ಕನ್ನಡಪ್ರಭ ವಾರ್ತೆ ಕಮತಗಿ
ಪಟ್ಟಣದಲ್ಲಿನ ವಿಶ್ವಚೇತನ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಕಮತಪುರ ನಾಡಿನ ಸಮಸ್ತ ಯುವ ಬಳಗದ ವತಿಯಿಂದ ಹಮ್ಮಿಕೊಂಡ ಜನ್ಮದಿನವನ್ನು ಕಮತಪುರ ಯುವಶಕ್ತಿ ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಜನ್ಮದಿನ ನಿಮಿತ್ತ ಪಟ್ಟಣದಲ್ಲಿನ ವಯೋವೃದ್ಧರಿಗೆ ಬಸವ ಕ್ಲಿನಿಕ್ ವೈದ್ಯ ಡಾ. ಈರಣ್ಣ ಕೋಳೂರ ದಂಪತಿ ಉಚಿತವಾಗಿ ಊರುಗೋಲು ವಿತರಿಸಿದರು. ಪಟ್ಟಣದಲ್ಲಿನ ಎಲ್ಲ ಮನೆಗಳಿಗೆ ಶ್ರೀಗಳ ಜನ್ಮದಿನ ಪ್ರಯುಕ್ತ ಸಿಹಿ ವಿತರಿಸಲಾಯಿತು. ಇದೇ ವೇಳೆ ಕಮತಪುರ ಯುವರತ್ನ- 2025ರ ಪ್ರಶಸ್ತಿಯನ್ನು ಶಿಕ್ಷಕ ಶಕ್ತಿಶಂಕರ ಬಿಜಾಪೂರ ಅವರಿಗೆ ಪ್ರದಾನ ಮಾಡಲಾಯಿತು.ಪಟ್ಟಣದಲ್ಲಿನ ಸಂಘ-ಸಂಸ್ಥೆಗಳ ಪ್ರತಿನಿಧಿಗಳು, ಹುಚ್ಚೇಶ್ವರ ಧರ್ಮವಾಹಿನಿಯವರು, ಸಮಾಜದ ಗುರುಹಿರಿಯರು ಶ್ರೀಗಳಿಗೆ ಗೌರವಾರ್ಪಣೆ ಸಲ್ಲಿಸಿ ಆಶೀರ್ವಾದ ಪಡೆದರು.
ಜಿಪಂ ಮಾಜಿ ಅಧ್ಯಕ್ಷೆ ಬಾಯಕ್ಕ ಮೇಟಿ, ಶಿವಾಚಾರ ಸಮಾಜದ ಅಧ್ಯಕ್ಷ ಎಂ.ಎಸ್. ಚೌಡಾಪೂರ, ಮುಖಂಡರಾದ ಸಿದ್ರಾಮಪ್ಪ ಕಡ್ಲಿಮಟ್ಟಿ, ಎಸ್.ಎಸ್. ಮಂಕಣಿ, ಎನ್.ಎಲ್. ತಹಶೀಲ್ದಾರ, ಪಪಂ ಮಾಜಿ ಅಧ್ಯಕ್ಷ ಮಹಾಂತೇಶ ಅಂಗಡಿ, ಪಪಂ ಮಾಜಿ ಸದಸ್ಯ ಸಿದ್ದು ಹೊಸಮನಿ, ನಾರಾಯಣ ದೇಶಪಾಂಡೆ, ಬಸವರಾಜ ಕುಂಬಳಾವತಿ, ಹುಚ್ಚೇಶ್ವರ ಧರ್ಮವಾಹಿನಿಯ ಸದಸ್ಯರು ಹಾಗೂ ಕಮತಪುರ ನಾಡಿನ ಸಮಸ್ತ ಗುರುಹಿರಿಯರು, ಯುವಕರು ಇದ್ದರು.