ಗದಗ: ಮಾಧ್ಯಮ ಮಿತ್ರರು ಕ್ರಿಕೆಟ್ ಲೀಗ್ ಆಡುವ ಉತ್ಸಾಹ ತೋರಿದ್ದು, ಹಿರಿಯರನ್ನು ಕಿರಿಯರನ್ನಾಗಿ ಮಾಡುವಂತಾಗಿದೆ. ಮಾಧ್ಯಮ ಕ್ಷೇತ್ರದಲ್ಲಿ ಇದೊಂದು ಉತ್ತಮ ಬೆಳವಣಿಗೆಯಾಗಿದೆ ಎಂದು ಶಾಸಕ ಎಚ್.ಕೆ. ಪಾಟೀಲ ತಿಳಿಸಿದರು.
ಇತ್ತೀಚೆಗೆ ಕ್ರಿಕೆಟ್ ಬಹಳಷ್ಟು ಜನಪ್ರಿಯವಾಗುತ್ತಿದೆ. ಆಡುವ ಸಂದರ್ಭದಲ್ಲಿ ಆಟಗಾರರು ಹಾಕಿಕೊಳ್ಳುವ ಸಮವಸ್ತ್ರದಿಂದ ತಮಗಷ್ಟೆ ಅಲ್ಲದೇ ತಮ್ಮ ಮಕ್ಕಳಿಗೆ ಹಾಗೂ ಮೊಮ್ಮಕ್ಕಳಿಗೆ ಹೆಚ್ಚು ಸಂತೋಷ ನೀಡುತ್ತದೆ. ಇದೊಂದು ರೀತಿ ಮನರಂಜನೆ ಆಗಿದೆ. ಮೈದಾನದಲ್ಲಿ ತೋರಿಸುವ ಕ್ರೀಡಾ ಮನೋಭಾವ ವೃತ್ತಿಯಲ್ಲೂ ಹೆಚ್ಚು ತೋರುವಂತಾಗಲಿ. ಕ್ರೀಡೆಗಳಿಂದ ಹೆಚ್ಚು ಎತ್ತರಕ್ಕೆ ಹೋಗಲು ಎಲ್ಲರಿಂದಲೂ ಸಾಧ್ಯವಿದೆ ಎಂದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ರಾಜು ಹೆಬ್ಬಳ್ಳಿ ಮಾತನಾಡಿ, ಜಿಲ್ಲೆಯ ಕಾರ್ಯನಿರತ ಪತ್ರಕರ್ತರಿಗಾಗಿ ಜಿಲ್ಲಾ ಸಂಘದ ವತಿಯಿಂದ ಇದೇ ಮೊದಲ ಬಾರಿಗೆ ಕ್ರಿಕೆಟ್ ಲೀಗ್ ಆಯೋಜನೆ ಮಾಡಿದೆ. ಲೀಗ್‌ನಲ್ಲಿ ವಿಜೇತ ತಂಡಗಳಿಗೆ ಜಿಲ್ಲಾ ಸಂಘದಿಂದ ಮೊದಲ ಬಹುಮಾನವಾಗಿ ₹5,555 ನಗದು, ಟ್ರೋಫಿ ಹಾಗೂ ದ್ವಿತೀಯ ಬಹುಮಾನವಾಗಿ ₹3,333 ನಗದು ಮತ್ತು ಟ್ರೋಫಿ ನೀಡಲಾಗುತ್ತಿದೆ ಎಂದರು.ಈ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರುಡಗಿ, ಜಿಲ್ಲಾ ವಾರ್ತಾಧಿಕಾರಿ ವಸಂತ ಮಡ್ಲೂರ, ರವಿಕಾಂತ ಅಂಗಡಿ, ದೇವಪ್ಪ ಲಿಂಗದಾಳ, ಶರಣು ದೊಡ್ಡೂರ, ಅರುಣಕುಮಾರ ಹಿರೇಮಠ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ್ ಬಬರ್ಚಿ, ಅಶೋಕ ಮಂದಾಲಿ, ಸಿದ್ದು ಪಾಟೀಲ, ತಂಡಗಳ ಮಾಲೀಕರಾದ ಜಗದೀಶ್ ಎಸ್ಪಿ, ಅಜಿತ ಹೊಂಬಾಳಿ, ಎಚ್.ಎಂ. ಶರೀಫನವರ್, ಶಿವಕುಮಾರ ಕುಷ್ಟಗಿ, ಆನಂದ ಸಾಲಿಗ್ರಾಮ, ಆನಂದಯ್ಯ ವಿರಕ್ತಮಠ, ಅನಂತ ಕಾರ್ಕಳ, ಟಿ.ಎನ್. ಬಾಂಡಗೆ, ಸುನಿಲ ತೆಂಬದಮನಿ, ಅನಿಲ ತೆಂಬದಮನಿ ಸೇರಿದಂತೆ ಹಲವರು ಇದ್ದರು.