ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ಬಂಡೀಪುರ ಕ್ಯಾಂಪಸ್‌ನ ಸ್ವಾಗತ ಕೇಂದ್ರದ ಆವರಣದಲ್ಲಿ ನಡೆದ ಸಮಾರಂಭದಲ್ಲಿ ಬಂಡೀಪುರ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ನಿರ್ದೇಶಕ ಎಸ್.ಪ್ರಭಾಕರನ್ ನೇತೃತ್ವದಲ್ಲಿ ಬಂಡೀಪುರ, ಗೋಪಾಲಸ್ವಾಮಿ ಬೆಟ್ಟ, ಕುಂದಕೆರೆ ವಲಯದ ಮಂಚೂಣಿ ಕಾರ್ಯಕರ್ತರಿಗೆ ಬ್ಯಾಕ್ ಕಿಟ್ (ವಾಟರ್ ಪ್ರೂಪ್ ಜರ್ಕಿನ್, ಆರ್ಮಿ ಮಾದರಿಯ ಶೂ,ವಾಟರ್ ಕ್ಯಾನ್) ಹಸ್ತಾಂತರಿಸಿದರು.
ರಾಜ್ಯ ವನ್ಯಜೀವಿ ಮಂಡಳಿ ಸದಸ್ಯರೂ ಆದ ಸಚಿವ ಎಂ.ಬಿ.ಪಾಟೀಲ್ ಪುತ್ರ ಧ್ರುವ ಪಾಟೀಲ್ ಮಾತನಾಡಿ, ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ ಹಾಗೂ ಸಚಿವ ಎಂ.ಬಿ.ಪಾಟೀಲ್ ಸೂಚನೆ ಮೇರೆಗೆ ೨ಕೋಟಿ ವೆಚ್ಚದಲ್ಲಿ ರಾಜ್ಯದ ಎಲ್ಲಾ ಹುಲಿ ಸಂರಕ್ಷಿತ ಪ್ರದೇಶದ ೯೭೦೦ ಮುಂಚೂಣಿ ಸಿಬ್ಬಂದಿಗೆ ಬ್ಯಾಕ್ ಕಿಟ್‌ಗಳನ್ನು ನೀಡಲಾಗುತ್ತಿದೆ ಎಂದರು.ಸಾಂಕೇತಿಕವಾಗಿ ಅಷಾಢ ಶುಕ್ರವಾರ ಬಂಡೀಪುರ,ಗೋಪಾಲಸ್ವಾಮಿ ಬೆಟ್ಟ ಹಾಗೂ ಕುಂದಕೆರೆ ವಲಯದ ಮುಂಚೂಣಿ ಸಿಬ್ಬಂದಿಗೆ ಬ್ಯಾಕ್ ಕಿಟ್ ನೀಡಲಾಗಿದೆ ಇನ್ನೂಳಿದ ವಲಯಗಳ ಸಿಬ್ಬಂದಿಗೂ ಸದ್ಯದಲ್ಲೇ ನೀಡಲಾಗುತ್ತದೆ ಎಂದರು. ಅರಣ್ಯ ಇಲಾಖೆಯ ಮುಂಚೂಣಿ ಸಿಬ್ಬಂದಿ ವನ್ಯಜೀವಿಗಳ ಜೊತೆಗೆ ಕಾಡು ರಕ್ಷಿಸುತ್ತಿದ್ದಾರೆ. ಇದನ್ನೆಲ್ಲ ಗಮನಿಸಿ ಸಚಿವ ಎಂ.ಬಿ.ಪಾಟೀಲರ ಗಮನಕ್ಕೆ ತಂದಾಗ ಕೆಎಸ್‌ಡಿಎಲ್‌ನ ಸಿಆರ್‌ಎಫ್ ನಡಿ ಬ್ಯಾಕ್ ಕಿಟ್ ಕೊಡಿಸಲಾಗಿದೆ ಅರಣ್ಯ ಸಿಬ್ಬಂದಿ ಸದುಪಯೋಗ ಪಡಿಸಿಕೊಳ್ಳಿ ಎಂದು ಕಿವಿ ಮಾತು ಹೇಳಿದರು.
ಬಂಡೀಪುರ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎನ್.ಪಿ.ನವೀನ್ ಕುಮಾರ್, ಬಂಡೀಪುರ ವಲಯ ಅರಣ್ಯಾಧಿಕಾರಿ ಮಹದೇವ್, ಗೋಪಾಲಸ್ವಾಮಿ ಬೆಟ್ಟ ವಲಯ ಅರಣ್ಯಾಧಿಕಾರಿ ಬಿ.ಎಂ.ಮಲ್ಲೇಶ್,ಕುಂದಕೆರೆ ವಲಯ ಅರಣ್ಯಾಧಿಕಾರಿ ವೈರಮುಡಿ, ಕೆಎಸ್‌ಡಿಎಲ್‌ನ ಅಧಿಕಾರಿಗಳಾದ ಎಸ್.ಲೋಕೇಶ್, ನಾಗೇಂದ್ರ,ಮನೋಜ್ ಇದ್ದರು.