ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಪಟ್ಟಣದ ತಾಲೂಕು ಆಡಳಿತ ಸೌಧದಲ್ಲಿ ಕಡತ ವಿಲೇವಾರಿ ನಡೆಸಿ ಮಾತನಾಡಿ, ಮುಂದಿನ ದಿನಗಳಲ್ಲಿ ಸಾರ್ವಜನಿಕರ ಹಿತದೃಷ್ಟಿಯಿಂದ ತಾಲೂಕಿಗೆ ಸಂಬಂಧಿಸಿದ ಎ.ಸಿ.ನ್ಯಾಯಾಲಯದ ಎಲ್ಲಾ ಕಡತಗಳನ್ನು ಪ್ರತಿ ಶುಕ್ರವಾರ ಪಟ್ಟಣದ ತಾಲೂಕು ಆಡಳಿತ ಸೌಧದಲ್ಲಿ ನ್ಯಾಯಾಲಯದ ಕಲಾಪ ನಡೆಸಿ ಇತ್ಯರ್ಥ ಪಡಿಸುತ್ತೇನೆ ಎಂದರು.
ಎ.ಸಿ ಕಚೇರಿಯಲ್ಲಿನ ಕಡತಗಳ ವಿಲೇವಾರಿಗಾಗಿ ಇಲ್ಲಿನ ಜನ ಪಾಂಡವಪುರದ ಎ.ಸಿ.ಕಚೇರಿಗೆ ಬರುವ ಅಗತ್ಯವಿಲ್ಲ. ನ್ಯಾಯಾಲಯದ ಕಲಾಪದ ಜೊತೆಗೆ ಪ್ರತಿ ಶುಕ್ರವಾರ ಸಾರ್ವಜನಿಕರ ಸಮಸ್ಯೆಗಳ ಪರಿಹಾರಕ್ಕೂ ನಾನು ಲಭ್ಯನಿರುತ್ತೇನೆ ಎಂದರು.ತಾಲೂಕಿನ ರೈತರು ಹಾಗೂ ಸಾರ್ವಜನಿಕರು ಕಂದಾಯ ಇಲಾಖೆಯಲ್ಲಿನ ಯಾವುದೇ ಸಮಸ್ಯೆಗಳಿದ್ದರೂ ಪ್ರತಿ ಶುಕ್ರವಾರ ತಾಲೂಕು ಆಡಳಿತಕ್ಕೆ ಸೌಧಕ್ಕೆ ಆಗಮಿಸಿ ನನ್ನನ್ನು ಭೇಟಿ ಮಾಡಬಹುದು ಎಂದರು.
ಯಾವುದೇ ಕಡತಗಳು ಕಚೇರಿಯಲ್ಲಿ ವಿಲೇ ಆಗದೆ ಉಳಿಯಬಾರದು. ಇಂದು 150 ಕಡತಗಳನ್ನು ಪರಿಶೀಲಿಸಿ ವಿಲೇ ಮಾಡಲಾಗಿದೆ. ಕಂದಾಯ ಇಲಾಖೆಯಲ್ಲಿ ಶೇ.10 ರಷ್ಟು ಕಾರ್ಯಲೋಪವಿಬಹುದು. ಆದರೆ, ಶೇ.90 ರಷ್ಟು ಒಳ್ಳೆಯ ಕೆಲಸ ಆಗಿದೆ ಎಂದರು.
ಈ ವೇಳೆ ತಹಸೀಲ್ದಾರ್ ಲೆಪ್ಟಿನೆಂಟ್ ಕರ್ನಲ್ ಡಾ.ಎಸ್.ಯು ಅಶೋಕ್, ಗ್ರೇಡ್-.2 ತಹಸೀಲ್ದಾರ್ ಬಿ.ಆರ್.ಲೋಕೇಶ್, ಉಪ ತಹಸೀಲ್ದಾರ್ ರವಿ, ಲಕ್ಷ್ಮೀಕಾಂತ್, ಜಿಲ್ಲಾ ಗ್ರಾಮ ಆಡಳಿತಾಧಿಕಾರಿಗಳ ಸಂಘದ ಅಧ್ಯಕ್ಷ ಹರೀಶ್ ಸೇರಿದಂತೆ ಕಂದಾಯ ಇಲಾಖೆಯ ಸಿಬ್ಬಂದಿ ಇದ್ದರು.