- ಎಸ್‌ಎಸ್ ಕೇರ್ ಟ್ರಸ್ಟ್ ಯೂತ್ ವಿಂಗ್ ಸ್ಪಂದನೆ - - - ದಾವಣಗೆರೆ: ಕೇರಳದ ವಯನಾಡು ಭೂಕುಸಿತ ಸಂತ್ರಸ್ತರಿಗೆ ದಾವಣಗೆರೆ ಸಂಸದೆ, ಬಾಪೂಜಿ ವಿದ್ಯಾಸಂಸ್ಥೆ ಆಡಳಿತ ಮಂಡಳಿ ಸದಸ್ಯೆ ಡಾ.ಪ್ರಭಾ ಮಲ್ಲಿಕಾರ್ಜುನ ಅವರ ಸೂಚನೆಯಂತೆ ಎಸ್.ಎಸ್. ಕೇರ್ ಟ್ರಸ್ಟ್ ಯೂತ್ ವಿಂಗ್‌ನಿಂದ ಬಾಪೂಜಿ ವಿದ್ಯಾಸಂಸ್ಥೆ ನೌಕರರ ಸಹಕಾರದೊಂದಿಗೆ ನೆರವಿನ ಹಸ್ತ ಚಾಚಲಾಗಿದೆ.
ಸುಮಾರು 230 ಅಕ್ಕಿ ಪ್ಯಾಕೆಟ್, ಬೇಳೆ, ಎಣ್ಣೆ ಪ್ಯಾಕೆಟ್‌ಗಳು, 500 ನೀರಿನ ಬಾಟಲುಗಳು, ಟೂತ್ ಪೇಸ್ಟ್, ಬ್ರೆಶ್, ಟಿಶ್ಯೂ, ಫೇಸ್ ವೈಪ್ಸ್, ಡೆಟಾಲ್ ಸೇರಿದಂತೆ 100 ಹೈಜಿನ್ ಕಿಟ್, 150 ಪ್ಯಾಕ್‌ಗಳಷ್ಟು ಮಹಿಳೆಯರಿಗೆ ಸ್ಯಾನಿಟರಿ ನ್ಯಾಪ್‌ಕಿನ್ಸ್, ಡೈಪರ್ಸ್, 359 ಬಾಕ್ಸ್ ಪ್ರಥಮ ಚಿಕಿತ್ಸೆ ಬಾಕ್ಸ್‌ಗಳು, ಔಷಧಿ, ಮಾತ್ರೆಗಳು, 170 ಬ್ಯಾಗ್ ಬಟ್ಟೆ, ಬ್ಲಾಕೆಂಟ್ಟ್‌ಗಳು, ಬೆಡ್ ಶೀಟ್‌ಗಳು, 20 ಸ್ಯಾನಿಟರಿ ಐಟಂಗಳು, ಬುಕ್ಸ್, ಪೆನ್, ಸ್ಕೆಚ್ ಪೆನ್ಸ್, 200 ಸೆಟ್ ಗೃಹೋಪಯೋಗಿ ವಸ್ತುಗಳಾ ಬಕೆಟ್, ಮ್ಯಾಟ್ಸ್, ಮಗ್ಸ್, ಕ್ಯಾರಿ ಬ್ಯಾಗ್‌ಗಳು, 50 ಕಿಟ್ ಸರ್ವೈವಲ್ ಕಿಟ್ಸ್‌ಗಳಲ್ಲಿ ಬ್ಯಾಟರಿ, ಫ್ಲ್ಯಾಶ್ ಲೈಟ್ಸ್, ಸೊಳ್ಳೆ ಪರದೆಗಳು ಇತರೆ ತುರ್ತು ಅಗತ್ಯದ ವಸ್ತುಗಳನ್ನು ದಾವಣಗೆರೆಯಿಂದ ರವಾನೆ ಮಾಡಲಾಯಿತು. ಭೂಕುಸಿತವಾದ ವಯನಾಡು ಭಾಗದ ವಿವಿಧ ಪ್ರದೇಶಗಳಲ್ಲಿ ಅಗತ್ಯ ವಸ್ತುಗಳನ್ನು ಪೂರೈಸಲು ಸಂಸದೆ ಸೂಚನೆಯಂತೆ ವ್ಯವಸ್ಥೆ ಮಾಡಲಾಗಿದೆ.
- - - -10ಕೆಡಿವಿಜಿ5, 6:ಕೇರಳದ ವಯನಾಡು ಭೂಕುಸಿತ ಸಂತ್ರಸ್ಥರ ನೆರವಿಗೆ ದಾವಣಗೆರೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನರ ಸೂಚನೆಯಂತೆ ಅಗತ್ಯ ವಸ್ತುಗಳನ್ನು ರವಾನೆ ಮಾಡಲಾಯಿತು.