ಸೈಟ್‌ ವಿಚಾರಕ್ಕೆ ಗಲಾಟೆ: ಪೊಲೀಸ್‌ಸೇರಿ 7 ಮಂದಿ ವಿರುದ್ಧ ಎಫ್ಐಆರ್‌

KannadaprabhaNewsNetwork |  
Published : Oct 08, 2026, 03:45 AM IST
Youth Congress | Kannada Prabha

ಸಾರಾಂಶ

ಮಾರಕಾಸ್ತ್ರಗಳೊಂದಿಗೆ ಬಂದ 25ಕ್ಕೂ ಹೆಚ್ಚು ಮಂದಿ ದುಷ್ಕರ್ಮಿಗಳು ಬಡ ಕುಟುಂಬದ ಮೇಲೆ ದಾಳಿ ನಡೆಸಿರುವ ಘಟನೆ ಹುಳಿಮಾವು ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಘಟನೆಯಲ್ಲಿ ಮೂವರು ಗಾಯಗೊಂಡಿದ್ದಾರೆ.

ಕನ್ನಡಪ್ರಭವಾರ್ತೆ ಬೆಂಗಳೂರು

ಮಾರಕಾಸ್ತ್ರಗಳೊಂದಿಗೆ ಬಂದ 25ಕ್ಕೂ ಹೆಚ್ಚು ಮಂದಿ ದುಷ್ಕರ್ಮಿಗಳು ಬಡ ಕುಟುಂಬದ ಮೇಲೆ ದಾಳಿ ನಡೆಸಿರುವ ಘಟನೆ ಹುಳಿಮಾವು ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಘಟನೆಯಲ್ಲಿ ಮೂವರು ಗಾಯಗೊಂಡಿದ್ದಾರೆ.

ನಿವೇಶನ ವಿಚಾರಕ್ಕೆ ಈ ಗಲಾಟೆ ನಡೆದಿದ್ದು, ರಾಜಕೀಯ ಮುಖಂಡ ಮತ್ತು ಪೊಲೀಸ್‌ ಅಧಿಕಾರಿ ವಿರುದ್ಧ ಬಡ ಕುಟುಂಬ ಸದಸ್ಯರ ಮೇಲೆ ಹಲ್ಲೆ ನಡೆಸಿದ ಆರೋಪ ಕೇಳಿ ಬಂದಿದೆ. ಹಲ್ಲೆ ಹಾಗೂ ಕೊಲೆಗೆ ಯತ್ನಿಸಿದ ಆರೋಪದಲ್ಲಿ ಪೊಲೀಸ್‌ ಅಧಿಕಾರಿ ಸೇರಿ ಏಳು ಮಂದಿ ವಿರುದ್ಧ ಹುಳಿಮಾವು ಪೊಲೀಸ್‌ ಠಾಣೆಯಲ್ಲಿ ಎಫ್‌ಐಆ‌ರ್ ದಾಖಲಾಗಿದೆ.

ಪ್ರಕರಣದ ವಿವರ:

ಹೊಮ್ಮದೇವನಹಳ್ಳಿಯ ನಿವಾಸಿ ಫಾತಿಮಾ ಎಂಬುವರು ನೀಡಿದ ದೂರಿನನ್ವಯ ಪೊಲೀಸ್‌ ಅಧಿಕಾರಿ ಕಿಶೋರ್ ಕುಮಾರ್, ಸಹಚರರಾದ ಅನಿಲ್ ಕುಮಾ‌ರ್, ನಾಗರಾಜ್, ನಂಜುಂಡ ರೆಡ್ಡಿ, ನಾಗವೇಣಿ, ಅಜಯ್, ಪ್ರವೀಣ್ ಕುಮಾರ್ ವಿರುದ್ಧ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಿಶೋರ್ ಕುಮಾರ್ ಅವರು ಪೊಲೀಸ್‌ ತರಬೇತಿ ಕೇಂದ್ರವೊಂದರಲ್ಲಿ ಡಿವೈಎಸ್‌ಪಿಯಾಗಿ ಪ್ರಸ್ತುತ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಹೊಮ್ಮದೇವನಹಳ್ಳಿಯ ಜ್ಞಾನಬಿಂದು ಶಾಲೆಯ ಬಳಿ 2004ರಲ್ಲಿ ಮುನಿರೆಡ್ಡಿ ಅವರಿಗೆ ಸೇರಿದ ನಿವೇಶನವನ್ನು ಫಾತಿಮಾ ಖರೀದಿಸಿ ಆ ಸ್ಥಳದಲ್ಲಿ ಮನೆ ನಿರ್ಮಿಸಿಕೊಂಡು ವಾಸವಿದ್ದರು. ಅ.4ರ ರಾತ್ರಿ 11 ಗಂಟೆಯ ಸುಮಾರಿಗೆ 25 ರಿಂದ 30 ಜನರ ಗುಂಪು ನಮ್ಮ ಮನೆಗೆ ಬಂದು ಗಲಾಟೆ ನಡೆಸಿ ಮಾರಕಾಸ್ತ್ರ ಹಾಗೂ ದೊಣ್ಣೆ, ಕಲ್ಲುಗಳಿಂದ ಹಲ್ಲೆ ನಡೆಸಿದ್ದಾರೆ ಎಂದು ದೂರುದಾರರಾದ ಫಾತಿಮಾ ಆರೋಪಿಸಿದ್ದಾರೆ. ಪತಿ ಕಾಣಿಕ್ಯರಾಜ್, ಮಗ ಬಾಲರಾಜ್, ನವೀನ್‌ಕುಮಾರ್ ಹಾಗೂ ಸೊಸೆ ನಕ್ಷತ್ರ ಮೇರಿ ಅವರ ಮೇಲೆ ಆರೋಪಿಗಳು ಹಲ್ಲೆ ನಡೆಸಿದ್ದಾರೆ. ಆಸ್ತಿ ವಿಚಾರ ಸಂಬಂಧ ಈ ಹಿಂದೆಯೂ ಪ್ರಕರಣ ದಾಖಲಾಗಿತ್ತು. ಸಿವಿಲ್ ನ್ಯಾಯಾಲಯದಲ್ಲಿ ತಡೆ ಆದೇಶ ಸಿಕ್ಕಿದೆ. ಯಾವ ಕಾರಣಕ್ಕೆ ನ್ಯಾಯಾಲಯದಿಂದ ತಡೆ ಆದೇಶ ತಂದಿದ್ದೀರಿ ಎಂದು ಪ್ರಶ್ನಿಸಿ ಆರೋಪಿಗಳು ಹಲ್ಲೆ ನಡೆಸಿದ್ದಾರೆ ಎಂದು ಫಾತಿಮಾ ದೂರಿನಲ್ಲಿ ಆರೋಪಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಫುಟ್‌ಪಾತ್‌ನಲ್ಲಿದ ಟೀಸಿ ಸ್ಫೋಟ: ಪಾದಚಾರಿಗೆ ಗಾಯ
ರೋಹಿತ್ ಆತ್ಮಹತ್ಯೆ ಖಂಡಿಸಿ ಧರಣಿ:15 ವಿದ್ಯಾರ್ಥಿಗಳ ಮೇಲಿನ ಕೇಸ್‌ ರದ್ದು