವರಗೆ ಡೆಂಘೀ ನಿಯಂತ್ರಣ ಜಾಗೃತಿ ಜಾಥಾ ಮತ್ತು ಮಾನವ ಸರಪಳಿ ಕಾರ್ಯಕ್ರಮವನ್ನು ಹಮ್ಮಿಕೋಳಲಾಗಿದೆ. ಕಾರ್ಯಕ್ರಮವನ್ನು ಶಾಸಕ ಪಿ.ರವಿಕುಮಾರ್ ಉದ್ಘಾಟಿಸಲಿದ್ದಾರೆ. ಜಿಲ್ಲಾಧಿಕಾರಿಗಳು ಹಾಗೂ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಭಾಗವಹಿಸಲಿದ್ದಾರೆ.

PREV

Recommended Stories

ಧರ್ಮಸ್ಥಳ ಗ್ರಾಮ ಕೇಸ್‌ ರೀತಿ ಶ್ವಾನ ಮೂಳೆ ಪತ್ತೆಗೆ ಎಸ್‌ಐಟಿ?
ಎಸ್ಸೆಸ್ಸೆಲ್ಸಿ- ಪಿಯು : ಈ ವರ್ಷವೂ 3 ಪರೀಕ್ಷೆ ಉದ್ದೇಶ ಫೇಲ್‌