ಕ್ರಸ್ಟ್‌ಗೇಟ್‌ ಮರುಜೋಡನೆ ಪೂರ್ಣಗೊಂಡ ಕಾಲುವೆಗಳಿಗೆ ಪರೀಕ್ಷಾರ್ಥ ನೀರು

KannadaprabhaNewsNetwork |  
Published : Jun 28, 2025, 12:20 AM IST
ಕೆಂಭಾವಿ ಪಟ್ಟಣದಿಂದ ಹಾದು ಹೋಗಿರುವ ನಾರಾಯಣಪುರ ಎಡದಂಡೆ ಶಾಖಾ (ಎನ್.ಎಲ್.ಬಿ.ಸಿ.) ಮುಖ್ಯ ಕಾಲುವೆಯ ಪ್ರಮುಖ ಮೂರು ಶಾಖಾ ಕಾಲುವೆಗಳ ಕ್ರಸ್ಟ್ಗೇಟುಗಳ ಮರುಜೋಡಣೆ ಕಾರ್ಯ ಪೂರ್ಣಗೊಂಡು, ಸೋಮವಾರ ಕಾಲುವೆಗಳಿಗೆ ಪರೀಕ್ಷಾರ್ಥವಾಗಿ ನೀರು ಹರಿಬಿಡಲಾಯಿತು. | Kannada Prabha

ಸಾರಾಂಶ

ಪಟ್ಟಣದಿಂದ ಹಾದು ಹೋಗಿರುವ ನಾರಾಯಣಪುರ ಎಡದಂಡೆ ಶಾಖಾ (ಎನ್.ಎಲ್.ಬಿ.ಸಿ.) ಮುಖ್ಯ ಕಾಲುವೆಯ ಪ್ರಮುಖ ಮೂರು ಶಾಖಾ ಕಾಲುವೆಗಳ ಕ್ರಸ್ಟ್‌ಗೇಟುಗಳ ಮರುಜೋಡಣೆ ಕಾರ್ಯಕ್ಕೆ ಎರಡು ತಿಂಗಳಿಂದ ನಡೆದಿದ್ದು ಜೂ.23ರ ಸೋಮವಾರದಿಂದ ಕೆಲಸ ಪೂರ್ಣಗೊಂಡ ಕಾಲುವೆಗಳಿಗೆ ಪರೀಕ್ಷಾರ್ಥವಾಗಿ ನೀರು ಹರಿಬಿಡಲಾಗಿದೆ.

3 ಶಾಖಾ ಕಾಲೆವೇಲಿ ಕಾರ್ಯ । 50 ಕಾರ್ಮಿಕರು ಕೆಲಸ

ಕೆಂಭಾವಿ: ಪಟ್ಟಣದಿಂದ ಹಾದು ಹೋಗಿರುವ ನಾರಾಯಣಪುರ ಎಡದಂಡೆ ಶಾಖಾ (ಎನ್.ಎಲ್.ಬಿ.ಸಿ.) ಮುಖ್ಯ ಕಾಲುವೆಯ ಪ್ರಮುಖ ಮೂರು ಶಾಖಾ ಕಾಲುವೆಗಳ ಕ್ರಸ್ಟ್‌ಗೇಟುಗಳ ಮರುಜೋಡಣೆ ಕಾರ್ಯಕ್ಕೆ ಎರಡು ತಿಂಗಳಿಂದ ನಡೆದಿದ್ದು ಜೂ.23ರ ಸೋಮವಾರದಿಂದ ಕೆಲಸ ಪೂರ್ಣಗೊಂಡ ಕಾಲುವೆಗಳಿಗೆ ಪರೀಕ್ಷಾರ್ಥವಾಗಿ ನೀರು ಹರಿಬಿಡಲಾಗಿದ.

ಎನ್.ಎಲ್.ಬಿ.ಸಿ. ಕಾರ್ಯ ನಡೆಸಿದ್ದು ಮೂರು ಗೇಟ್‌ಗಳಲ್ಲಿ ಇಂಡಿ ಹಾಗೂ ಹಳ್ಳಕ್ಕೆ ಹೋಗುವ ಮುಖ್ಯ ಗೇಟ್‌ಗಳನ್ನು ಸಂಪೂರ್ಣ ಬದಲಾವಣೆ ಮಾಡಿ, ನೂತನ ಗೇಟ್ ಜೋಡಣೆ ಮಾಡಿದೆ. ಜೇವರ್ಗಿ ಶಾಖಾ ಕಾಲುವೆಯ ಗೇಟ್ ಒಂದನ್ನು ಮಾತ್ರ ದುರಸ್ತಿಗೊಳಿಸಲಾಗಿದೆ. ಗೇಟ್‌ಗಳ ಜೋಡಣೆಗೆ ಬೃಹತ್ ಕ್ರೇನ್‌ಗಳು ಸೇರಿದಂತೆ ಸುಮಾರು ಐವತ್ತಕ್ಕೂ ಹೆಚ್ಚು ಕಾರ್ಮಿಕರು ಹಗಲಿರುಳು ಕೆಲಸ ನಿರ್ವಹಿಸಿದ್ದಾರೆ.

ಯಾದಗಿರಿ ಜಿಲ್ಲೆ ಸೇರಿದಂತೆ ವಿಜಯಪುರ ಹಾಗೂ ಕಲಬುರಗಿ ಜಿಲ್ಲೆಯ ಭಾಗದ ರೈತರಿಗೆ ನೀರಾವರಿ ಸೌಲಭ್ಯ ಒದಗಿಸಲು ಈ ಗೇಟ್‌ಗಳು ಬಹು ಮುಖ್ಯಪಾತ್ರ ವಹಿಸಲಿದ್ದು ಕಾಲುವೆಯ ನಿರ್ವಹಣೆಯಲ್ಲಿ ಈ ಹಿಂದೆ ಇದ್ದ ಹಳೆಯ ಗೇಟ್‌ಗಳಿಂದ ಸಮಸ್ಯೆ ಉಂಟಾಗಿ ಕೆಲವು ಬಾರಿ ನೀರು ಪೋಲಾಗುತ್ತಿತ್ತು.

ಈ ಸಮಸ್ಯೆ ಅರಿತ ಇಲಾಖೆ ಗೇಟ್ ಸೇರಿದಂತೆ ಇಲ್ಲಿರುವ ಎಲ್ಲ ಯಂತ್ರಗಳನ್ನು ಬದಲಾವಣೆಗೆ ಮಾಡಿದ್ದು ಇದರಿಂದ ಕಾಲುವೆಗೆ ನೀರು ಹರಿಬಿಡುವ ನೂತನ ತಂತ್ರಜ್ಞಾನ ಸ್ಕಾಡಾಕ್ಕೆ ಇದು ಮತ್ತಷ್ಟು ನೆರವಾಗಲಿದೆ. ಈ ಹಿಂದೆ ಇದ್ದ ಗೇಟ್‌ಗಳು ಸರಿಯಾದ ರೀತಿಯಲ್ಲಿ ಕಾರ್ಯ ನಿರ್ವಹಿಸದೆ ಇದ್ದ ಹಿನ್ನೆಲೆಯಲ್ಲಿ ಸ್ಕಾಡಾ ಮೂಲಕ ಕಾಲುವೆಗೆ ನೀರು ಹರಿಸುವಲ್ಲಿ ಅಧಿಕಾರಿಗಳು ಹಾಗೂ ತಾಂತ್ರಿಕ ಸಿಬ್ಬಂದಿ ಹರಸಾಹಸ ಪಡುತ್ತಿದ್ದು ಈ ಬಾರಿ ನೂತನ ಗೇಟ್‌ಗಳ ಅಳವಡಿಕೆಯಿಂದ ಈ ಸಮಸ್ಯೆ ಉಂಟಾಗುವ ಸಾಧ್ಯತೆ ಕಮ್ಮಿ ಎಂದು ಹೇಳಲಾಗುತ್ತಿದೆ.

PREV

Recommended Stories

ಹೆತ್ತವರ ಕನಸು ನನಸಾಗಿಸುವುದೇ ಮಕ್ಕಳ ಗುರಿಯಾಗಿರಲಿ: ಸಚಿವೆ ಹೆಬ್ಬಾಳ್ಕರ್
ರಾಜ್ಯದ ಅರ್ಥ ವ್ಯವಸ್ಥೆ ಆರೋಗ್ಯವಂತವಾಗಿದೆ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್