ಸುರಪುರ: ಸೆ.16ಕ್ಕೆ ‘ಕಲ್ಯಾಣದಲ್ಲಿ ಕ್ಷೀರ ಕ್ರಾಂತಿ’ ಸಮಾರಂಭ

KannadaprabhaNewsNetwork |  
Published : Sep 08, 2026, 01:15 AM IST
ಸುರಪುರದಲ್ಲಿ ನಡೆಯಲಿರುವ ‘ಕಲ್ಯಾಣದಲ್ಲಿ ಕ್ಷೀರ ಕ್ರಾಂತಿ’ ಸಮಾರಂಭದ ಆಮಂತ್ರಣ ಪತ್ರಿಕೆಯನ್ನು ಶಾಸಕ ರಾಜಾ ವೇಣುಗೋಪಾಲ ನಾಯಕ ಬಿಡುಗಡೆಗೊಳಿಸಿದರು. ಕಲಬುರಗಿಯ ಕೆವೈಡಿಸಿಸಿ ಬ್ಯಾಂಕ್ ಅಧ್ಯಕ್ಷ ವಿಠ್ಠಲ ವಿ.ಯಾದವ, ತಾಲೂಕು ವಾಲ್ಮೀಕಿ ನಾಯಕ ಸಂಘದ ಅಧ್ಯಕ್ಷ ಭೀಮನಗೌಡ ಹೇಮನೂರ ಸೇರಿದಂತೆ ಅನೇಕ ಮಖಂಡರು ಉಪಸ್ಥಿತರಿದ್ದರು. | Kannada Prabha

ಸಾರಾಂಶ

ದಿ.ರಾಜಾ ವೆಂಕಟಪ್ಪ ನಾಯಕ ಸ್ಮರಣಾರ್ಥ ಕುಂಬಾರಪೇಟೆಯ ಗಂಜ್ ಜೈ ಸೀತಾರಾಮ ರೈತ ಉತ್ಪಾದಕ ಸಂಸ್ಥೆಯ ಆಶ್ರಯದಲ್ಲಿ ಕಲ್ಯಾಣದಲ್ಲಿ ಹಮ್ಮಿಕೊಂಡಿರುವ ಕ್ಷೀರ ಕ್ರಾಂತಿ ಕುಟುಂಬಕ್ಕೊಂದು ಹಸು ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ಸೆ.16 ರಂದು ಬೆಳಗ್ಗೆ 10ಕ್ಕೆ ನಗರದ ಗರುಡಾದ್ರಿ ಕಲಾಮಂದಿರದಲ್ಲಿ ಜರುಗಲಿದೆ.

ಕನ್ನಡಪ್ರಭ ವಾರ್ತೆ ಸುರಪುರ

ದಿ.ರಾಜಾ ವೆಂಕಟಪ್ಪ ನಾಯಕ ಸ್ಮರಣಾರ್ಥ ಕುಂಬಾರಪೇಟೆಯ ಗಂಜ್ ಜೈ ಸೀತಾರಾಮ ರೈತ ಉತ್ಪಾದಕ ಸಂಸ್ಥೆಯ ಆಶ್ರಯದಲ್ಲಿ ಕಲ್ಯಾಣದಲ್ಲಿ ಹಮ್ಮಿಕೊಂಡಿರುವ ಕ್ಷೀರ ಕ್ರಾಂತಿ ‘ಕುಟುಂಬಕ್ಕೊಂದು ಹಸು’ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ಸೆ.16 ರಂದು ಬೆಳಗ್ಗೆ 10ಕ್ಕೆ ನಗರದ ಗರುಡಾದ್ರಿ ಕಲಾಮಂದಿರದಲ್ಲಿ ಜರುಗಲಿದೆ.

ಈ ಹಿನ್ನೆಲೆಯಲ್ಲಿ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಸುರಪುರ ಶಾಸಕ ರಾಜಾ ವೇಣುಗೋಪಾಲ ನಾಯಕ ಭಾನುವಾರ ಶಾಸಕರ ಕಚೇರಿಯಲ್ಲಿ ಬಿಡುಗಡೆಗೊಳಿಸಿದರು. ಕ್ಷೀರೋತ್ಪಾದನೆ ಹೆಚ್ಚಿಸುವುದು, ರೈತರ ಆರ್ಥಿಕ ಸಬಲೀಕರಣ ಹಾಗೂ ಹೈನುಗಾರಿಕೆಗೆ ಉತ್ತೇಜನ ನೀಡುವ ಉದ್ದೇಶದಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ

ವೈದ್ಯಕೀಯ ಶಿಕ್ಷಣ, ಕೌಶಾಲ್ಯಾಭಿವೃದ್ಧಿ ಸಚಿವ ಹಾಗೂ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಸಮಾರಂಭ ಉದ್ಘಾಟಿಸಲಿದ್ದು, ಶಾಸಕ ರಾಜಾ ವೇಣುಗೋಪಾಲ ನಾಯಕ ಅಧ್ಯಕ್ಷತೆ ವಹಿಸಲಿದ್ದಾರೆ. ರುಕ್ಮಾಪುರದ ಷ.ಬ್ರ. ಗುರುಶಾಂತಮೂರ್ತಿ ಶಿವಾಚಾರ್ಯ ಮಹಾಸ್ವಾಮಿ ಹಾಗೂ ಶ್ರೀಗಿರಿ ಷ.ಬ್ರ. ಡಾ.ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸುವರು.

ಲಾಂಛನ ಬಿಡುಗಡೆ: ಬಲವಂತ ಬಹರಿ ಬಹಾದ್ದೂರ ಸಂಸ್ಥಾನ ಸುರಪುರದ ಅರಸ ಡಾ.ರಾಜಾ ಕೃಷ್ಣಪ್ಪನಾಯಕ, ಶಹಾಪುರ ಶಾಸಕ ಹಾಗೂ ಮಾಜಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಘನ ಉಪಸ್ಥಿತಿ ವಹಿಸಲಿದ್ದಾರೆ. ರಾಯಚೂರು ಸಂಸದ ಜಿ.ಕುಮಾರನಾಯಕ ಲಾಂಛನ ಬಿಡುಗಡೆಗೊಳಿಸಲಿದ್ದು, ಪಶು ಸಂಗೋಪನೆ ಮತ್ತು ರೇಷ್ಮೆ ಸಚಿವ ಸಿ.ಪುಟ್ಟರಂಗಶೆಟ್ಟಿ ಸಾಧಕರನ್ನು ವಿಶೇಷವಾಗಿ ಸನ್ಮಾನಿಸಲಿದ್ದಾರೆ.

ಯಾದಗಿರಿ ಶಾಸಕ ಚನ್ನಾರೆಡ್ಡಿ ಪಾಟೀಲ ತನ್ನೂರ, ಗುರಮಠಕಲ್ ಶಾಸಕ ಶರಣಗೌಡ ಕಂದಕೂರ, ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲದ ಕುಲಪತಿ ಡಾ.ಎಂ. ಹನುಮಂತಪ್ಪ, ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಅಧ್ಯಕ್ಷ ಆರ್.ಕೆ.ಪಾಟೀಲ, ಯಾದಗಿರಿ ಜಿಲ್ಲಾಧಿಕಾರಿ ಪಾಂಡ್ವೆ ರಾಹುಲ ತುಕಾರಾಮ, ಯಾದಗಿರಿ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜುಬಿನ್ ಮೊಹಾಪಾತ್ರ, ಪೊಲೀಸ್ ವರಿಷ್ಠಧಿಕಾರಿ ಪೃಥ್ವೀಕ್ ಶಂಕರ, ಕುರುಬೂರು ಶಾಂತಕುಮಾರ, ಗುರುದೇವ ನಾರಾಯಣಕುಮಾರ, ವಿಠ್ಠಲ್ ಯಾದವ, ದೊಡ್ಡಪ್ಪ ಶರಣಬಸಪ್ಪ ನಿಷ್ಠಿ, ಯಲ್ಲಪ್ಪ ಹೆಚ್. ಮಲ್ಲಿಭಾವಿ, ಸುರೇಶ ಆರ್.ಸಜ್ಜನ್ ಸೇರಿದಂತೆ ಅಧಿಕಾರಿಗಳು, ಜನಪ್ರತಿನಿಧಿಗಳು, ರೈತ ಮುಖಂಡರು ಹಾಗೂ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಆಯೋಜಕರು ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಕ್ಕಳು ಧರ್ಮ-ಸಂಸ್ಕಾರದಿಂದ ದೂರ: ಎಲೆರಾಂಪುರ ಶ್ರೀ
ಗುತ್ತಿಗೆದಾರರ ಸಂಘಕ್ಕೆ ಕಾಟಿಹಳ್ಳಿ ಕರಿಯಪ್ಪ ಅಧ್ಯಕ್ಷ