ಕನ್ನಡಪ್ರಭ ವಾರ್ತೆ ಮಂಡ್ಯ
ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಮಂಡ್ಯ ವಿವಿ ಪ್ರಭಾರ ಕುಲಪತಿಗಳ ಕಾನೂನು ಬಾಹಿರ ನೇಮಕಾತಿ, ವಿವಿಯಲ್ಲಿನ ಅಕ್ರಮಗಳ ಆಡಳಿತಕ್ಕೆ ಸಂಬಂಧಿಸಿದಂತೆ ಲೋಕಭವನ ಹಾಗೂ ಸರ್ಕಾರದ ಗಮನ ಸೆಳೆಯಲಾಗಿತ್ತು ಎಂದರು.
ಸರ್ಕಾರವು ಕಳೆದ ಮೇ 30 ರಂದು ತನಿಖೆಗೆ ಆದೇಶಿಸಿ 10 ದಿನಗೊಳಗಾಗಿ ವರದಿ ನೀಡುವಂತೆ 2ನೇ ಬಾರಿಗೆ ಉನ್ನತ ಶಿಕ್ಷಣ ಪರಿಷತ್ತಿನ ಉಪಾಧ್ಯಕ್ಷರಿಗೆ ನಿರ್ದೇಶನ ನೀಡಿದೆ. ಸರ್ಕಾರದ ಬಳಿ ಎಲ್ಲ ಮಾಹಿತಿ ಲಭ್ಯವಿದ್ದು, ವಿವಿ ಕಾಯ್ದೆಗೆ ವಿರುದ್ಧವಾಗಿ ನೇಮಕಗೊಂಡಿದ್ದ ಪ್ರೊ. ಶಿವಚಿತ್ತಪ್ಪರನ್ನು ವಜಾ ಮಾಡಬೇಕೆಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಒತ್ತಾಯಿಸಿದರು.ರಾಜ್ಯಪಾಲರ ವಿಶೇಷ ಕಾರ್ಯದರ್ಶಿಗಳು ಪತ್ರ ಬರೆದು ಡೀನ್‌ಗಳ ಜೇಷ್ಠತಾ ಪಟ್ಟಿಯನ್ನು ಸಲ್ಲಿಸುವಂತೆ ಕಳೆದ ಮಾ.13ರಂದು ಕೋರಿದ್ದರಿಂದ ಮಂಡ್ಯ ವಿವಿಯ ಕುಲಸಚಿವ (ಆಡಳಿತ) ಅವರು ಡೀನ್‌ಗಳ ಜೇಷ್ಠತಾ ಪಟ್ಟಿಯನ್ನು ಲೋಕಭವನಕ್ಕೆ ಸಲ್ಲಿಸಿದ್ದಾರೆ. ನನ್ನ ದೂರಿನ ಪತ್ರದ ಆಧಾರದ ಮೇಲೆ ಪ್ರೊ.ಶಿವಚಿತ್ತಪ್ಪ ಅವರ ಪ್ರಭಾರ ಕುಲಪತಿಗಳ ನೇಮಕಾತಿ ಸಂಬಂಧ ಉನ್ನತ ಶಿಕ್ಷಣ ಇಲಾಖೆ ಕಾರ್ಯದರ್ಶಿಯವರ ಕಚೇರಿಯಿಂದ ಲೋಕಭವನಕ್ಕೆ ಮಂಡ್ಯ ವಿವಿಯಲ್ಲಿ ಇರುವ ಕಾಯಂ ಪ್ರಾಧ್ಯಾಪಕರ ಜೇಷ್ಠತಾ ಪಟ್ಟಿಯನ್ನು ಕಳುಹಿಸಿ ಪ್ರೊ.ಶಿವಚಿತ್ತಪ್ಪರವರು ಜೇಷ್ಠತಾ ಪಟ್ಟಿಯಲ್ಲಿ 6ನೇಯವರಾಗಿರುವುದನ್ನು ಸೂಚಿರುತ್ತಾರೆ ಎಂದರು.
ರಾಜ್ಯಪಾಲರಿಗೆ ನಾನು ವೈಯಕ್ತಿಕವಾಗಿ 5 ಪತ್ರ ಹಾಗೂ ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಅವರಿಗೂ ಒಂದು ಪತ್ರ ಬರೆದು ಮಂಡ್ಯ ವಿವಿ ಪ್ರಭಾರ ಕುಲಪತಿ ಪ್ರೊ.ಶಿವಚಿತ್ತಪ್ಪರ ಕಾನೂನುಬಾಹಿರ ನೇಮಕಾತಿ ಮತ್ತು ಅವರ ಆಡಳಿತ ಲೋಪದೋಷಗಳನ್ನು ತಿಳಿಸಿದರೂ ಸಹ ಇದುವರೆಗೂ ಯಾವುದೇ ಕ್ರಮಕೈಗೊಳ್ಳದೇ ಇರುವುದು ಲೋಕಭವನದ ಕೆಲವು ಅಧಿಕಾರಿಗಳು ಈ ಭ್ರಷ್ಟಾಚಾರಕ್ಕೆ ಶಾಮೀಲಾಗಿದ್ದಾರೆ ಎಂಬುದು ವಿವಿ ಪ್ರಾಧ್ಯಾಪಕರ ಹಾಗೂ ಜನಸಾಮಾನ್ಯರ ಮಾತಿಗೆ ಸಾಕ್ಷಿಯಾಗಿದೆ ಎಂದು ಹೇಳಿದರು.
ರಾಜ್ಯಪಾಲರು ಮತ್ತು ರಾಜ್ಯಪಾಲರ ವಿಶೇಷ ಕಾರ್ಯದರ್ಶಿಗೆ ಪತ್ರ ಬರೆದಿದ್ದರೂ ಯಾವುದೇ ಕ್ರಮವಹಿಸಿಲ್ಲ. ಮಾಹಿತಿ ನೀಡದೇ ಇದ್ದ ಪಕ್ಷದಲ್ಲಿ ತಮ್ಮ ರಾಜ್ಯಪಾಲರ ಕಚೇರಿಗೆ ನಾನು ಬರೆದಿರುವ 5 ಪತ್ರಗಳಲ್ಲಿನ ವಿವರಗಳನ್ನು ರಾಷ್ಟ್ರಪತಿಗಳ ಅವಗಾಹನೆಗೂ ತರಲಾಗುವುದು ಎಂದು ಮರಿತಿಬ್ಬೇಗೌಡರು ತಿಳಿಸಿದರು.
ಮುಖ್ಯಮಂತ್ರಿಗೂ ಮನವಿ ಸಲ್ಲಿಕೆ: