ದೇಶಕ್ಕೆ ಭವಿಷ್ಯದ ಭದ್ರ ಬುನಾದಿ ಎಂದರೆ ಯುವಜನತೆ, ಈ ಯುವಜನರು ರಸ್ತೆ ಸುರಕ್ಷತಾ ನಿಯಮಗಳ ಪಾಲಿಸದೇ ಅನಾಗರಿಕ ವರ್ತನೆ, ತಿಳಿವಳಿಕೆ ಕೊರತೆ ಹಾಗೂ ಪೋಷಕರ ಮಾತುಗಳ ಕೇಳದೆ ಮನ ಬಂದತೆ ದ್ವಿಚಕ್ರ ವಾಹನಗಳ ಅತಿ ವೇಗವಾಗಿ ಓಡಿಸಿ ಅಪಘಾತಕ್ಕೆ ಈಡಾಗುತ್ತಿದ್ದಾರೆ. ದಿನೇ ದಿನೇ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತೆ ವಿನಾ ಕಡಿಮೆ ಆಗುತ್ತಿಲ್ಲ. ಹೀಗಾಗಿ ಎಲ್ಲರೂ ರಸ್ತೆ ಸುರಕ್ಷತಾ ನಿಯಮಗಳ ಅನುಸರಿಸಬೇಕು.
ಕನ್ನಡಪ್ರಭ ವಾರ್ತೆ ಹೊಳೆಹೊನ್ನೂರು
ಸಂಚಾರಿ ನಿಯಮಗಳ ಪಾಲಿಸುವುದರಿಂದ ರಸ್ತೆ ಅಪಘಾತಗಳು ಕಡಿಮೆಯಾಗುತ್ತವೆ ಎಂದು ಪಟ್ಟಣದ ಪೊಲೀಸ್ ಠಾಣೆಯ ಸಿಪಿಐ ರಾಮಚಂದ್ರ ನಾಯಕ್ ಹೇಳಿದರು.ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಾಲೇಜು ಶಿಕ್ಷಣ ಇಲಾಖೆ, ಶಿವಮೊಗ್ಗ ಜಿಲ್ಲಾ ಪೊಲೀಸ್ ಉಪವಿಭಾಗ ಮತ್ತು ಗ್ರಾಮಾಂತರ ಪೊಲೀಸ್ ಠಾಣೆ ವತಿಯಿಂದ ನಡೆದ ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮದಲ್ಲಿ ಮಾತನಾಡಿ, ದೇಶಕ್ಕೆ ಭವಿಷ್ಯದ ಭದ್ರ ಬುನಾದಿ ಎಂದರೆ ಯುವಜನತೆ, ಈ ಯುವಜನರು ರಸ್ತೆ ಸುರಕ್ಷತಾ ನಿಯಮಗಳ ಪಾಲಿಸದೇ ಅನಾಗರಿಕ ವರ್ತನೆ, ತಿಳಿವಳಿಕೆ ಕೊರತೆ ಹಾಗೂ ಪೋಷಕರ ಮಾತುಗಳ ಕೇಳದೆ ಮನ ಬಂದತೆ ದ್ವಿಚಕ್ರ ವಾಹನಗಳ ಅತಿ ವೇಗವಾಗಿ ಓಡಿಸಿ ಅಪಘಾತಕ್ಕೆ ಈಡಾಗುತ್ತಿದ್ದಾರೆ ಎಂದರು.
ದಿನೇ ದಿನೇ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತೆ ವಿನಾ ಕಡಿಮೆ ಆಗುತ್ತಿಲ್ಲ. ಹೀಗಾಗಿ ಎಲ್ಲರೂ ರಸ್ತೆ ಸುರಕ್ಷತಾ ನಿಯಮಗಳ ಅನುಸರಿಸಬೇಕು. ಎಲ್ಲರೂ ವಾಹನ ಚಾಲನಾ ಪರವಾನಗಿ ಪಡೆದುಕೊಳ್ಳಬೇಕು. ಲೈಸೆನ್ಸ್ ಇರುವ ವಾಹನಗಳ ಓಡಿಸಬೇಕು. ಬೈಕ್ ಓಡಿಸುವಾಗ ಮೊಬೈಲ್ ಫೋನ್ ಬಳಸಬಾರದು. ಪ್ರತಿಯೊಬ್ಬರು ಹೆಲ್ಮೆಟ್ ಧರಿಸಿ ವಾಹನ ನಡೆಸಬೇಕು ಎಂದು ಹೇಳಿದರು.
ಹೆಣ್ಣು ಮಕ್ಕಳು ಪೋಕ್ಸೋ ಕಾಯ್ದೆಯ ನಿಯಮಗಳ ಅರಿಯಬೇಕು. ಮೊಬೈಲ್ ಯುವ ಪೀಳಿಗೆಯ ಡ್ರಗ್ಸ್ ಆಗಿದೆ. ವಿದ್ಯಾರ್ಥಿಗಳು ಅತಿ ಹೆಚ್ಚು ಮೊಬೈಲ್ ಗಳ ನೋಡುವುದು ಬಿಟ್ಟು ತರಗತಿ ಪಾಠ ಪ್ರವಚನ ಅಭ್ಯಾಸ ಹಾಗೂ ಪರೀಕ್ಷೆ ಇವುಗಳ ಬಗ್ಗೆ ಸದಾ ಎಚ್ಚರದಿಂದ ಇರಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯ ಕಾಲೇಜಿನ ಪ್ರಾಂಶುಪಾಲರಾದ ಡಾ.ಕೆ.ಆರ್.ಪ್ರತಿಭಾ ವಹಿಸಿದ್ದರು. ಡಾ ಪಿ.ಭಾರತಿ ದೇವಿ, ಡಾ ಎಸ್. ರಾಜುನಾಯ್ಕ್, ಡಾ.ಕೆ. ಛಾಯಾಶ್ರೀ, ಡಾ.ಎಸ್.ನಾಗರಾಜ್ ನಾಯ್ಕ್, ಡಾ.ಸಂಗೀತ ಬಗಲಿ, ಎಚ್.ಎನ್.ಗಣೇಶ್, ಕುಮಾರ್, ಮೆಹಬೂಬ್ ಹಾಗೂ ಎಸ್.ರುದ್ರಮುನಿ ಸೇರಿ ಇತರರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.