ಮಹಾನ್‌ನಾಯಕರಿಗೆ ಅಗೌರವ:ಅಧಿಕಾರಿಯ ಅಮಾನತಿಗೆ ಆಗ್ರಹ

KannadaprabhaNewsNetwork |  
Published : Jul 07, 2025, 11:48 PM IST
07ಕೆಪಿಡಿವಿಡಿ01: | Kannada Prabha

ಸಾರಾಂಶ

ಮಾಜಿ ಉಪಪ್ರಧಾನಿ ಡಾ.ಬಾಬು ಜಗಜೀವನರಾಮ್‌ರವರ ಪುಣ್ಯತಿಥಿಯಂದು ಪೂಜೆ, ಮಾಲಾರ್ಪಣೆ ಮಾಡದೇ, ಸ್ವಗ್ರಾಮ ಕಲಬುರಗಿಗೆ ಹೋಗಿರುವ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ರಾಜಕುಮಾರ ಡೋಣಿರನ್ನು ಕೂಡಲೇ ಅಮಾನತುಗೊಳಿಸಬೇಕೆಂದು ದಲಿತ ಪರ ಸಂಘಟನೆಗಳ ಒಕ್ಕೂಟ ಒತ್ತಾಯಿಸಿದೆ.

ಕನ್ನಡಪ್ರಭ ವಾರ್ತೆ ದೇವದುರ್ಗ

ಮಾಜಿ ಉಪಪ್ರಧಾನಿ ಡಾ.ಬಾಬು ಜಗಜೀವನರಾಮ್‌ರವರ ಪುಣ್ಯತಿಥಿಯಂದು ಪೂಜೆ, ಮಾಲಾರ್ಪಣೆ ಮಾಡದೇ, ಸ್ವಗ್ರಾಮ ಕಲಬುರಗಿಗೆ ಹೋಗಿರುವ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ರಾಜಕುಮಾರ ಡೋಣಿರನ್ನು ಕೂಡಲೇ ಅಮಾನತುಗೊಳಿಸಬೇಕೆಂದು ದಲಿತ ಪರ ಸಂಘಟನೆಗಳ ಒಕ್ಕೂಟ ಒತ್ತಾಯಿಸಿದೆ.

ವಿವಿಧ ಸಂಘಟನೆ ಪದಾಧಿಕಾರಿಗಳು ಮಿನಿ ವಿಧಾನಸೌಧದಲ್ಲಿ ಸೋಮವಾರ ಮನವಿ ಸಲ್ಲಿಸಿದರು. ಪ್ರತಿಭಟನಾ ಕಾರ್ಯಕ್ರಮವನ್ನು ಉದ್ದೇಶಿಸಿ ಮುಖಂಡರಾದ ಹನುಮಂತಪ್ಪ ಮನ್ನಾಪೂರಿ, ಸಾಬಣ್ಣ ಕಮಲದಿನ್ನಿ, ಶಿವರಾಜ ರುದ್ರಾಕ್ಷಿ, ಶಿವಪ್ಪ ಪಲಕನಮರಡಿ, ಶಿವಪ್ಪ ಕೊಪ್ಪರ ಮಾತನಾಡಿ, 2021ರಲ್ಲಿ ಎಸ್ಎಫ್‌ಸಿ ಅನುದಾನದ ₹15ಲಕ್ಷ ವೆಚ್ಚದಲ್ಲಿ ಬಾಬೂಜಿ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿದೆ. ಪ್ರತಿ ಜನ್ಮದಿನ ಹಾಗೂ ಪುಣ್ಯತಿಥಿಗಳಂದು ಪುರಸಭೆಯಿಂದ ಸ್ವಚ್ಛಗೊಳಿಸಿ, ತಾಲೂಕು ಆಡಳಿತದಿಂದ ಗೌರವಿಸಿ ನಮನ ಸಲ್ಲಿಸುವುದು ಸಮಾಜ ಕಲ್ಯಾಣ ಇಲಾಖೆ ಜವಾಬ್ದಾರಿ. ಆದರೆ, ಈ ಬಾರಿ ತಹಸೀಲ್ದಾರ ಚನ್ನಮಲ್ಲಪ್ಪ ಘಂಟಿ, ಇಲಾಖೆ ಸಹಾಯಕ ನಿರ್ದೇಶಕ ರಾಜಕುಮಾರ ಡೋಣಿ ಹಾಗೂ ಪುರಸಭೆ ಮುಖ್ಯಾಧಿಕಾರಿ ಹಂಪಯ್ಯ ಕೆ. ಗೈರು ಆಗಿರುವುದಲ್ಲದೇ, ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದಿರುವುದು ವಿಷಾದದ ಸಂಗತಿಯಾಗಿದೆ.

ಎಸ್ಸಿ,ಎಸ್ಟಿ ಪ್ರಕರಣಗಳು ದಾಖಲಾದರೂ ಗಮನ ಹರಿಸುತ್ತಿಲ್ಲ. ಬೇರೆ ಇಲಾಖೆಯಿಂದ ಸಮಾಜ ಕಲ್ಯಾಣ ಇಲಾಖೆಗೆ ನಿಯೋಜನೆಗೊಂಡ ಹಿನ್ನಲೆಯಲ್ಲಿ ಇಂಥ ಅವಘಡಗಳು ಪದೇ, ಪದೇ ಜರುಗುತ್ತಿವೆ. ಕೂಡಲೇ ಕರ್ತವ್ಯ ಲೋಪ ಹಾಗೂ ಬೇಜವಾಬ್ದಾರಿ ಹೊಂದಿರುವ ಅಧಿಕಾರಿಗಳನ್ನು ಕೂಡಲೇ ಅಮಾನತುಗೊಳಿಸಬೇಕೆಂದು ಸಂಘಟನೆ ಮುಖಂಡರು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಸಂಘಟನೆ ಮುಖಂಡರಾದ ಶಿವಪ್ಪ ಬಲ್ಲಿದವ, ಶಿವಪ್ಪ ಚಪ್ಪಳಕಿ, ಬಸವರಾಜ ಅಕ್ಕರಕಿ, ಯಲ್ಲಪ್ಪ ಆಲ್ದರ್ತಿ, ಮಲ್ಲಿಕಾರ್ಜುನ ಗಾಣದಾಳ, ರಮೇಶ ರಾಮನಾಳ, ಮಲ್ಲಪ್ಪ ಗೌಡೂರು, ದೇವರಾಜ ಅಕ್ಕರಕಿ, ಪ್ರದೀಪ, ಶಿವುಕುಮಾರ, ಅರ್ಜುನ ಕೊಪ್ಪರ ಹಾಗೂ ಇತರರು ಇದ್ದರು.

PREV