ಸಾರಿಗೆ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಪರದಾಟ

KannadaprabhaNewsNetwork |  
Published : Sep 08, 2026, 01:15 AM IST
ಯಾದಗಿರಿ ಬಂದ್‌ ಹಿನ್ನೆಲೆಯಲ್ಲಿ ಶಹಾಪುರ, ಸುರಪುರ, ಕಲಬುರಗಿ ವಡಗೇರಾ ಸೇರಿದಂತೆ ವಿವಿಧಡೆಗಳಿಂದ ಆಗಮಿಸಿದ ಬಸ್ ಗಳು ನಗರದಿಂದ 3-4 ಕಿಮೀ ದೂರವೇ ನಿಲ್ಲಿಸಿದ್ದರಿಂದ ಸಾವಿರಾರು ಪ್ರಯಾಣಿಕರು ನಗರ ಸೇರಲು ಪರದಾಡಿದರು.  | Kannada Prabha

ಸಾರಾಂಶ

ಜಿಲ್ಲೆಯಾದ್ಯಂತ ಬಂದ್‌ ಹಿನ್ನೆಲೆಯಲ್ಲಿ ನಗರದ ಪ್ರಮುಖ ಸ್ಥಳಗಳಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿತ್ತು. ಶಹಾಪುರ, ಸುರಪುರ, ಕಲಬುರಗಿ ವಡಗೇರಾ ಸಹಿತ ವಿವಿಧಡೆಗಳಿಂದ ಆಗಮಿಸಿದ ಬಸ್ ಗಳು ನಗರದಿಂದ 3-4 ಕಿಮೀ ದೂರವೇ ನಿಲ್ಲಿಸಿದ್ದರಿಂದ ಸಾವಿರಾರು ಪ್ರಯಾಣಿಕರು ನಗರ ಸೇರಲು ಪರದಾಡಿದರು.

ಕನ್ನಡಪ್ರಭ ವಾರ್ತೆ ಯಾದಗಿರಿ

ಜಿಲ್ಲೆಯಾದ್ಯಂತ ಬಂದ್‌ ಹಿನ್ನೆಲೆಯಲ್ಲಿ ನಗರದ ಪ್ರಮುಖ ಸ್ಥಳಗಳಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿತ್ತು. ಶಹಾಪುರ, ಸುರಪುರ, ಕಲಬುರಗಿ ವಡಗೇರಾ ಸಹಿತ ವಿವಿಧಡೆಗಳಿಂದ ಆಗಮಿಸಿದ ಬಸ್ ಗಳು ನಗರದಿಂದ 3-4 ಕಿಮೀ ದೂರವೇ ನಿಲ್ಲಿಸಿದ್ದರಿಂದ ಸಾವಿರಾರು ಪ್ರಯಾಣಿಕರು ನಗರ ಸೇರಲು ಪರದಾಡಿದರು.

ಸಾರಿಗೆ ಸಂಚಾರದಲ್ಲಿ ಒಂದೆರಡು ತಾಸು ವ್ಯತ್ಯಯ ಉಂಟಾಗಿದ್ದರಿಂದ ಅನೇಕ ಪ್ರಯಾಣಿಕರ ಬಸ್ ನಿಲ್ದಾಣದಲ್ಲಿಯೇ ಕಾದು ಕುಳಿತರು. ಪರ ಊರುಗಳಿಂದ ಆಗಮಿಸಿದ ಅನೇಕರು ಕಚೇರಿ, ಆಸ್ಪತ್ರೆಗಳಿಗೆ ತೆರಳಲು ಸಕಾಲಕ್ಕೆ ಆಟೋ, ನಗರ ಸಾರಿಗೆ ಬಸ್ ಇಲ್ಲದೆ ತೊಂದರೆ ಪಟ್ಟರು.

ಯಾದಗಿರಿ ಜಿಲ್ಲೆಯ ಗುರುಮಠಕಲ್, ವಡಗೇರಾ, ಯಾದಗಿರಿ, ಸುರಪುರ ಮತ್ತು ಹುಣಸಗಿ ತಾಲೂಕುಗಳನ್ನು ಕೂಡಲೇ ಬರಪೀಡಿತ ಪ್ರದೇಶಗಳೆಂದು ಘೋಷಣೆ ಮಾಡಬೇಕು. ಎಸ್‌ಡಿಆರ್‌ಎಫ್‌ ಮತ್ತು ಎನ್‌ಡಿಆರ್‌ಎಫ್‌ ಮಾನದಂಡದ ಪ್ರಕಾರ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ನೀಡುವ ಬೆಳೆ ಪರಿಹಾರಕ್ಕಿಂತ ಹೆಚ್ಚಿನ ಪರಿಹಾರ ನೀಡಬೇಕು. ಬರಗಾಲದಿಂದ ಬೆಳೆ ನಷ್ಟ ಅನುಭವಿಸಿರುವ ರೈತರ ಸಾಲವನ್ನು, ರಾಷ್ಟ್ರೀಯ ಮತ್ತು ಸಹಕಾರ ಬ್ಯಾಂಕ್‌ಗಳಲ್ಲಿರುವ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು. ರೈತರ ಪ್ರತಿ ಹೆಕ್ಟರ್ ಪ್ರದೇಶಕ್ಕೆ 50 ಸಾವಿರ ರು. ಪರಿಹಾರ ನೀಡಬೇಕು ಎಂದು ರೈತರು ಸರ್ಕಾರಕ್ಕೆ ಒತ್ತಾಯಿಸಿದರು.

ಮನವಿ ಸ್ವೀಕರಿಸಿದ ಡಿಸಿ ಪಾಂಡ್ವೆ: ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಡಿಸಿ ರಾಹುಲ್ ಪಾಂಡ್ವೆ ಹೋರಾಟಗಾರರಿಂದ ಮನವಿ ಸ್ವೀಕರಿಸಿ, ಕೂಡಲೇ ಸರ್ಕಾರಕ್ಕೆ ಕಳುಹಿಸಿಕೊಡಲಾಗುವುದು. ನಿಮ್ಮ ಹೋರಾಟದ ಕಳಕಳಿಯನ್ನು ಸರ್ಕಾರದ ಗಮನಕ್ಕೆ ತರಲಾಗುವುದು ಎಂದರು. ಕಲಬುರಗಿ ವಲಯ ಐಜಿಪಿ ಶಾಂತನು ಸಿನ್ಹಾ, ಹೆಚ್ಚುವರಿ ಎಸ್‌.ಪಿ ಧರಣೇಶ, ಡಿವೈಎಸ್‌ಪಿ ಸುರೇಶ ನಾಯಕ, ಭರತಕುಮಾರ ತಳವಾರ, ಸಿಪಿಐ ಅಕ್ಕಮಹಾದೇವಿ ಬಿರಾದಾರ ಸಹಿತ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಕ್ಕಳು ಧರ್ಮ-ಸಂಸ್ಕಾರದಿಂದ ದೂರ: ಎಲೆರಾಂಪುರ ಶ್ರೀ
ಗುತ್ತಿಗೆದಾರರ ಸಂಘಕ್ಕೆ ಕಾಟಿಹಳ್ಳಿ ಕರಿಯಪ್ಪ ಅಧ್ಯಕ್ಷ